HOME » NEWS » Tech » NEW BAJAJ PLATINA 100 KICK START PRICE AND SPECIFICATION INDIA HG

ಕಡಿಮೆ ಬೆಲೆಗೆ ದೊರಕುವ ಹೊಸ ಪ್ಲಾಟಿನಾ 100 ಕಿಕ್​ ಸ್ಟಾರ್ಟ್ ಬೈಕ್​ ಹೇಗಿದೆ? ವಿಶೇಷತೆ ಏನಿದೆ?

ಪ್ಲಾಟಿನಾ 100 ಕಿಕ್​ ಸ್ಟಾರ್ಟ್​​ ಸ್ಪ್ರಿಂಗ್​ ನೈಟ್ರೋಕ್ಸ್​​ ಸಸ್ಪೆನ್ಶನ್​​, ಟ್ಯೂಬುಲೆಸ್​ ಟೈರ್​, ಹ್ಯಾಂಡ್​​ ಗಾರ್ಡ್​, ವಿಶ್ರಾಮದಾಯಕ ಸೀಟ್​, ಎಲ್​ಇಡಿ ಡಿಆರ್​ಎಲ್​​ ಹೆಡ್​ಲ್ಯಾಂಪ್​, ಪ್ರೊಟೆಕ್ವಿವ್​ ಟ್ಯಾಂಕ್​ ಪ್ಯಾಡ್​​ ನೀಡಲಾಗಿದೆ.

news18-kannada
Updated:December 19, 2020, 9:41 PM IST
ಕಡಿಮೆ ಬೆಲೆಗೆ ದೊರಕುವ ಹೊಸ ಪ್ಲಾಟಿನಾ 100 ಕಿಕ್​ ಸ್ಟಾರ್ಟ್ ಬೈಕ್​ ಹೇಗಿದೆ? ವಿಶೇಷತೆ ಏನಿದೆ?
ಪ್ಲಾಟಿನಾ 100 ಕಿಕ್​ ಸ್ಟಾರ್ಟ್
  • Share this:
ಬಜಾಜ್​ ಆಟೋ ಕಂಪನಿ ಹೊಸ ಪ್ಲಾಟಿನಾ 100 ಕಿಕ್​ ಸ್ಟಾರ್ಟ್​​ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಬೈಕ್​ನಲ್ಲಿ ಹಲವಾರು ಬದಲಾವಣೆಯನ್ನು ಮಾಡಿದ್ದು, ಬಜೆಟ್​ ಬೆಲೆಯಲ್ಲಿ ಗ್ರಾಹಕರಿಗೆ ಪರಿಚಯಿಸಿದೆ.

ಪ್ಲಾಟಿನಾ 100 ಕಿಕ್​ ಸ್ಟಾರ್ಟ್​​ ಬೈಕ್​​ ಸ್ಟೈಲೀಶ್​ ಹ್ಯಾಂಡ್​ಗಾರ್ಡ್​​ ಹೊಂದಿದ್ದು, ಕಾಕ್​​ಟೈಲ್​​ ವೈನ್​ ರೆಡ್​, ಎಬೋನಿ ಬ್ಲಾಕ್​​ ಜೊತೆಗೆ ಸಿಲ್ವರ್​ ಡಿಕಾಲ್ಸ್​ ಬಣ್ಣದಲ್ಲಿ ಖರೀದಿಗೆ ಸಿಗಲಿದೆ. ಬಜಾಜ್​ ಅಟೋ ಡೀಲರ್​ಶಿಪ್​ನಲ್ಲಿ ಪ್ಲಾಟಿನಾ 100 ಕಿಕ್​ ಸ್ಟಾರ್ಟ್​​ ಬೈಕ್​ ಅನ್ನು ಮಾರಾಟ ಮಾಡುತ್ತಿದೆ.

ಪ್ಲಾಟಿನಾ 100 ಕಿಕ್​ ಸ್ಟಾರ್ಟ್​​ ಸ್ಪ್ರಿಂಗ್​ ನೈಟ್ರೋಕ್ಸ್​​ ಸಸ್ಪೆನ್ಶನ್​​, ಟ್ಯೂಬುಲೆಸ್​ ಟೈರ್​, ಹ್ಯಾಂಡ್​​ ಗಾರ್ಡ್​, ವಿಶ್ರಾಮದಾಯಕ ಸೀಟ್​, ಎಲ್​ಇಡಿ ಡಿಆರ್​ಎಲ್​​ ಹೆಡ್​ಲ್ಯಾಂಪ್​, ಪ್ರೊಟೆಕ್ವಿವ್​ ಟ್ಯಾಂಕ್​ ಪ್ಯಾಡ್​​ ನೀಡಲಾಗಿದೆ. ಜೊತೆಗೆ ಇಂಡಿಕೇಟರ್​, ಮಿರರ್​​, ರಬ್ಬರ್​ ಫೂಟ್​ಪ್ರಿಂಟ್​ ನೀಡಲಾಗಿದೆ.

ಬಜಾಜ್​ ಅಟೋ ಲಿಮಿಟೆಡ್​​​ನ ಮಾರ್ಕೆಟಿಂಗ್​​ ಮುಖ್ಯಸ್ಥ ಶ್ರೀ ನಾರಯಣ್ ಮಾತನಾಡಿ, ‘ಬ್ರಾಂಡ್​ ಪ್ಲಾಟಿನಾ ಬೈಕ್​ ತನ್ನ ಸಾಟಿಯಿಲ್ಲದ ಕಂಪರ್ಟ್​ನೊಂದಿಗೆ ಹೊರಬಂದಿದೆ. ಇಂದು ಪ್ರಯಾಣಿಕರ ವಿಭಾಗದಲ್ಲಿ ಅತ್ಯುತ್ತಮ ಮೋಟಾರ್​ ಸೈಕಲ್​ಗಳಲ್ಲಿ ಒಂದಾಗಿದೆ. ಕಳೆದ 15 ವರ್ಷಗಳಲ್ಲಿ 72 ಲಕ್ಷ ಮೋಟಾರ್​​ ಸೈಕಲ್​ ಅನ್ನು ಮಾರಾಟ ಮಾಡಿದೆ. ಇದೀಗ ಪ್ಲಾಟಿನಾ 100 ಕಿಕ್​ ಸ್ಟಾರ್ಟ್ ಕೂಡ ಸೇರ್ಪಡೆಯಾಗಿದ್ದು, ಉತ್ತಮ ಮೈಲೇಜ್​ ನೀಡಲಿದೆ’ ಎಂದು ಹೇಳಿದ್ದಾರೆ.

ಈಗಾಗಲೇ ಹಲವಾರು ಆಟೋ ಕಂಪನಿಗಳು ಹೊಸ ವಿನ್ಯಾಸದಲ್ಲಿ ಬೈಕ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ವರ್ಷಾರಂಭಕ್ಕೂ ಮೊದಲೇ ಬಜಾಜ್​ ನೂತನ ಪ್ಲಾಟಿನಾ 100 ಕಿಕ್​ ಸ್ಟಾರ್ಟ್ ಬೈಕ್​ ಅನ್ನು ಪರಿಚಯಿಸಿದೆ.

ಬಜಾಜ್​ ಪ್ಲಾಟಿನಾ ಬೈಕ್​ ಮೈಲೇಜ್​ ನೀಡುವ ಬೈಕ್​ಗಳಲ್ಲಿ ಗುರುತಿಸಿಕೊಂಡಿದೆ. ಅದಲ್ಲದೆ ಆರಾಮದಾಯಕ ಚಾಲನೆಗೆ ಯೋಗ್ಯವಾಗಿದೆ. ಇದೀಗ ಬಜಾಜ್​ ಇಂಡಿಯಾ ನೂತನ ವಿನ್ಯಾಸದಲ್ಲಿ ಪ್ಲಾಟಿನಾ 100 ಕಿಕ್​ ಸ್ಟಾರ್ಟ್ ಬೈಕ್​ ಅನ್ನು ಪರಿಚಯಿಸಿದೆ.

ಪ್ಲಾಟಿನಾ 100 ಕಿಕ್​ ಸ್ಟಾರ್ಟ್ ಬೈಕ್​ ಬೆಲೆ 51,667 ರೂ ಬೆಲೆಯನ್ನು ಹೊಂದಿದೆ. ಗ್ರಾಹಕರಿಗೆ ಬಜೆಟ್​ ಬೆಲೆಯಲ್ಲಿ ದೊರಕುವ ಬೈಕ್​ಗಳಲ್ಲಿ ಇದು ಬೆಸ್ಟ್​ ಎನಿಸಿಕೊಂಡಿದೆ.
Published by: Harshith AS
First published: December 19, 2020, 9:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories