Smart Watch: ಭಾರತದಲ್ಲಿ ಹೊಸ ಫಾಸ್ಟ್​​ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್‌ವಾಚ್ ರಿಲೀಸ್! ಇದರ ಬೆಲೆ, ವೈಶಿಷ್ಟ್ಯತೆಗಳೇನು?

ಸದ್ಯ ಭಾರತದ ಪ್ರಸಿದ್ಧ ಬ್ರ್ಯಾಂಡ್ ಗಳಲ್ಲಿ ಒಂದಾದ ಫಾಸ್ಟ್ರಾಕ್ ತನ್ನ ಹೊಸ ಸರಣಿಯ ವಾಚ್ ಒಂದನ್ನು ಭಾರತದಲ್ಲಿ ಘೋಷಣೆ ಮಾಡಿದೆ. ಅಮೆಜಾನ್ ಪ್ರೈಮ್ ಡೇ ಸೇಲ್ 2022 ಆರಂಭವಾಗುವ ಮುನ್ನವೇ ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್ ವಾಚ್ ಅನ್ನು ಕಂಪನಿ ಭಾರತದಲ್ಲಿ ಗುರುವಾರ ಘೋಷಣೆ ಮಾಡಿದೆ. ಈ ವಾಚ್ ಜುಲೈ 23 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗುವ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಲಭ್ಯವಾಗಲಿದೆ.

ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್‌ವಾಚ್

ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್‌ವಾಚ್

  • Share this:
ಈಗೆಲ್ಲಾ ಸ್ಮಾರ್ಟ್ ವಾಚ್ ಗಳು (Smart Watch) ಸಹ ಹೆಚ್ಚು ಕಮ್ಮಿ ನಮ್ಮ ಮೊಬೈಲ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಮಾರುಕಟ್ಟೆಗೆ ಬರುವ ಹೊಸ ಹೊಸ ಸ್ಮಾರ್ಟ್ ವಾಚ್ ಗಳು ಹತ್ತಾರು ವೈಶಿಷ್ಟ್ಯತೆಗಳೊಂದಿಗೆ (Feature) ಬರುತ್ತಿವೆ. ಸದ್ಯ ಭಾರತದ ಪ್ರಸಿದ್ಧ ಬ್ರ್ಯಾಂಡ್ ಗಳಲ್ಲಿ (Brand) ಒಂದಾದ ಫಾಸ್ಟ್ರಾಕ್ ತನ್ನ ಹೊಸ ಸರಣಿಯ ವಾಚ್ ಒಂದನ್ನು ಭಾರತದಲ್ಲಿ ಘೋಷಣೆ ಮಾಡಿದೆ. ಅಮೆಜಾನ್ ಪ್ರೈಮ್ ಡೇ ಸೇಲ್ 2022 (Amazon Prime Day Sale 2022) ಆರಂಭವಾಗುವ ಮುನ್ನವೇ ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್ ವಾಚ್ ಅನ್ನು ಕಂಪನಿ (Company) ಭಾರತದಲ್ಲಿ ಗುರುವಾರ ಘೋಷಣೆ ಮಾಡಿದೆ. ಈ ವಾಚ್ ಜುಲೈ 23 ರಿಂದ ಪ್ರಾರಂಭವಾಗುವ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಲಭ್ಯವಾಗಲಿದೆ.

ಹಾಗಿದ್ರೆ ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್ ವಾಚ್ ಹೇಗಿದೆ ವಿಶೇಷತೆಗಳೇನು? ಬೆಲೆ ಹೇಗಿದೆ ಎಂಬ ವಿವರಗಳು ಇಲ್ಲಿವೆ.

ಹೇಗಿದೆ ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್ ವಾಚ್ ?
ಫಾಸ್ಟ್ರಾಕ್ನ ಸ್ಮಾರ್ಟ್‌ವಾಚ್ 1.3-ಇಂಚಿನ AMOLED ರೌಂಡ್ ಡಿಸ್ಪ್ಲೇ, ಅಂತರ್ನಿರ್ಮಿತ ಗೇಮಿಂಗ್ ಆಯ್ಕೆ, 7 ದಿನಗಳ ವರೆಗಿನ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. 25ಕ್ಕೂ ಹೆಚ್ಚು ಬಹು-ಕ್ರೀಡಾ ವಿಧಾನಗಳು ಮತ್ತು ಇನ್ನಷ್ಟು ವಿಶೇಷತೆಗಳನ್ನು ಹೊಂದಿದೆ. ಇವುಗಳ ಹೊರತಾಗಿ ಫಿಟ್ ನೆಸ್, ಆರೋಗ್ಯ ವಿಚಾರದಲ್ಲೂ ನಿಮಗೆ ಈ ವಾಚ್ ಉಪಯುಕ್ತವಾಗಲಿದೆ.

ಇದನ್ನೂ ಓದಿ: DOOGEE S89 Pro: 12000mAh ಬ್ಯಾಟರಿ, 8GB RAM! ಕಡಿಮೆ ಬೆಲೆಗೆ ಖರೀದಿಸಿ ಈ ಸ್ಮಾರ್ಟ್​ಫೋನ್

ಭಾರತದಲ್ಲಿ ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಬೆಲೆ
ಫಾಸ್ಟ್ರಾಕ್ನಿಂದ ಹೊಸದಾಗಿ ಅನಾವರಣಗೊಂಡಿರುವ ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್ ವಾಚ್ ಭಾರತದಲ್ಲಿ ರೂ. 7,995 ರೂಗೆ ಲಭ್ಯವಿದೆ. ಆದಾಗ್ಯೂ, ಇದು ಅಮೆಜಾನ್ ವೆಬ್‌ಸೈಟ್‌ನಲ್ಲಿ ಜುಲೈ 23ರಿಂದ ಪ್ರಾರಂಭವಾಗುವ ಅಮೆಜಾನ್ ಪ್ರೈಮ್ ಡೇ 2022ರ ಅವಧಿಯಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಲು ಲಭ್ಯವಿರುತ್ತದೆ. ಅಮೆಜಾನ್ ಪ್ರೈಮ್ ಡೇಯಂದು ಇದೇ ವಾಚ್ 5,995 ರೂಗೆ ಸಿಗಲಿದೆ. ಈ ವಾಚ್ ಕೊಳ್ಳಲು ಬಯಸುವವರು ರಿಯಾಯಿತಿ ದರದಲ್ಲಿ ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಖರೀದಿ ಮಾಡುವುದು ಉತ್ತಮ.

ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ವಾಚ್ ಯಾವೆಲ್ಲಾ ಬಣ್ಣದಲ್ಲಿ ಲಭ್ಯವಿದೆ?
ಖರೀದಿದಾರರಿಗೆ ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ವಾಚ್ ಕಪ್ಪು, ನೀಲಿ, ಕಿತ್ತಳೆ ಮತ್ತು ಗುಲಾಬಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್ ವಾಚ್ ನ ವೈಶಿಷ್ಟ್ಯಗಳು
ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ಸ್ಮಾರ್ಟ್ ವಾಚ್ 1.3-ಇಂಚಿನ AMOLED ಪರದೆಯನ್ನು ಹೊಂದಿದೆ. ಈ ವಾಚ್ ಐಒಎಸ್ ಮತ್ತು ಅಂಡ್ರಾಯ್ಡ್ ಎರಡೂ ಸಾಧನಗಳಿಗೂ ಬೆಂಬಲಿಸುತ್ತದೆ ಅನ್ನುವುದು ವಿಶೇಷವಾಗಿದೆ. ಕ್ರಿಕೆಟ್, ಫುಟ್‌ಬಾಲ್, ಬಾಸ್ಕೆಟ್‌ಬಾಲ್, ಯೋಗ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 25 ಕ್ಕೂ ಹೆಚ್ಚು ಬಹು-ಕ್ರೀಡಾ ವಿಧಾನಗಳೊಂದಿಗೆ ವಾಚ್ ಬರುತ್ತದೆ. ಇದು 100 ಕ್ಕೂ ಹೆಚ್ಚು ಕ್ಲೌಡ್ ವಾಚ್ ಫೇಸ್‌ಗಳನ್ನು ಸಹ ಒಳಗೊಂಡಿದೆ.

ಆರೋಗ್ಯ ಮತ್ತು ಫಿಟ್ನೆಸ್ ಗೆ ಸಂಬಂಧಿಸಿದಂತೆ ಸ್ಮಾರ್ಟ್ ವಾಚ್ ದಿನದ 24 ಗಂಟೆಯೂ ನಿಮ್ಮ ಹೃದಯ ಬಡಿತ ಮಾನಿಟರ್ ಮಾಡುವುದು, ನಿದ್ರೆ ಉತ್ತಮವಾಗಿ ಆಗಿದಿಯೋ ಇಲ್ಲವೋ ಎಂಬುದನ್ನು ಟ್ರ್ಯಾಕ್ ಮಾಡುವುದು ಮತ್ತು ರಕ್ತದ ಆಮ್ಲಜನಕದ ಶುದ್ಧತ್ವ ಮಟ್ಟ (SpO2) ಪರಿಶೀಲನೆ ಸೇರಿ ವಿವಿಧ ಆರೋಗ್ಯ-ಸಂಬಂಧಿತ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಫಾಸ್ಟ್ರಾಕ್ ರಿಫ್ಲೆಕ್ಸ್ ಪ್ಲೇ ವಾಚ್ ಮಲ್ಟಿಸ್ಪೋರ್ಟ್ ಟ್ರ್ಯಾಕರ್, ಮ್ಯೂಸಿಕ್ ಪ್ಲೇಬ್ಯಾಕ್ ನಿಯಂತ್ರಣ, ಕ್ಯಾಮರಾ ನಿಯಂತ್ರಣ, ಇಮೇಲ್ ಮತ್ತು ಸಂದೇಶಗಳು ಮತ್ತು ಹವಾಮಾನ ನವೀಕರಣಗಳನ್ನು ಒಳಗೊಂಡಂತೆ ಅಧಿಸೂಚನೆಗಳ ಎಚ್ಚರಿಕೆಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ:  Google Pixel 6A: ಭಾರತದಲ್ಲಿ ಪಿಕ್ಸೆಲ್ 6A ಬಿಡುಗಡೆ ಮಾಡಿದ Google! ಇದರ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ

ಸ್ಮಾರ್ಟ್ ವಾಚ್ 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು ಕಂಪನಿಯ ಪ್ರಕಾರ ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌ನೊಂದಿಗೆ ಪ್ರಮಾಣೀಕರಿಸಲ್ಪಟ್ಟಿದೆ. ಇದಲ್ಲದೆ, ವಾಚ್ 45 ಗ್ರಾಂ ತೂಕ ಹೊಂದಿದೆ. ಇಷ್ಟೆಲ್ಲಾ ವೈಶಿಷ್ಟ್ಯತೆಯನ್ನು ಹೊಂದಿರುವ ವಾಚ್ ಅನ್ನು ಖರೀದಿಸಲು ನೀವು ಇಂದಿನಿಂದ ಪ್ರಾರಂಭವಾಗುವ ಅಮೆಜಾನ್ ಪ್ರೈಮ್ ಡೇ ಸೇಲ್ ಅನ್ನು ಪರೀಕ್ಷಿಸಬಹುದು.
Published by:Ashwini Prabhu
First published: