ಪ್ರಸಿದ್ಧ ಸ್ಮಾರ್ಟ್ವಾಚ್ ಕಂಪನಿಯಾಗಿರುವ (Smartwatch Company) ನಾಯ್ಸ್ ಕಂಪನಿ (Noise Company) ದಿನದಿಂದ ದಿನಕ್ಕೆ ಮಾರುಕಟ್ಟೆಗೆ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ನಾಯ್ಸ್ ಕಂಪನಿಯಿಂದ ಈ ಬಾರಿ ಹೊಸ ಸ್ಮಾರ್ಟ್ವಾಚ್ ಬಿಡುಗಡೆಯಾಗಿದ್ದು ಅದಕ್ಕೆ ನಾಯ್ಸ್ ಕಲರ್ಫಿಟ್ ಲೂಪ್ ಸ್ಮಾರ್ಟ್ವಾಚ್ (Noise Colorfit Loop Smartwatch) ಎಂಬ ಹೆಸರನ್ನು ಇಡಲಾಗಿದೆ. ಇದಕ್ಕಿಂತ ಮೊದಲು ಬಿಡುಗಡೆಯಾದಂತಹ ಸ್ಮಾರ್ಟ್ವಾಚ್ಗಳಿಗೆ ಈಗಲೂ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಲ್ಲಿದೆ. ಇದೀಗ ಬಿಡುಗಡೆಯಾಗಿರುವ ನಾಯ್ಸ್ ಕಲರ್ಫಿಟ್ ಲೂಪ್ ಸ್ಮಾರ್ಟ್ವಾಚ್ ಬಹಳಷ್ಟು ಫೀಚರ್ಸ್ ಅನ್ನು ಒಳಗೊಂಡಿದ್ದು ಇದು 6 ಬಣ್ಣಗಳಲ್ಲಿ ಖರೀದಿ ಮಾಡಬಹುದಾದ ಅವಕಾಶಗಳಿವೆ.
ನಾಯ್ಸ್ ಕಂಪನಿ ಪ್ರತೀ ಬಾರಿಯೂ ತನ್ನ ಕಂಪನಿಯ ಅಡಿಯಲ್ಲಿ ಬಿಡುಗಡೆ ಮಾಡುವಂತಹ ಸ್ಮಾರ್ಟ್ವಾಚ್ ಏನಾದರೊಂದು ಸ್ಪೆಷಲ್ ಫೀಚರ್ಸ್ ಅನ್ನು ಹೊಂದಿರುತ್ತದೆ. ಹಾಗಿದ್ರೆ ಈ ಬಾರಿ ಮಾರುಕಟ್ಟೆಗೆ ಕಾಲಿಡುತ್ತಿರುವ ಸ್ಮಾರ್ಟ್ವಾಚ್ನ ಬೆಲೆ, ಫೀಚರ್ಸ್ ಹೇಗಿದೆ ಎಂದು ಈ ಕೆಳಗೆ ಓದಿ.
ಫೀಚರ್ಸ್:
ಹೊಸ ನಾಯ್ಸ್ ಕಲರ್ಫಿಟ್ ಲೂಪ್ ಸ್ಮಾರ್ಟ್ವಾಚ್ 60Hz ರಿಫ್ರೆಶ್ ದರದೊಂದಿಗೆ ದೊಡ್ಡ 1.85-ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ವಾಚ್ 2.5D ಕರ್ವ್ಡ್ ಗ್ಲಾಸ್ ಕ್ಲಬ್ ಡಿಸ್ಪ್ಲೇ 550 ನಿಟ್ಸ್ ಬ್ರೈಟ್ನೆಸ್ ನೀಡುತ್ತದೆ. ಟ್ರೂ ಸಿಂಕ್ ತಂತ್ರಜ್ಞಾನದಿಂದ ನಡೆಸಲ್ಪಡುವ ಈ ಹೊಸ ಸ್ಮಾರ್ಟ್ ವಾಚ್ ಸಿಂಗಲ್ ಚಿಪ್ ಬ್ಲೂಟೂತ್ 5.3 ನೊಂದಿಗೆ ಬರುತ್ತದೆ.
ಇದನ್ನೂ ಓದಿ: ನಿಮ್ಮ ಮೊಬೈಲ್ ಸ್ಟೋರೇಜ್ ಬೇಗನೆ ಫುಲ್ ಆಗುತ್ತಾ? ಈ ಟ್ರಿಕ್ಸ್ ಫಾಲೋಮಾಡಿ ಕ್ಲಿಯರ್ ಮಾಡಿ
ಈ ಸ್ಮಾರ್ಟ್ವಾಚ್ ಅನ್ನು ಸ್ಮಾರ್ಟ್ಫೋನ್ನೊಂದಿಗೆ ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಇದರ ಲ್ಯಾಗ್-ಫ್ರೀ ಯೂಸರ್ ಇಂಟರ್ಫೇಸ್ (UI) ಅತ್ಯುತ್ತಮ ಸ್ಕ್ರೀನ್ನ ಅನುಭವವನ್ನು ನೀಡುತ್ತದೆ. ಇನ್ನು ಈ ಸ್ಮಾರ್ಟ್ವಾಚ್ ವಾಟರ್ಪ್ರೂಫ್ ಆಗಿರುತ್ತದೆ.
ಬ್ಯಾಟರಿ:
ಇನ್ನು ಈ ಸ್ಮಾರ್ಟ್ವಾಚ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ ಏಳು ದಿನಗಳವರೆಗೆ ಸುಲಭವಾಗಿ ಬಳಸಬಹುದು.
ಇತರ ಫೀಚರ್ಸ್:
ಈ ಸ್ಮಾರ್ಟ್ವಾಚ್ನೊಂದಿಗೆ ನೀವು SPO2 ಫೀಚರ್ಸ್ ಕೂಡ ಇದೆ ಇದರಿಂದ ಹೃದಯ ಬಡಿತ, ನಿದ್ರೆ, ಉಸಿರಾಟ, ಬಿಪಿ ಮುಂತಾದ ಎಲ್ಲಾ ಪ್ರಮುಖ ವಿಷಯಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. "ಸ್ಮಾರ್ಟ್ವಾಚ್ನ ಸೂಟ್ ಕ್ಯಾಲ್ಕುಲೇಟರ್, ಈವೆಂಟ್ ರಿಮೈಂಡರ್, ಹವಾಮಾನ ವರದಿಗಳನ್ನು, ಕರೆಗಳು, ಎಸ್ಎಂಎಸ್, ಅಪ್ಲಿಕೇಶನ್ ಅಧಿಸೂಚನೆಗಳು, ಸ್ಮಾರ್ಟ್ ಡಿಎನ್ಡಿಯಂತಹ ಫೀಚರ್ಸ್ಗಳನ್ನು ಒಳಗೊಂಡಿದೆ.
ಬೆಲೆ
ನಾಯ್ಸ್ ಕಲರ್ ಫಿಟ್ ಲೂಪ್ ಸ್ಮಾರ್ಟ್ ವಾಚ್ ಅನ್ನು 2499 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಆಗಿರುವ ಫ್ಲಿಪ್ಕಾರ್ಟ್ ಮತ್ತು Gonoise.com ನ ಅಧಿಕೃತ ವೆಬ್ಸೈಟ್ ಮೂಲಕ ಖರೀದಿಸಬಹುದು. ಇವುಗಳ ಮಾರಾಟವನ್ನು ಈಗಾಗಲೇ ಆರಂಭಿಸಿರುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥಾಪಕ ಅಮಿತ್ ಖತ್ರಿಯವರ ಹೇಳಿಕೆ:
ಕಲರ್ಫಿಟ್ ಲೂಪ್ ಸ್ಮಾರ್ಟ್ವಾಚ್ ಬಿಡುಗಡೆ ಕುರಿತು ನಾಯ್ಸ್ನ ಸಹ-ಸಂಸ್ಥಾಪಕ ಅಮಿತ್ ಖತ್ರಿ, “ನಾವು ಬಳಕೆದಾರರ ನಿರೀಕ್ಷೆಗೆ ಅನುಗುಣವಾಗಿ ನಮ್ಮ ಸ್ಮಾರ್ಟ್ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ನಾವು ಹೊಸ ಉತ್ಪನ್ನವನ್ನು ಪ್ರಾರಂಭಿಸಿದಾಗಲೆಲ್ಲಾ ಬಳಕೆದಾರರ ಅಗತ್ಯಗಳನ್ನು ಫೂರೈಸುವತ್ತ ಗಮನ ಹರಿಸುತ್ತೇವೆ.
ಅದೇ ರೀತಿ, ನಾವು ನಮ್ಮ ಇತ್ತೀಚಿನ ಉತ್ಪನ್ನದಲ್ಲಿ TrueSync ತಂತ್ರಜ್ಞಾನವನ್ನು ಸೇರಿಸಿದ್ದೇವೆ. ಸ್ಮಾರ್ಟ್ ವಾಚ್ನಲ್ಲಿ ಪವರ್-ಪ್ಯಾಕ್ಡ್ ಅನುಭವವನ್ನು ಬಯಸುವ ಯುವತಿಯರಿಗೆ ನಾಯ್ಸ್ ಕಲರ್ಫಿಟ್ ಲೂಪ್ ಸ್ಮಾರ್ಟ್ವಾಚ್ ಅತ್ಯುತ್ತಮ ಆಯ್ಕೆಯಾಗಿದೆ. ಎಮದು ಹೇಳಿದ್ದಾರೆ.
ಇದು ನಾಯ್ಸ್ ಕಂಪನಿ ಬಿಡುಗಡೆ ಮಾಡಿದ ಸ್ಮಾರ್ಟ್ವಾಚ್ನ ಬೆಲೆ ಮತ್ತು ವಿಶೇಷತೆಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ