ಮಾರುಕಟ್ಟೆಯಲ್ಲಿ ಸ್ಮಾರ್ಟ್ಬ್ಯಾಂಡ್ಗಳು (Smart Band) ಫಿಟ್ನೆಸ್ ಫೀಚರ್ಸ್ಗಳನ್ನು ಹೊಂದಿಕೊಂಡು ಭಾರೀ ಜನಪ್ರಿಯತೆಯನ್ನು ಪಡೆದಿದೆ. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸ್ಮಾರ್ಟ್ಬ್ಯಾಂಡ್ಗಳಿಗೆ ಭಾರೀ ಬೇಡಿಕೆಯೂ ಇದೆ. ಇದನ್ನು ಮನಗಂಡಂತಹ ಜನಪ್ರಿಯ ಟೆಕ್ ಕಂಪೆನಿಗಳು ತನ್ನ ಗ್ರಾಹಕರಿಗಾಗಿ ಹೊಸ ಮಾದರಿಯಲ್ಲಿ ಸ್ಮಾರ್ಟ್ಬ್ಯಾಂಡ್ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಸ್ಮಾರ್ಟ್ಬ್ಯಾಂಡ್ಗಳನ್ನು ಪರಿಚಯಿಸುವಲ್ಲಿ ಬಹಳಷ್ಟು ಮುಂಚೂಣಿಯಲ್ಲಿರುವ ಶಿಯೋಮಿ ಕಂಪೆನಿ (Xiaomi Company) ಇತ್ತೀಚೆಗೆ ತನ್ನ ಬ್ರಾಂಡ್ನ ಸ್ಮಾರ್ಟ್‌ಬ್ಯಾಂಡ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದೀ ಫಿಟ್ನೆಸ್ ಬ್ಯಾಂಡ್ (Fitness Band) ಅನ್ನು ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಶಿಯೋಮಿ ಕಂಪೆನಿ ಲಾಂಚ್ ಮಾಡಿದೆ.
ಜನಪ್ರಿಯ ಟೆಕ್ ಕಂಪೆನಿಯಾಗಿರುವ ಶಿಯೋಮಿ ಕಂಪೆನಿ ಇತ್ತೀಚೆಗೆ ತನ್ನ ಬ್ರಾಂಡ್ನ ಅಡಿಯಲ್ಲಿ ರೆಡ್ಮಿ ಬ್ಯಾಂಡ್ 2 ಅನ್ನು ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಈ ಬ್ಯಾಂಡ್ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ರೆಡ್ಮಿ ಬ್ಯಾಂಡ್ 2 ಅಗ್ಗದ ಬೆಲೆಯನ್ನು ಹೊಂದಿಕೊಂಡು, ಉತ್ತಮ ಪ್ರೀಮಿಯಮ್ ಫೀಚರ್ಸ್ಗಳನ್ನು ಹೊಂದಿದೆ.
ರೆಡ್ಮಿ ಬ್ಯಾಂಡ್ 2 ಡಿಸ್‌ಪ್ಲೇ ವಿನ್ಯಾಸ ಹೇಗಿದೆ?
ಶಿಯೋಮಿ ಕಂಪೆನಿ ಪರಿಚಯಿಸಿರುವ ಹೊಸ ರೆಡ್ಮಿ ಬ್ಯಾಂಡ್ 2 ಸ್ಟೈಲಿಶ್ ಬಾಡಿ ಡಿಸೈನ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಬ್ಯಾಂಡ್ ಈ ಮೂಲಕವೇ ಹೆಚ್ಚು ಜನರನ್ನು ಆಕರ್ಷಿಸಬಹುದು. ಯುವಜನರನ್ನು ಗುರಿಯಾಗಿ ಇಟ್ಟುಕೊಂಡು ರಚಿಸಿರುವ ಈ ಬ್ಯಾಂಡ್ 1.47 ಇಂಚಿನ TFT LCD ಡಿಸ್‌ಪ್ಲೇಯನ್ನು ಹೊಂದಿದೆ.
ಇನ್ನು ಈ ಡಿಸ್‌ಪ್ಲೇ 172 × 320 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ನೀಡುತ್ತದೆ. ಜೊತೆಗೆ ಡಿಸ್‌ಪ್ಲೇ 450 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದ್ದು, 100ಕ್ಕೂ ಹೆಚ್ಚು ಗುಣಮಟ್ಟದ ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಈ ಮೂಲಕ ಬಳಕೆದಾರರು ತಮಗೆ ಬೇಕಾದ ಹಾಗೆ ವಾಚ್ ಫೇಸ್‌ಗಳನ್ನು ಡಿಸ್ಪ್ಲೇನಲ್ಲಿ ಸೆಟ್ ಮಾಡಿಕೊಳ್ಳಬಹುದು.
ಸೆನ್ಸಾರ್ ಸಾಮರ್ಥ್ಯ
ಇನ್ನು ಈ ಫಿಟ್ನೆಸ್ ಬ್ಯಾಂಡ್ ಆಪ್ಟಿಕಲ್ ಹಾರ್ಟ್ ಬೀಟ್ ಮಾನಿಟರಿಂಗ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಈ ರೆಡ್ಮಿ ಬ್ಯಾಂಡ್ ಮೂಲಕಜ ರಕ್ತದ ಆಮ್ಲಜನಕದ ಮಾನಿಟರಿಂಗ್ ಸೆನ್ಸಾರ್ ಅನ್ನು ಕೂಡ ನೀಡಲಾಗಿದೆ. ಇದರಿಂದ ಬಳಕೆದಾರರ ಆರೋಗ್ಯವನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದಾಗಿದೆ.
ಇದಲ್ಲದೆ ಸ್ಟೆಪ್ಸ್, ಸ್ಲೀಪಿಂಗ್ ಜೊತೆಗೆ ನಿರಂತರ ಹೃದಯ ಬಡಿತದ ಮೇಲ್ವಿಚಾರಣೆಯ ಮಾನಿಟರ್ ಅನ್ನು ಸಹ ತೋರಿಸುತ್ತದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್ ಫಿಟ್‌ನೆಸ್ ಟ್ರ್ಯಾಕರ್ ಅಕ್ಸೆಲೆರೊಮೀಟರ್ ಅನ್ನು ಸಹ ಹೊಂದಿದ್ದು 30 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಬ್ಯಾಟರಿ ಫೀಚರ್ಸ್
ರೆಡ್ಮಿ ಬ್ಯಾಂಡ್ 2 ಸ್ಮಾರ್ಟ್‌ವಾಚ್ ವಿಶೇಷವಾಗಿ 210mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಬ್ಯಾಂಡ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 14 ದಿನಗಳವರೆಗೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಆದರೆ ಹೆಚ್ಚುವರಿ ಬಳಕೆಯೊಂದಿಗೆ 6 ದಿನಗಳ ಬ್ಯಾಟರಿ ಅವಧಿಯನ್ನು ಪಡೆದುಕೊಳುವ ಅವಕಾಶ ದೊರೆಯಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ. ಈ ಬ್ಯಾಂಡ್ ಬ್ಲೂಟೂತ್ 5.1 ತ್ವರಿತ ಕನೆಕ್ಟಿವಿಟಿ ಆಯ್ಕೆಯನ್ನು ಬೆಂಬಲಿಸಲಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳನ್ನು ಸಹ ಬೆಂಬಲಿಸುತ್ತದೆ.
ಇದನ್ನೂ ಓದಿ: ಜಸ್ಟ್ 15 ಸಾವಿರಕ್ಕೆ ಸಿಗುತ್ತೆ ಸ್ಮಾರ್ಟ್ಫೋನ್ಗಳು, ಕಾಸ್ಟ್ಲಿ ಮೊಬೈಲ್ನಲ್ಲೂ ಇರದ ಫೀಚರ್ಸ್ ಇದರಲ್ಲಿದೆ!
ಬೆಲೆ ಮತ್ತು ಲಭ್ಯತೆ
ಸದ್ಯ ರೆಡ್ಮಿ ಬ್ಯಾಂಡ್ 2 ವಾಚ್ ಅನ್ನು ಗ್ಲೋಬಲ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ಜಪಾನ್ನಲ್ಲಿ ಈ ಸ್ಮಾರ್ಟ್ಬ್ಯಾಂಡ್ನ ಬೆಲೆ ¥4,990 ಅಂದರೆ ಭಾರತದಲ್ಲಿ ಅಂದಾಜು 3,200 ರೂಪಾಯಿ ಆಗಿರುತ್ತದೆ. ಆದರೆ ಭಾರತದಲ್ಲಿ ಕೆಲವೇ ದಿನಗಳಲ್ಲಿ ಈ ಸ್ಮಾರ್ಟ್‌ಬ್ಯಾಂಡ್ ಬಿಡುಗಡೆಯಾಗಲಿದ್ದು, ಯಾವಾಗ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಮಾಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ