ವಾಟ್ಸಾಪ್ (WhatsApp) ತನ್ನ ಗ್ರಾಹಕರಿಗಾಗಿ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಿರುತ್ತದೆ. ಇದಲ್ಲದೆ ಇವುಗಳೆಲ್ಲವೂ ಬಳಕೆದಾರರು ಸರಳವಾಗಿ ಬಳಕೆ ಮಾಡುವ ಹಾಗೆಯೇ ಇರುತ್ತದೆ. ಎಲ್‌ಐಸಿ ಪಾಲಿಸಿದಾರರಿಗೆ ಒಂದು ಖುಷಿ ಸಮಾಚಾರ ಇದೆ ನೋಡಿ. ಅದೇನಪ್ಪಾ ಅಂದರೆ ಎಲ್‌ಐಸಿ (LIC) ಪ್ರಸಿದ್ಧ ಸಾಮಾಜಿಕ ಜಾಲತಾಣವೊಂದರ ಜೊತೆ ಪಾಲುದಾರಿಕೆ ಹೊಂದಿ ಹೊಸದಾದ ಡಿಜಿಟಲ್ ಸೇವೆಯನ್ನು ಪ್ರಸ್ತುತ ಪಡಿಸಲು ಸಜ್ಜಾಗಿದೆ. ಈ ಡಿಜಿಟಲ್ (Digital) ಸೇವೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ನೀಡುವುದರಲ್ಲಿ ಅನುಮಾನವೇ ಇಲ್ಲ. ಹಾಗಾದರೆ ಎಲ್‌ಐಸಿ ಪರಿಚಯಿಸಿರುವ ಹೊಸ ಸೇವೆ ಏನು? ಹೇಗೆ ಉಪಕಾರಿಯಾಗಿ, ಅದನ್ನು ಬಳಸೋದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಎಲ್‌ಐಸಿ ಪಾಲಿಸಿದಾರರಿಗೆ 24x7 ಸೇವೆ
ಜೀವ ವಿಮಾ ನಿಗಮ (LIC) ತನ್ನ ಪಾಲಿಸಿದಾರರಿಗೆ ಎಲ್‌ಐಸಿ ವಾಟ್ಸಾಆಪ್ ಚಾಟ್‌ಬಾಟ್ ಮೂಲಕ ಹೊಸ ಸಂವಾದಾತ್ಮಕ 24x7 ಸೇವೆಯನ್ನು ಪ್ರಾರಂಭಿಸಿದೆ.
ಈ ಸೇವೆಯ ಸಹಾಯದಿಂದ, ಪಾಲಿಸಿದಾರರು ಅಧಿಕೃತ ಎಲ್‌ಐಸಿ ವಾಟ್ಸಾಆಪ್ ಚಾಟ್‌ಬಾಟ್‌ನಲ್ಲಿ ಪಾಲಿಸಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ChatGPT ರಚಿಸಿದ ಭಾರತೀಯ ಮಹಿಳೆ! ಇವರ ಹಿನ್ನಲೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ
ಹೊಸ ಸೇವೆಯ ಪ್ರಯೋಜನ
ಸೇವೆಯನ್ನು ಬಳಸಲು, ಪಾಲಿಸಿದಾರರು ಮೊದಲು ಎಲ್‌ಐಸಿ ಇಂಡಿಯಾ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ನಂತರ ಚಾಟ್‌ಬಾಟ್ ಅನ್ನು ಪ್ರವೇಶಿಸಲು ಮತ್ತು ಬಯಸಿದ ಸೇವೆಯನ್ನು ಆಯ್ಕೆ ಮಾಡಲು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ +91 89768 62090 ಈ ನಂಬರ್‌ಗೆ "ಹಾಯ್" (Hi) ಅಂತಾ ಸಂದೇಶ ಕಳುಹಿಸಬೇಕು.
ಆಗ ಇದೇ ನಂಬರ್‌ನಿಂದ ನಿಮಗೆ ಎಲ್‌ಐಸಿ ಸೇವೆಯನ್ನು ವೇಗವಾಗಿ, ಸುರಕ್ಷಿತ ಮತ್ತು ಅನುಕೂಲಕರವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳುವ ಒಂದು ನೋಟಿಫಿಕೇಶನ್ ಬರುತ್ತದೆ. ಇದು ಪಾಲಿಸಿದಾರರಿಗೆ ಬಟನ್‌ನ ಕ್ಲಿಕ್‌ನಲ್ಲಿ ಮಾಹಿತಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಎಲ್‌ಐಸಿ ವಾಟ್ಸಾಪ್ ಚಾಟ್‌ಬಾಟ್ ಅನ್ನು ವ್ಯಾಲ್ಯೂಫಸ್ಟ್ ಅಭಿವೃದ್ಧಿಪಡಿಸಿದ್ದು, +91 89768 62090 ಈ ನಂಬರ್‌ಗೆ ಸಂದೇಶ ಕಳುಹಿಸುವ ಮೂಲಕ ಎಲ್‌ಐಸಿ ಪಾಲಿಸಿದಾರರು 24x7 ಸೇವೆಯ ಪ್ರಯೋಜನ ಪಡೆಯಬಹುದು.
"ಎಲ್‌ಐಸಿ ಕಂಪನಿ ಜೊತೆ ಪಾಲುದಾರಿಕೆ ಖುಷಿ ನೀಡಿದೆ"
ವಾಟ್ಸಾಆಪ್ ಇಂಡಿಯಾದ ಬಿಸಿನೆಸ್ ಮೆಸೇಜಿಂಗ್ ನಿರ್ದೇಶಕ ರವಿ ಗಾರ್ಗ್, ಈ ಬಗ್ಗೆ ಮಾತನಾಡಿ ವಾಟ್ಸಾಆಪ್ ಬ್ಯುಸಿನೆಸ್ ಪ್ಲಾಟ್‌ಫಾರ್ಮ್ ಮೂಲಕ ಅಗತ್ಯ ಆರ್ಥಿಕ ಪರಿಹಾರಗಳನ್ನು ಒದಗಿಸಲು ಎಲ್ಐಸಿ ಜೊತೆ ಪಾಲುದಾರಿಕೆ ಹೊಂದಲು ವಾಟ್ಸಾಆಪ್ ಕಂಪನಿಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಭಾರತದಲ್ಲಿ 250 ಮಿಲಿಯನ್ ಜನರಿಗೆ ನಂಬಿಕೆ ಮತ್ತು ಭರವಸೆಯನ್ನು ಮೂಡಿಸಿದೆ. ಇಂತಹ ಕಂಪನಿ ಜೊತೆ ಪಾಲುದಾರಿಕೆ ಹೊಂದಿರುವುದು ಕಂಪನಿಗೆ ಸಂತಸದ ವಿಷಯವಾಗಿದೆ. ಈ ಸೇವೆಯು ಪಾಲಿಸಿದಾರರಿಗೆ ಸಾಂಪ್ರದಾಯಿಕ ಕೆಲ ಅನುಭವವನ್ನು ಸರಳಗೊಳಿಸುತ್ತದೆ ಮತ್ತು ಎಲ್‌ಐಸಿ ಪಾಲಿಸಿದಾರರಿಗೆ ಹೆಚ್ಚು ಸುರಕ್ಷಿತ ಮತ್ತು ಸುಲಭ ಪ್ರವೇಶಕ್ಕೆ ಅನುಮತಿಸುತ್ತದೆ ಎಂದು ಗಾರ್ಗ್ ಎಲ್‌ಐಸಿ ಪರಿಚಯಿಸಿರುವ ಹೊಸ ಸೇವೆಯ ಬಗ್ಗೆ ತಿಳಿಸಿದ್ದಾರೆ.
ಎಲ್‌ಐಸಿ ವಾಟ್ಸಾಪ್ ಚಾಟ್‌ಬಾಟ್ ಅನ್ನು ವ್ಯಾಲ್ಯೂಫಸ್ಟ್ ಅಭಿವೃದ್ಧಿಪಡಿಸಿದ್ದಾರೆ ಮತ್ತು ಅದರ ಸಿಇಒ ಮತ್ತು ಸಂಸ್ಥಾಪಕ ವಿಶ್ವದೀಪ್ ಬಜಾಜ್, ಎಲ್‌ಐಸಿಗಾಗಿ ವಾಟ್ಸಾಪ್‌ನಲ್ಲಿ ಪರಿಹಾರವನ್ನು ನಿರ್ಮಿಸಲು ಕಂಪನಿಯು ಉತ್ಸುಕವಾಗಿದೆ ಎಂದು ಹೊಸ ಡಿಜಿಟಲ್ ಸೇವೆ ಬಗ್ಗೆ ತಿಳಿಸಿದ್ದಾರೆ. ಈ AI ಪರಿಹಾರವು ಎಲ್‌ಐಸಿ ತನ್ನ ಗ್ರಾಹಕರ ಎಲ್ಲಾ ಸೇವೆಗಳನ್ನು ಸುಧಾರಿಸಲು ಮತ್ತು ಅದರ ಬ್ರ್ಯಾಂಡ್ ಅನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ