• Home
  • »
  • News
  • »
  • tech
  • »
  • Ola Scooter: ಓಲಾದಿಂದ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್, ರಿಲೀಸ್‌ಗೂ ಮುಂಚೆನೇ ಸಾವಿರಾರು ಬುಕ್ಕಿಂಗ್ಸ್!

Ola Scooter: ಓಲಾದಿಂದ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಲಾಂಚ್, ರಿಲೀಸ್‌ಗೂ ಮುಂಚೆನೇ ಸಾವಿರಾರು ಬುಕ್ಕಿಂಗ್ಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಓಲಾ ಬಿಡುಗಡೆ ಮಾಡುತ್ತಿರುವ ಸ್ಕೂಟರಿನ ಹೆಸರು “Move OS 3". 2021ರಲ್ಲಿ ಮೊದಲ ಬಾರಿ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಬಿಡುಗಡೆ ಮಾಡಿದಾಗ ನೀಡಿದ ಭರವಸೆಯನ್ನು ಈ ಸ್ಕೂಟರ್‌ನಲ್ಲಿ ತರಲಿದೆ

  • Share this:

    ಈಗಿನ ಕಾಲದಲ್ಲಿ ಹೆಚ್ಚಾಗಿ ಈ ವಾಹನಗಳಿಂದಲೇ ಟ್ರಾಫಿಕ್‌ (Traffic) ಸಮಸ್ಯೆಯಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಒಂದು ಮನೆಯಲ್ಲಿ ಈಗ ಕಮ್ಮಿಅಂದರೂ 3 ರಿಂದ 4 ಗಾಡಿಗಳು ಇದ್ದೇ ಇರುತ್ತದೆ ಇದೂ ಕೂಡ ಒಂದು ರೀತಿಯಲ್ಲಿ ಟ್ರಾಫಿಕ್‌ ಸಮಸ್ಯೆಗೆ ಕಾರಣ ಅಂತ ಹೇಳಬಹುದು. ಈಗ ಟ್ರಾಫಿಕ್‌ ಜೊತೆ ಪರಿಸರ ಮಾಲಿನ್ಯ ಕೂಡಾ ಹೆಚ್ಚಾಗುತ್ತಿದೆ. ಇದಕ್ಕಾಗಿ ಜನರೆಲ್ಲರೂ ಎಲೆಕ್ಟ್ರಿಕ್‌ (Electric) ಗಾಡಿಗಳನ್ನೇ ಕೊಳ್ಳುತ್ತಿದ್ದಾರೆ. ಈ ಮಧ್ಯೆ ಓಲಾ (Ola) ಕೂಡ ಒಂದು ಹೊಸದಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ ( Electric Scooter) ಅನ್ನು ನಾಳೆ ಬಿಡುಗಡೆ ಮಾಡುತ್ತಿದೆ.


    ಓಲಾ ನಾಳೆ ಬಿಡುಗಡೆ ಮಾಡುತ್ತಿರುವ ಸ್ಕೂಟರಿನ ಹೆಸರು “Move OS 3̤”̧. ಇದು ಈ ಬಾರಿಯ ಓಲಾದ ಹೊಸ ಮಾದರಿಯ ಸ್ಕೂಟರ್‌ ಅಗಿದ್ದು ಉತ್ತಮ ಗುಣಮಟ್ಟದ್ದಾಗಿದೆ. ಈ ಓಲಾದ Move OS 3.0 ನ ಸಾಫ್ಟ್‌ವೇರ್‌ ಅಪ್ಡೇಟ್‌ ಬಿಡುಗಡೆ ಮಾಡಲು ಇನ್ನೂ ಸ್ವಲ್ಪ ದಿನ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.


    ಇನ್ನು ದೀಪಾವಳಿಯಿಂದ S1 Pro ಮತ್ತು S1 ಎಲೆಕ್ಟ್ರಿಕ್‌ ಸ್ಕೂಟರ್‌ಗಳಿಗೆ ಹೊಸ ಸಾಫ್ಟ್‌ವೇರ್‌ ಅನ್ನು ಹೊರತರಲಾಗುವುದು. 2021ರಲ್ಲಿ ಮೊದಲ ಬಾರಿ ಎಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಬಿಡುಗಡೆ ಮಾಡಿದಾಗ ನೀಡಿದ ಭರವಸೆಯನ್ನು ಈ ಸ್ಕೂಟರ್‌ನಲ್ಲಿ ತರಲಿದೆ ಎಂದು ಭರವಸೆ ನೀಡಿದ್ದಾರೆ. ಹಾಗೆ ಇನ್ನು ಬರುವಂತಹ ಹೊಸತನದೊಂದಿಗೆ ಇದುವರೆಗೆ ಇದ್ದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದೂ ಹೇಳಿದ್ದಾರೆ.


    Move OS 3ನಲ್ಲಿ ಇರುವಂತಹ ವಿಶೇಷ ಫೀಚರ್ಸ್‌


    ಪಾರ್ಟಿ ಮೋಡ್‌


    ಓಲಾ ಇತ್ತೀಚಿಗೆ ಈ ಫೀಚರ್‌ಗೆ ಸಂಬಂಧಿಸಿ ಒಂದು ಟ್ವೀಟ್‌ ಮಾಡಿತ್ತು ಏನೆಂದರೆ ʼMove OS 3 ಫೀಚರ್‌ಗಾಗಿ ರೆಡಿಯಾಗಿರಿ ಅದು ನಿಮಗೆ ಯಾವುದೇ ಸಂದರ್ಭದಲ್ಲಿ ಮತ್ತು ಎಲ್ಲಿಯಾದರೂ ಪಾರ್ಟಿಯನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆʼ ಎಂದು ಟ್ವೀಟ್‌ ಅನ್ನು ಮಾಡಿತ್ತು. ಇನ್ನು ಈ ಫೀಚರ್‌ನ ವಿಶೇಷತೆಯೆಂದರೆ ಈ ಸ್ಕೂಟರ್‌ ಪಾರ್ಟಿ ಮೂಡ್‌ನೊಂದಿಗೆ ಇರುವಾಗ ಇಲ್ಲಿ ಪ್ಲೇ ಮಾಡುವ ಮ್ಯೂಸಿಕ್‌ಗೆ ತಕ್ಕಂತೆ ಇದರಲ್ಲಿ ಲೈಟ್ಸ್‌ ಆನ್‌ ಅಥವಾ ಆಫ್‌ ಅಗುತ್ತದೆ. ಈ ಫೀಚರ್‌ ಅನ್ನು ಟೆಸ್ಲಾದ ವಾಹನಗಳಲ್ಲಿ ಸೇರಿಸಿದ್ದರು.


     New electric scooter launch from Ola thousands of bookings before release
    ಸಾಂದರ್ಭಿಕ ಚಿತ್ರ


    ಇದನ್ನೂ ಓದಿ: ಭಾರತದಲ್ಲಿ ಮತ್ತೆ ಆರಂಭವಾಗಲಿದ್ಯಂತೆ PUBG, ಇನ್ಮುಂದೆ ಏನಿದ್ರು ವಿನ್ನರ್‌ ವಿನ್ನರ್‌ ಚಿಕನ್‌ ಡಿನ್ನರ್!


    ಹಿಲ್‌ ಹೋಲ್ಡ್‌ ಅಸಿಸ್ಟ್‌


    ಓಲಾ ಎಲೆಕ್ಟ್ರಿಕ್‌ ಕೂಡಾ ಈ ಹಿಲ್‌ ಹೋಲ್ಡ್‌ ಅಸಿಸ್ಟ್‌ ಅನ್ನು ಸೇರಿಸಿದೆ. ಈ ಫೀಚರ್‌ ಸ್ಕೂಟರ್‌ಗಳಿಗೆ ಅಗತ್ಯವಾಗಿದೆ. ಏಕೆಂದರೆ ಸ್ಕೂಟರ್‌ಗಳು ಕೆಲವೊಮ್ಮೆ ಮೇಲೆ ಹತ್ತುವಾಗ ಸ್ಕಿಡ್‌ ಆಗುವ ಸಂಭವಗಳಿರುತ್ತದೆ. ಆದರೆ ಈ ಫೀಚರ್‌ ಇದ್ದರೆ ಈ ಸಮಸ್ಯೆಯನ್ನು ನಿವಾರಿಸುತ್ತದೆ.


     New electric scooter launch from Ola thousands of bookings before release
    ಸಾಂದರ್ಭಿಕ ಚಿತ್ರ


    ಎಕ್ಸಲೇಟರ್‌ ಸೌಂಡ್ಸ್‌


    ಹಿಂದಿನ ಬೈಕ್‌ಗಳಿಗಿಂತ ಈ ಸ್ಕೂಟರ್‌ನಲ್ಲಿ ಎಕ್ಸಲೇಟರ್‌ನಲ್ಲಿ ಹೆಚ್ಚು ಅಪ್ಡೇಟ್‌ ಮಾಡಿದ್ದಾರೆ. ಸೌಂಡ್‌ ಅಗಿರ್ಬೋದು, ವೇಗ ಆಗಿರ್ಬೋದು ಇವೆಲ್ಲವನ್ನು ಅಪ್ಡೇಟ್‌ ಮಾಡಿದ್ದಾರೆ.


    ಇತರ ಫೀಚರ್‌ಗಳು


    ಬ್ರೇಕ್‌, ಹೆಡ್‌ಲೈಟ್‌, ಸೌಂಡ್‌, ಬ್ಲೂಟೂತ್, ವೈ-ಫೈ, ಸ್ಟೋರೇಜ್‌ ಇವೆಲ್ಲವನ್ನು ಈ ಸ್ಕೂಟರ್‌ನಲ್ಲಿ ಅಪ್ಡೇಟ್‌ ಮಾಡಿದ್ದಾರೆ.


    ಇದನ್ನೂ ಓದಿ: ಇದಪ್ಪಾ ಎಲ್ಲರೂ ಒಪ್ಪುವ ಒಪ್ಪೋ ಫೋನ್! ಹೊಸ ಮೊಬೈಲ್‌ ಹೇಗಿದೆ? ಬೆಲೆ ಎಷ್ಟಿದೆ?


    ಇದಿಷ್ಟು ನಾಳೆ ಬಿಡುಗಡೆಯಾಗಲಿರುವ ಓಲಾ Move OS 3 ಸ್ಕೂಟರ್‌ನ ಫೀಚರ್‌ಗಳಾಗಿವೆ. ಕಡಿಮೆ ಬೆಲೆಯಲ್ಲಿ ಉನ್ನತ ಗುಣಮಟ್ಟದಲ್ಲಿ ದೊರೆಯುವ ಗಾಡಿ ಇದಾಗಿದ್ದು ಆಕರ್ಷಕ ಬಣ್ಣದಲ್ಲಿ ದೊರೆಯಲಿದೆ. ಇದರಿಂದ ಗ್ರಾಹಕರು ಈಗಲೇ ಬುಕ್‌ ಮಾಡಲು ಸಿದ್ಧರಾಗಿದ್ದಾರೆ.

    Published by:Harshith AS
    First published: