• Home
 • »
 • News
 • »
 • tech
 • »
 • Truke BTG Beta Earbuds: 38 ಗಂಟೆಯ ಬ್ಯಾಟರಿ ಬ್ಯಾಕಪ್ ಹೊಂದಿದ ಹೊಸ ಇಯರ್​ಬಡ್ಸ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​

Truke BTG Beta Earbuds: 38 ಗಂಟೆಯ ಬ್ಯಾಟರಿ ಬ್ಯಾಕಪ್ ಹೊಂದಿದ ಹೊಸ ಇಯರ್​ಬಡ್ಸ್​ ಬಿಡುಗಡೆ! ಹೇಗಿದೆ ಗೊತ್ತಾ ಫೀಚರ್ಸ್​

ಟ್ರೂಕ್​ ಬಿಟಿಜಿ ಬೀಟಾ ಇಯರ್​ಬಡ್ಸ್​

ಟ್ರೂಕ್​ ಬಿಟಿಜಿ ಬೀಟಾ ಇಯರ್​ಬಡ್ಸ್​

ಇದೀಗ ಭಾರತದ ಪ್ರಸಿದ್ಧ ಟೆಕ್​ ಕಂಪೆನಿಗಳಲ್ಲಿ ಒಂದಾದ ಟ್ರೂಕ್​ ಹೊಸ ಇಯರ್​​ಬಡ್ಸ್​ ಅನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಇಯರ್​ಬಡ್ಸ್​​ಗಳಿಗೆ ಟ್ರೂಕ್​ ಬಿಟಿಜಿ ಬೀಟಾ ಎಂದು ಹೆಸರಿಸಲಾಗಿದೆ. ಈ ಸಾಧನಗಳು ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಕಾಲಿಡಲಿದ್ದು, ಇದೀಗ ಇದರ ಫೀಚರ್ಸ್​ಗಳು ಸೋರಿಕೆಯಾಗಿವೆ.

ಮುಂದೆ ಓದಿ ...
 • Share this:

  ಹಿಂದೆಲ್ಲಾ ಯಾವುದೇ ಸಿನೆಮಾ (Cinema), ಸಂಗೀತಗಳನ್ನು (Musics) ಕೇಳಬೇಕಾದರೆ ಇಯರ್​ಫೋನ್​ಗಳನ್ನು (Earphone) ಬಳಸುತ್ತಿದ್ದರು. ಆದರೆ ಈಗ ಎಲ್ಲಿ ಹೋದರೂ ನಾವು ಇಯರ್​ಬಡ್​​ಗಳನ್ನೇ ನೋಡಬಹುದಾಗಿದೆ.ಇತ್ತೀಚೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿರು ಮ್ಯೂಸಿಕ್​ ಗ್ಯಾಜೆಟ್​ಗಳಲ್ಲಿ ಇಯರ್​​ಬಡ್ಸ್​ಗಳು ಕೂ ಒಂದಾಗಿದೆ. ಈ ಇಯರ್​ಬಡ್ಸ್​ಗಳು ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಂತೂ ಇಯರ್​ಬಡ್ಸ್​ಗಳಿಗೆ ಎಲ್ಲಿಲ್ಲದ ಬೇಡಿಕೆ. ಟ್ರೂಕ್ ಸಂಸ್ಥೆಯು ಗೇಮಿಂಗ್‌ ಆಧಾರಿತ ಇಯರ್‌ಬಡ್ಸ್‌ಗಳನ್ನು ತಯಾರು ಮಾಡುವುದರಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಈ ಸಂಸ್ಥೆಯ ಡಿವೈಸ್‌ಗಳು ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ (Noise Cancelling Feature) ಜೊತೆಗೆ ದೀರ್ಘ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿರುವುದು ಸಹ ವಿಶೇಷವಾದ ಸಂಗತಿ. ಇದರ ನಡುವೆ ಈಗ ಟ್ರೂಕ್ ಹೊಸ ಒಂದು ಜೊತೆ ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಿದೆ.


  ಇದೀಗ ಭಾರತದ ಪ್ರಸಿದ್ಧ ಟೆಕ್​ ಕಂಪೆನಿಗಳಲ್ಲಿ ಒಂದಾದ ಟ್ರೂಕ್​ ಹೊಸ ಇಯರ್​​ಬಡ್ಸ್​ ಅನ್ನು ಮಾರುಕಟ್ಟೆಗೆ ತರಲು ಸಿದ್ಧತೆ ನಡೆಸುತ್ತಿದೆ. ಈ ಇಯರ್​ಬಡ್ಸ್​​ಗಳಿಗೆ ಟ್ರೂಕ್​ ಬಿಟಿಜಿ ಬೀಟಾ ಎಂದು ಹೆಸರಿಸಲಾಗಿದೆ. ಈ ಸಾಧನಗಳು ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಕಾಲಿಡಲಿದ್ದು, ಇದೀಗ ಇದರ ಫೀಚರ್ಸ್​ಗಳು ಸೋರಿಕೆಯಾಗಿವೆ.


  ಟ್ರೂಕ್​ ಬಿಟಿಜಿ ಬೀಟಾ ಇಯರ್​ಬಡ್ಸ್​ನ ಫೀಚರ್ಸ್​ ಹೇಗಿದೆ?


  ಟ್ರೂಕ್ ಬಿಟಿಜಿ ಬೀಟಾ ಗೇಮರುಗಳಿಗಾಗಿ ಮತ್ತು ಸಂಗೀತ ಪ್ರಿಯರಿಗಾಗಿ ತಯಾರಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಇಯರ್‌ಬಡ್‌ಗಳು 13 ಎಂಎಂ ಟೈಟಾನಿಯಂ ಡ್ರೈವರ್‌ನೊಂದಿಗೆ ಟ್ರೂಕ್‌ನ ಸಿಗ್ನೇಚರ್ ಸೌಂಡ್ ಮತ್ತು 40 ಎಂಎಸ್ ಕಡಿಮೆ ಲೇಟೆನ್ಸಿಯೊಂದಿಗೆ ಗೇಮಿಂಗ್ ಮೋಡ್ ಆಯ್ಕೆ ಪಡೆದುಕೊಂಡಿದೆ.


  ಇದನ್ನೂ ಓದಿ: ಬಿಡುಗಡೆಗೂ ಮೊದಲೇ ಸೋರಿಕೆಯಾಯ್ತು ಪೋಕೋ ಎಕ್ಸ್​5 ಪ್ರೋ ಸ್ಮಾರ್ಟ್​​ಫೋನ್ ಫೀಚರ್ಸ್​!


  ಕನೆಕ್ಟಿವಿಟಿ ಫೀಚರ್ಸ್​


  ಟ್ರೂಕ್ ಬಿಟಿಜಿ ಬ್ಲೂಟೂತ್ ಆವೃತ್ತಿ 5.3 ಅನ್ನು ಬೆಂಬಲಿಸಲಿದ್ದು, ಈ ಇಯರ್‌ಬಡ್‌ಗಳು ಡ್ಯುಯಲ್-ಮೈಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ (ENC),
  SBC+AAC ಆಡಿಯೊ ಡಿಕೋಡಿಂಗ್ ಅನ್ನು ಬೆಂಬಲಿಸುತ್ತದೆ. ಪ್ರತಿ ಇಯರ್‌ಬಡ್‌ನಲ್ಲಿ ಒಂದೇ ಮೈಕ್ ಅನ್ನು ಹೊಂದಿರುವುದು ಈ ಇಯರ್​ಬಡ್ಸ್​ನ ವಿಶೇಷ ಫೀಚರ್​​ ಆಗಿದೆ.


  ಟ್ರೂಕ್​ ಬಿಟಿಜಿ ಬೀಟಾ ಇಯರ್​ಬಡ್ಸ್​


  ಟ್ರೂಕ್​ ಇಯರ್​ಬಡ್ಸ್​​ನ ವಿನ್ಯಾಸ


  ಚಾರ್ಜಿಂಗ್‌ ಕೇಸ್‌ ಮ್ಯಾಟ್ ಬ್ಲ್ಯಾಕ್‌ ಕ್ಲಾಸಿಕ್ ವಿನ್ಯಾಸವನ್ನು ಹೊಂದಿದ್ದು, ಟಚ್‌ ಆಯ್ಕೆ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ.
  ಇದರ ಬಡ್ಸ್‌ಗಳು ಕಿವಿಯ ಶೈಲಿಯನ್ನು ಹೊಂದಿದ್ದು, ಕಿವಿಗೆ ಸುಲಭವಾಗಿ ಸೆಟ್ ಆಗಲಿವೆ. ಇದರೊಂದಿಗೆ ಓಪನ್-ಟು-ಪೇರ್ ತಂತ್ರಜ್ಞಾನ ಇರುವುದರಿಂದ ತಕ್ಷಣವೇ ಸಂಬಂಧಿತ ಡಿವೈಸ್‌ಗಳಿಗೆ ಸಂಪರ್ಕ ಆಗುತ್ತವೆ.


  ಬ್ಯಾಟರಿ ಫೀಚರ್ಸ್​


  ಟ್ರೂಕ್ ಬಿಟಿಜಿ ಬೀಟಾ ಇಯರ್​ಬಡ್ಸ್​ಗೆ ಪ್ರತ್ಯೇಕವಾಗಿ ಚಾರ್ಜಿಂಗ್ ಕೇಸ್ ಅನ್ನು ನೀಡಲಾಗಿದೆ. ಈ ಚಾರ್ಜಿಂಗ್​ ಕೇಸ್​​ 300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುತ್ತದೆ. ಇನ್ನು ಇದರಲ್ಲಿರುವ ಪ್ರತಿ ಇಯರ್‌ಬಡ್ 40mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿರಲಿದೆ ಎಂದು ಕಂಪೆನಿ ಹೇಳಿದೆ. ಈ ಟ್ರೂಕ್​ ಇಯರ್‌ಬಡ್‌ಗಳನ್ನು ಒಮ್ಮೆ ಫುಲ್​ ಚಾರ್ಜ್ ಮಾಡಿದ್ರೆ 8 ರಿಂದ 10 ಗಂಟೆಗಳವರೆಗೆ ಬಳಸಬಹುದಾಗಿದೆ. ಜೊತೆಗೆ ಚಾರ್ಜಿಂಗ್ ಕೇಸ್‌ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 48 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ.


  ಟ್ರೂಕ್​ ಬಿಟಿಜಿ ಬೀಟಾ ಇಯರ್​ಬಡ್ಸ್​


  ಬೆಲೆ ಮತ್ತು ಲಭ್ಯತೆ


  ಟ್ರೂಕ್ ಬಿಟಿಜಿ ಬೀಟಾ ಟ್ರೂ ವೈರ್​ಲೆಸ್​ ಸ್ಟೀರಿಯೋ ಇಯರ್‌ಬಡ್‌ಗಳನ್ನು ಭಾರತದಲ್ಲಿ 1,299 ರೂಪಾಯಿಗಳ ಆಫರ್‌ ಬೆಲೆಯಲ್ಲಿ ಗ್ರಾಹಕರು ಪಡೆಯಬಹುದು.ಇನ್ನೂ ಹಲವಾರು ಆಫರ್​ಗಳು ಈ ಇಯರ್​ಬಡ್ಸ್​ನಲ್ಲಿದ್ದು ಒಟ್ಟಾಗಿ ಇದನ್ನು 999 ರೂಪಾಯಿಗೆ ಖರೀದಿಸಬಹುದಾಗಿದೆ. ಇನ್ನು ಈ ಎಲ್ಲಾ ಆಫರ್ಸ್​​ಗಳ ಜೊತೆಗೆ ಈ ಇಯರ್‌ಬಡ್ಸ್‌ ಅನ್ನು ಅಮೆಜಾನ್‌, ಫ್ಲಿಪ್‌ಕಾರ್ಟ್ ಹಾಗೂ ಕ್ರೋಮ್‌ ಮೂಲಕ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಭಾರತದಾದ್ಯಂತ ಹಲವಾರು ರಿಟೇಲರ್‌ ಸ್ಟೋರ್‌ಗಳಲ್ಲಿಯೂ ಇದನ್ನು ಖರೀದಿಸಬಹುದಾಗಿದೆ. ಇನ್ನು ಇದರಲ್ಲಿ ಒಂದು ವರ್ಷಗಳವರೆಗೆ ವ್ಯಾರಂಟಿಯನ್ನೂ ಕಂಪೆನಿ ನೀಡುತ್ತದೆ.

  Published by:Prajwal B
  First published: