HOME » NEWS » Tech » NEW BAJAJ PULSAR 180 BSVI COMPLIANT DTS I FI ENGINE BIKE LAUNCHED IN INDIA HG

Bajaj Pulsar 180 ಮಾರುಕಟ್ಟೆಗೆ; ಹೊಸ ಬೈಕಿನ ವಿಶೇಷತೆ ಏನು ಗೊತ್ತಾ?

Bajaj Pulsar 180: ನೂತನ ಬೈಕ್​ 5 ಸ್ಪೀಡ್​​ ಗೇರ್​ ಬಾಕ್ಸ್​ ಹೊಂದಿದೆ. ಜೊತೆಗೆ ಟೆಲಿಸ್ಕೋಫಿಯಾ ಆ್ಯಂಟಿ ಫ್ರಿಕ್ಸನ್​​ ಬ್ರಶ್​​ ಮತ್ತು ಫ್ರಂಟ್​​ ಸಸ್ಪೆನ್​ಶನ್​ ನೀಡಲಾಗಿದೆ.

news18-kannada
Updated:February 25, 2021, 10:43 AM IST
Bajaj Pulsar 180 ಮಾರುಕಟ್ಟೆಗೆ; ಹೊಸ ಬೈಕಿನ ವಿಶೇಷತೆ ಏನು ಗೊತ್ತಾ?
Bajaj Pulsar 180
  • Share this:
ಬಜಾಜ್​ ಅಟೊ ಹೊಸ ಪಲ್ಸರ್​​ 180 ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್​ ಡಿಕಾಲ್ಸ್​ ಮತ್ತು ಟ್ವಿನ್​ ಪಿಲಾಟ್​​ ಲ್ಯಾಂಪ್​, ಜೊತೆಗೆ ಅಟೊ ಹೆಡ್​ಲ್ಯಾಂಪ್​​ ಅಳವಡಿಸಿಕೊಂಡಿದೆ. ಹೊಸ ವಿನ್ಯಾಸದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಪಲ್ಸರ್​​ 180, ಸ್ಟೈಲೀಶ್​ ಲುಕ್​ ಹೊಂದಿದೆ. ಅದರ ಜೊತೆಗೆ ಸ್ಪೋರ್ಟಿ ಸ್ಪ್ಲಿಟ್ ಸೀಟ್​ ಬ್ಯಾಕ್​ ಅಲಾಯ್​ ವೀಲ್​​  ಮತ್ತು ಇನ್ಫಿನಿಟಿ ಎಲ್​ಇಡಿ ಟೈಲ್​ ಲ್ಯಾಪ್ ಜೋಡಿಸಲಾಗಿದೆ.

ಹೊಸ ಅವತಾರದಲ್ಲಿ ಗ್ರಾಹಕರ ಮನ ಸೆಳೆಯುತ್ತಿರುವ ಬಜಾಜ್​ 180 ಪಲ್ಸರ್​​ 4 ಸ್ಟ್ರೋಕ್​​ ಎಸ್​ಒಹೆಚ್​ಸಿ 2-ವ್ಯಾಲ್ವ್​​​​ ಏರ್​​ ಕೂಲ್ಡ್​​ ಬಿಎಸ್​6 ಕಾಂಪ್ಲಿಮೆಂಟ್​​ನಲ್ಲಿ ಪರಿಚಯಿಸಿದೆ. ಇದರ ಪೀಕ್​ ಟಾರ್ಕ್​ 14.52 ಎನ್ಎಮ್​ ಮತ್ತು 8500 ಆರ್​ಪಿಎಂನಲ್ಲಿ 12.52 ಕೆಡಬ್ಲ್ಯು ಪವರ್​ ಉತ್ಪತ್ತಿಯಾಗುತ್ತದೆ.

ನೂತನ ಬೈಕ್​ 5 ಸ್ಪೀಡ್​​ ಗೇರ್​ ಬಾಕ್ಸ್​ ಹೊಂದಿದೆ. ಜೊತೆಗೆ ಟೆಲಿಸ್ಕೋಫಿಯಾ ಆ್ಯಂಟಿ ಫ್ರಿಕ್ಸನ್​​ ಬ್ರಶ್​​ ಮತ್ತು ಫ್ರಂಟ್​​ ಸಸ್ಪೆನ್​ಶನ್​ ನೀಡಲಾಗಿದೆ. ಅಂತೆಯೇ 5-ವೇ ಅಡ್ಜೆಸ್ಟೇಬಲ್​ ನಿಟ್ರಾಕ್ಸ್​​ ಶಾಕ್​ ಅಬ್ಸೋರ್ಡರ್​ ನೀಡಲಾಗಿದೆ.

ಬಜಾಜ್​ ಪಲ್ಸರ್​ 180 ಬೈಕ್​ ಟಿವಿಎಸ್​ ಅಪಾಚೆ ಆರ್​ಟಿಆರ್​ 180 ಮತ್ತು ಹೋಂಡಾ ಹಾರ್ನೆಟ್​​ 2.0 ಪ್ರತಿಸ್ಪರ್ಧಿಯಾಗಿದೆ. ಟಿವಿಎಸ್​ ಅಪಾಚೆ ಆರ್​ಟಿಆರ್​ 160 4ವಿ, ಪಲ್ಸರ್​ ಎನ್​ಎಸ್​160, ಯಮಹಾ ಎಫ್​ಜೆಡ್​ಎಸ್​ ಎಫ್​ಐ-ವಿ3 ಮತ್ತು ಹೀರೊ ಎಕ್ಸ್​ಟ್ರಿಮಿ 160 ಬೈಕ್​ಗಳೆಲ್ಲವು ಒಂದೇ ಬೆಲೆಯನ್ನು ಹೊಂದಿದೆ.
Published by: Harshith AS
First published: February 25, 2021, 10:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories