ಎಲಾನ್ ಮಸ್ಕ್ (Elon Musk) ಟ್ವಿಟರ್ ಅನ್ನು ಖರೀದಿಸಿದಾಗಿನಿಂದ ಹೊಸ ಹೊಸ ಬದಲಾವಣೆಗಳು ಟ್ವಿಟರ್ನಲ್ಲಿ ಆಗುತ್ತಲೇ ಇದೆ. ಒಂದೊಮ್ಮೆ ಈ ಎಲಾನ್ ಮಸ್ಕ್ ಟ್ರೋಲ್ಗಳಿಗೂ ಗುರಿಯಾಗಿದ್ದರು. ಇದಕ್ಕೆಲ್ಲಾ ಟ್ವಿಟರ್‌ನ (Twitter) ಬದಲಾವಣೆಯ ಉದ್ದೇಶಗಳೇ ಕಾರಣ ಎಂದು ಹೇಳ್ಬಹುದು. ಬಿಲಿಯನೇರ್ಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಇತ್ತೀಚೆಗೆ ಟ್ವಿಟರ್ನಲ್ಲಿ ಬ್ಲೂಟಿಕ್ಗೆ (Twitter Blue Tick) ಶುಲ್ಕ ವಿಧಿಸುವ ಫೀಚರ್ ಪರಿಚಯಿಸುವ ಮೂಲಕ ಬಹಳಷ್ಟು ಚರ್ಚೆಗೆ ಒಳಗಾಗಿದ್ದರು ಮತ್ತು ಟ್ವಿಟರ್ ತನ್ನ ಉದ್ಯೋಗಿಗಳನ್ನು ವಜಾ ಮಾಡಿದ್ದಲ್ಲದೇ, ಕೆಲ ಉದ್ಯೋಗಿಗಳು ತಾವಾಗಿಯೇ ಟ್ವಿಟರ್‌ನ ಉದ್ಯೋಗದಿಂದ ನಿರ್ಗಮಿಸಿದ್ದಾರೆ. ಇತ್ತೀಚೆಗೆ ಎಲಾನ್ ಮಸ್ಕ್ ಟ್ವಿಟರ್‌ಗೆ ಹೊಸ ಸಿಇಒ (Twitter New CEO) ಅನ್ನ್ನು ಹುಡುಕುತ್ತಿದ್ದೇನೆಂದು ಟ್ವೀಟ್ ಮಾಡಿದ್ದರು. ಅದೇ ರೀತಿ ಹೊಸ ಸಿಇಒ ಹುಡುಕಿದ್ದು, ಫೋಟೋವನ್ನು ಸಹ ಎಲಾನ್ ಮಸ್ಕ್ ತನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆಲದಿನಗಳ ಹಿಂದೆ ಮಸ್ಕ್ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಹೊಸ ಸಿಇಒ ಅನ್ನು ಹುಡುಕುತ್ತಿರುವ ಬಗ್ಗೆ ಟ್ವೀಟ್ ಮಾಡಿದ್ದರು. ಅದೇ ರೀತಿ ಈಗ ಹೊಸ ಸಿಇಒ ಅನ್ನು ಹುಡುಕಿದ್ದೇನೆಂದು, ನಾಯಿ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಇದು ಬಹಳ ಹಾಸ್ಯಾಸ್ಪದವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಎಲಾನ್ ಮಸ್ಕ್ ಅವರ ಟ್ವೀಟ್
ಬಿಲಿಯನ್ ಡಾಲರ್ ಉದ್ಯಮಿ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸಿಇಒ ಆದ ನಂತರ ಹಳೆ ಉದ್ಯೋಗಿಗಳನ್ನು ವಜಾ ಮಾಡಿ, ಹೊಸ ಉದ್ಯೋಗಿಗಳನ್ನೇ ಆಯ್ಕೆ ಮಾಡ್ತಾ ಇದ್ದಾರೆ. ಈ ಮಧ್ಯೆ ಟ್ವಿಟರ್‌ಗೆ ಹೊಸ ಸಿಇಒ ಆಗಿ ಹೊಸಬರನ್ನು ಆಯ್ಕೆ ಮಾಡಿದ್ದು, ಹೊಸ ಸಿಇಒನ ಫೋಟೋವನ್ನು ಸಹ ಟ್ವೀಟ್ ಮಾಡಿದ್ದಾರೆ.
The new CEO of Twitter is amazing pic.twitter.com/yBqWFUDIQH
— Elon Musk (@elonmusk) February 15, 2023
ಸಿಇಒ ಕುರ್ಚಿಯ ಮೇಲೆ ಕುಳಿತ ನಾಯಿ
ಇನ್ನು ಎಲಾನ್ ಮಸ್ಕ್ ಅವರ ಮುದ್ದಿನ ನಾಯಿ ಫ್ಲೋಕಿಗೆ ಶಿಬಾ ಇನು ಎಂಬ ಇನ್ನೊಂದು ಹೆಸರು ಸಹ ಇದೆ. ಎಲಾನ್ ಮಸ್ಕ್ ಅವರು ತಮ್ಮ ನಾಯಿಯನ್ನು ಆಫೀಸಿನಲ್ಲಿ ಕೂರಿಸಿ ಸಿಇಒ ಎಂದು ಕರೆದ ಮೇಲೆ, ಈ ನಾಯಿಯನ್ನು ಕುರಿತು ಹೊಗಳಿದ್ದಾರೆ. ಮಸ್ಕ್ ಅವರು ತನ್ನ ಫ್ಲೋಕಿ ಎಂಬ ನಾಯಿಯನ್ನು ಸಿಇಒ ಕುರ್ಚಿ ಮೇಲೆ ಕೂರಿಸಿ, ನಾಯಿಯ ಮುಂದೆ ಹಲವು ಫೈಲ್ಗಳನ್ನು ಇಟ್ಟಿದ್ದಾರೆ. ನಂತರ ಫೋಟೋ ತೆಗೆದು, ಈತ ಟ್ವಿಟರ್‌ನ ಹೊಸ ಸಿಇಒ, ಯಾವುದೇ ಇತರೆ ವ್ಯಕ್ತಿಗಳಿಗಿಂತ ಈತನೇ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್
ಸದ್ಯ ಮಸ್ಕ್ ಅವರು ಹಾಕಿರುವ ಸಿಇಒ ಬಗೆಗಿನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಇವರ ಪೋಸ್ಟ್ಗೆ 4 ಲಕ್ಷಕ್ಕೂ ಅಧಿಕ ಲೈಕ್ಗಳು ಬಂದಿದೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ ಕೊಂಡ ನಂತರ ಸಿಇಒ ಆಗಿದ್ದಂತಹ ಪರಾಗ್ ಅಗರವಾಲ್ ಅವರನ್ನು ವಜಾ ಮಾಡಿದ್ದರು. ತದನಂತರ ಮಸ್ಕ್ ಅವರೇ ಟ್ವಿಟರ್ ಸಿಇಒ ಆದರು. ಇದರ ಬಳಿಕ ಹಲವಾರು ಉದ್ಯೋಗಿಗಳನ್ನು ಸಹ ಮಸ್ಕ್ ವಜಾ ಮಾಡಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ