• ಹೋಂ
 • »
 • ನ್ಯೂಸ್
 • »
 • ಮೊಬೈಲ್- ಟೆಕ್
 • »
 • Railway Ticket Booking: ಭಾರತೀಯ ರೈಲ್ವೇ ಇಲಾಖೆಯಿಂದ ಹೊಸ ಸೌಲಭ್ಯ! ಇನ್ಮುಂದೆ ವಾಯ್ಸ್​ ಮೂಲಕವೂ ಇ-ಟಿಕೆಟ್​ ಖರೀದಿಸ್ಬಹುದು

Railway Ticket Booking: ಭಾರತೀಯ ರೈಲ್ವೇ ಇಲಾಖೆಯಿಂದ ಹೊಸ ಸೌಲಭ್ಯ! ಇನ್ಮುಂದೆ ವಾಯ್ಸ್​ ಮೂಲಕವೂ ಇ-ಟಿಕೆಟ್​ ಖರೀದಿಸ್ಬಹುದು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತೀಯ ರೈಲ್ವೇ ಇಲಾಖೆಯು ತನ್ನ ರೈಲುಗಳ ಚಲನೆಯ ವೇಗದಷ್ಟೇ ಎಲ್ಲಾ ವ್ಯವಸ್ಥೆಯಲ್ಲೂ ಡಿಜಿಟಲೀಕರಣ ಮಾಡಲು ಮುಂದಾಗಿದೆ. ಇದೀಗ ರೈಲ್ವೇ ಟಿಕೆಟ್​ ಖರೀದಿ ಮಾಡುವವರು ಮುಂದಿನ ದಿನಗಳಲ್ಲಿ ಧ್ವನಿ ಆಧಾರಿತವಾಗಿ ಇ-ಟಿಕೆಟ್​ಗಳನ್ನು ಖರೀದಿ ಮಾಡ್ಬಹುದು.

 • Share this:

  ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಹೊಸ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಯಾಣಿಕರಿಗೆ ಪರಿಚಯಿಸಲು ಮುಂದಾಗಿದೆ. ಈಗಾಗಲೇ ರೈಲು ಇಲಾಖೆಯು ಆಪ್‌ ಮೂಲಕ ಹಾಗೂ ಇನ್ನಿತರೆ ಡಿಜಿಟಲ್ ಮಾರ್ಗಗಳ ಮೂಲಕ ಟಿಕೆಟ್‌ ಬುಕ್‌ (Ticket Bokking) ಮಾಡಲು ಅವಕಾಶ ನೀಡಿತ್ತು. ಅದಾಗ್ಯೂ ಈಗ ಪರಿಚಯಿಸಲಾಗುತ್ತಿರುವ ಹೊಸ ಫೀಚರ್ಸ್‌ ಪ್ರಯಾಣಿಕರ ಪ್ರಯಾಣಕ್ಕೆ ಇನ್ನಷ್ಟು ಸಹಕಾರಿ. ಹೌದು, ಎಷ್ಟೋ ಬಾರಿ ಕೆಲವರಿಗೆ ಈ ಟಿಕೆಟ್​ ಬುಕಿಂಗ್​ಗಾಗಿ ಪರದಾಡಿದ ಸಂದರ್ಭ ಹೆಚ್ಚಿದೆ. ಇನ್ನೂ ಕೆಲವರಿಗೆ ಟಿಕೆಟ್​​ಗಳೇ ಸಿಕ್ಕಿರಲ್ಲ. ಆದರೆ ಇನ್ಮುಂದೆ ರೈಲ್ವೇ ಟಿಕೆಟ್​ ಸಿಸ್ಟಮ್​ನಲ್ಲಿ ಇ-ಟಿಕೆಟ್​ (E-Ticket) ಖರೀದಿಸುವಾಗ ವಾಯ್ಸ್​ ಮೂಲಕ ಕಮಾಂಡ್​ ಮಾಡುವ ಮೂಲಕ ಟಿಕೆಟ್​, ಇದರ ಮಾಹಿತಿ ಎಲ್ಲವನ್ನೂ ಪಡೆಯಬಹುದು.


  ಭಾರತೀಯ ರೈಲ್ವೇ ಇಲಾಖೆಯು ತನ್ನ ರೈಲುಗಳ ಚಲನೆಯ ವೇಗದಷ್ಟೇ ಎಲ್ಲಾ ವ್ಯವಸ್ಥೆಯಲ್ಲೂ ಡಿಜಿಟಲೀಕರಣ ಮಾಡಲು ಮುಂದಾಗಿದೆ. ಇದೀಗ ರೈಲ್ವೇ ಟಿಕೆಟ್​ ಖರೀದಿ ಮಾಡುವವರು ಮುಂದಿನ ದಿನಗಳಲ್ಲಿ ಧ್ವನಿ ಆಧಾರಿತವಾಗಿ ಇ-ಟಿಕೆಟ್​ಗಳನ್ನು ಖರೀದಿ ಮಾಡ್ಬಹುದು.


  ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್ ಎಂದರೇನು? 


  ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್​ನ ಈ ಧ್ವನಿ ಆಧಾರಿತ ಇ-ಟಿಕೆಟ್ ಬುಕಿಂಗ್ ಸೌಲಭ್ಯದ ಮೂಲಕ ಪ್ರಯಾಣಿಕರು ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸುಲಭ ಮತ್ತು ಬಹಳಷ್ಟು ವೇಗದಲ್ಲಿ ಮಾಡಬಹುದಾಗಿದೆ. ಇದಕ್ಕಾಗಿ ಈಗಾಗಲೇ ಪ್ಲಾಟ್‌ಫಾರ್ಮ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರದಲ್ಲಿ'ಆಸ್ಕ್ ದಿಶಾ' (Ask Disha) ಎಂಬ ಫೀಚರ್ಸ್‌ ಅನ್ನು ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿದ್ದು, ಇದರಿಂದ ಯಾವುದೇ ಸಮಯದಲ್ಲೂ ಪ್ರಯಾಣಿಕರು ರೈಲ್ವೇ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಸೇವೆ ಟಿಕೆಟ್​ ನೀಡುವಲ್ಲಿಯೂ ಸಹಕಾರಿಯಾಗಲಿದೆ.


  ಇದನ್ನೂ ಓದಿ: ವಿಷ್ಯ ಗೊತ್ತಾ? ವಾಟ್ಸಾಪ್‌ನಲ್ಲಿ ಜಾಸ್ತಿ ಚಾಟ್ ಮಾಡ್ತಾ ಇರೋದು ಹುಡ್ಗೀರಂತೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ

   ಆಸ್ಕ್​ ದಿಶಾ ಫೀಚರ್​ನ ಪ್ರಯೋಜನಗಳೇನು?


  ಇನ್ನು ಆಸ್ಕ್ ದಿಶಾ 2.0 ನೊಂದಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು, ಗ್ರಾಹಕರು ಚಾಟ್‌ಬಾಟ್‌ಗಾಗಿ ಟೆಕ್ಸ್ಟ್‌ ಅಥವಾ ಧ್ವನಿ ಆಜ್ಞೆಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದ್ದು, ಜೊತೆಗೆ ಪ್ರಯಾಣಿಕರು ಟಿಕೆಟ್‌ಗಳನ್ನು ರದ್ದುಗೊಳಿಸಲು ಹಾಗೂ ರದ್ದುಪಡಿಸಿದ ಟಿಕೆಟ್‌ಗಳ ಮರುಪಾವತಿ ಸ್ಟೇಟಸ್‌ ಅನ್ನು ಪರಿಶೀಲಿಸಲು ಇದನ್ನು ಬಳಕೆ ಮಾಡಬಹುದಾಗಿದೆ. ಹಾಗೆಯೇ ಪ್ಲಾಟ್‌ಫಾರ್ಮ್​​ನಿಂದ ಹಿಡಿದು ಪಿಎನ್‌ಆರ್‌ ಸ್ಟೇಟಸ್​​ವರೆಗೂ ಎಲ್ಲಾ ಮಾಹಿತಿಯನ್ನು ಪ್ರಯಾಣಿಕರು ಪಡೆಯುತ್ತಾರೆ.


  ಹಿಂದಿ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ಲಭ್ಯ


  ಇದಲ್ಲದೆ ಪ್ರಯಾಣಿಕರಿಗೆ ತಮ್ಮ ರೈಲು ಪ್ರಯಾಣದ ಬೋರ್ಡಿಂಗ್ ಮತ್ತು ಸರಿಯಾದ ಮಾರ್ಗವನ್ನು ಬದಲಾಯಿಸಲು ಅವಕಾಶ ಕಲ್ಪಿಸಿಕೊಡಲಿದ್ದು, ಇದರೊಂದಿಗೆ ರೈಲು ಟಿಕೆಟ್‌ಗಳನ್ನು ಮೊದಲೇ ನೋಡಬಹುದು. ಜೊತೆಗೆ ಅದನ್ನು ಪ್ರಿಂಟ್‌ ಸಹ ತೆಗೆದುಕೊಳ್ಳಬಹುದಾಗಿದ್ದು, ಬೇಕಾದವರ ಜೊತೆಗೆ ಶೇರ್‌ ಕೂಡ ಮಾಡಿಕೊಳ್ಳಬಹುದು. ಇನ್ನು ಈ ಆಸ್ಕ್ ದಿಶಾ 2.0 ಹಿಂದಿ ಹಾಗೂ ಇಂಗ್ಲೀಷ್​ ಭಾಷೆಯಲ್ಲಿ ಸೇವೆ ನೀಡಲಿದೆ.
  ಯಾವಾಗಿನಿಂದ ಪ್ರಾರಂಭವಾಗುತ್ತದೆ?


  ರೈಲ್ವೇ ಟಿಕೆಟ್‌ ಬುಕ್‌ ಮಾಡಲು ಹಲವು ಪ್ಲಾಟ್‌ಫಾರ್ಮ್‌ಗಳಿದ್ದರೂ ಹೆಚ್ಚಿನ ಬಳಕೆಯಿಂದಾಗಿ ಹಲವು ಬಾರಿ ಟಿಕೆಟ್‌ ಬುಕ್‌ ಮಾಡಲು ಸಾಧ್ಯವಾಗುವುದಿಲ್ಲ. ಇದರ ನಡುವೆ ಈಗ ಆಸ್ಕ್ ದಿಶಾ ಮೂಲಕವೇ ಟಿಕೆಟ್‌ ಬುಕ್‌ ಮಾಡುವ ಸೌಲಭ್ಯ ಕಲ್ಪಿಸುತ್ತಿರುವುದು ಪ್ರಯಾಣಿಕರಿಗೆ ತೊಂದರೆ ಮುಕ್ತ ಬುಕಿಂಗ್‌ ವ್ಯವಸ್ಥೆಯಾಗಿರಲಿದೆ ಎಂದು ಇಲಾಖೆ ಹೇಳಿದೆ. ಜೊತೆಗೆ ಈ ಫೀಚರ್ಸ್ ಅನ್ನು ನಿರಂತರವಾಗಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ಮೂರು ತಿಂಗಳಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

  Published by:Prajwal B
  First published: