ಈ ವಾರ ಮಾರುಕಟ್ಟೆಗೆ ಬರುವ ನೂತನ ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ

Audi Q2

Audi Q2

New Car Launches This week: ಅ.15ರಂದು ಲ್ಯಾಂಡ್​​ ರೋವರ್ ಡಿಫೆಂಡರ್​​ ಎಸ್​ಯುವಿ ಕಾರು ಮಾರುಕಟ್ಟೆಗೆ ಬರುತ್ತಿದೆ. ನೂತನ ಕಾರು 2.0 ಲೀಟರ್​​, 4 ಸಿಲಿಂಡರ್​ ಪೆಟ್ರೋಲ್​ ಎಂಜಿನ್​ ಹೊಂದಿದೆ. 292 ಬಿಹೆಚ್​ಪಿ ಮತ್ತು 400ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ.

  • Share this:

    ಕೊರೋನಾದಿಂದಾಗಿ ಆಟೋ ಉದ್ಯಮ ನೆಲಕಚ್ಚಿತ್ತು. ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರೀ ಕುಸಿತ ಕಂಡಿತ್ತು. ಕಳೆದ ಮೂರು-ನಾಲ್ಕು ತಿಂಗಳ ಗಮನಿಸಿದರೆ ಇದೀಗ ಆಟೋ ಉದ್ಯಮ ಕೊಂಚ ಬೆಳವಣಿಗೆ ಕಾಣುತ್ತಿದೆ. ಹೊಸ ಕಾರುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಅದರಂತೆ ಈ ವಾರ ಮಾರುಕಟ್ಟೆಗೆ ಬರಲಿರುವ ನೂತನ ಕಾರುಗಳ ಪಟ್ಟಿ ಇಲ್ಲಿದೆ..


    ಬಿಎಮ್​ಡಬ್ಲ್ಯು 2 ಸಿರೀಸ್​ ಗ್ರಾನ್​ ಕೂಪ್


    ಬಿಎಮ್​ಡಬ್ಲ್ಯು 2 ಸಿರೀಸ್​ ಗ್ರಾನ್​ ಕೂಪ್​ ಅನ್ನು ಅಕ್ಟೋಬರ್​ 15ರಂದು ಪರಿಚಯಿಸುತ್ತಿದೆ. ಸದ್ಯ ಈ ನೂತನ ಕಾರು ಮಾರುಕಟ್ಟೆಗೆ ಬರುತ್ತಿದೆ.  10.25 ಇಂಚಿನ ಟಿಎಫ್​ಟಿ ಸ್ಕ್ರೀನ್​ ಇನ್ಟ್ರೂಮೆಂಟ್​​ ಪ್ಯಾನಲ್​, 10.25 ಇಂಚಿನ ಟಚ್​ಸ್ಕ್ರೀನ್​ ಸಿಸ್ಟಂ, ಡಿ ಡ್ರೈವ್​ ಇಂಟರ್​ಫೇಸ್​,  ಡುಯೆಲ್​ ಝೋನ್​​ ಕ್ಲೈಮೇಟ್​​ ಕಂಟ್ರೋಲ್​​ ಸಿಸ್ಟಂ, ಆ್ಯಂಬಿಯೆಂಟ್​ ಲೈಟಿಂಗ್​, ಸನ್​ರೂಫ್​ ಫೀಚರ್​ ಇದರಲ್ಲಿ ನೀಡಲಾಗಿದೆ.


    ಜೊತೆಗೆ ವಾಯ್ಸ್​ ಅಸಿಸ್ಟೆಂಟ್​​, ಪಾರ್ಕಿಂಗ್​ ಅಸಿಸ್ಟೆಂಟ್​​, ಡ್ರೈವಿಂಗ್​ ಅಸಿಸ್ಟೆಂಟ್​​ ನೀಡಲಾಗಿದೆ. 2.0 ಲೀಟರ್​​ ಸಾಮರ್ಥ್ಯದ ಡೀಸೆಲ್​ ಎಂಜಿನ್​ ಹೊಂದಿರುವ ಈ ಕಾರು 187 ಅಮತ್ತು 400ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ.


    ಲ್ಯಾಂಡ್​ ರೋವರ್​ ಡಿಫೆಂಡರ್​:


    ಅ.15ರಂದು ಲ್ಯಾಂಡ್​​ ರೋವರ್ ಡಿಫೆಂಡರ್​​ ಎಸ್​ಯುವಿ ಕಾರು ಮಾರುಕಟ್ಟೆಗೆ ಬರುತ್ತಿದೆ. ನೂತನ ಕಾರು 2.0 ಲೀಟರ್​​, 4 ಸಿಲಿಂಡರ್​ ಪೆಟ್ರೋಲ್​ ಎಂಜಿನ್​ ಹೊಂದಿದೆ. 292 ಬಿಹೆಚ್​ಪಿ ಮತ್ತು 400ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ.


    ನೂತನ ಕಾರಿನಲ್ಲಿ ವೀಲ್​ ಡ್ರೈವ್​ ಸಿಸ್ಟಂ ಅಳವಡಿಸಲಾಗಿದೆ. ಟ್ವಿನ್​ ಸ್ಟೀಡ್​ ಅಟೋಮ್ಯಾಟಿಕ್​ ಗೇರ್​ಬಾಕ್ಸ್​ ನೀಡಲಾಗಿದೆ. ಆ್ಯಕ್ಟೀವ್​ ಲಾಕಿಂಗ್​ ಫೀಚರ್​ ಇದರಲ್ಲಿದೆ.


    ಆಡಿ ಕ್ಯೂ2:


    ಆಡಿ ಸಂಸ್ಥೆ ಕ್ಯೂ2 ಹೆಸರಿನ ಕಾರನ್ನು ಅ.16ರಂದು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ನೂತನ ಕಾರು 2.0 ಟಿಎಫ್​ಎಸ್​ಐ ಪೆಟ್ರೋಲ್ ಎಂಜಿನ್​ ಹೊಂದಿದ್ದು, 187ಬಿಹೆಚ್​ಪಿ ಮತ್ತು 320 ಟಾರ್ಕ್​ ಉತ್ಪಾದಿಸುತ್ತದೆ.


    ಕ್ಯೂ2 ಕಾರು ಆಟೋಮ್ಯಾಟಿಕ್​ ಗೇರ್​ಬಾಕ್ಸ್​ ಹೊಂದಿದೆ. ಜೊತೆಗೆ ಎಲ್​ಇಡಿ ಟೇಲ್​ ಲೈಟ್​, ಸ್ಟೀರಿಂಗ್​ ವೀಲ್​,ಪೆಡಲ್​ ಶಿಫ್ಟರ್​, ಡಿಜಿಟಲ್​ ಇನ್​ಸ್ಟ್ರೂಮೆಂಟ್​ ಪ್ಯಾನೆಲ್​, ಇಲೆಕ್ಟ್ರಿಕ್​ ಸನ್​ರೂಫ್​ ಫೀಚರ್​ ನೀಡಲಾಗಿದೆ.

    Published by:Harshith AS
    First published: