WhatsApp: ವಾಟ್ಸಾಪ್​​ನಲ್ಲಿ ಬಂದಿದೆ ನೋಡಿ ಹೊಸ ಅವತಾರ್​ ಸ್ಟಿಕ್ಕರ್ಸ್ ಪ್ಯಾಕ್​​​!

ವಾಟ್ಸಾಪ್ ಹೊಸ ಅವತಾರ್​ ಸ್ಟಿಕ್ಕರ್ ಪ್ಯಾಕ್​

ವಾಟ್ಸಾಪ್ ಹೊಸ ಅವತಾರ್​ ಸ್ಟಿಕ್ಕರ್ ಪ್ಯಾಕ್​

Avatar Sticker Pack: ವಾಟ್ಸಾಪ್​ ಇದೀಗ ಬಳಕೆದಾರರಿಗಾಗಿ ಹೊಸ ಅವತಾರ್ ಸ್ಟಿಕ್ಕರ್ಸ್​ ಪ್ಯಾಕ್​ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಈ ಹೊಸದಾಗಿ ಬಿಡುಗಡೆ ಮಾಡಿರುವ ಸ್ಟಿಕರ್​​ ಪ್ಯಾಕ್​ಗಳ ವಿಶೇಷತೆ ಹೇಗಿದೆ ಎಂದು ಈ ಲೇಖನದ ಮೂಲಕ ತಿಳಿಯಿರಿ.

  • News18 Kannada
  • 3-MIN READ
  • Last Updated :
  • New Delhi, India
  • Share this:

    ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್​ ಇತ್ತೀಚೆಗೆ ತನ್ನ ಅಪ್ಲಿಕೇಶನ್​​ನ ಅಪ್ಡೇಟ್​ ಮೂಲಕ ಭಾರೀ ಮಾತುಕತೆಯಲ್ಲಿದೆ. ವಾಟ್ಸಾಪ್ (WhatsApp)​ ಇತ್ತೀಚೆಗೆ ಬಳಕೆದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಹೊಸ ಹೊಸ ಅಪ್ಡೇಟ್​ಗಳನ್ನು ಮಾಡುತ್ತಲೇ ಇದೆ. ಕಳೆದ ವರ್ಷ ಕಂಪೆನಿ ಹೇಳಿದ ಹಾಗೆ ಈ ವರ್ಷದ ಆರಂಭದಲ್ಲೇ ಹೊಸ ಅಪ್ಡೇಟ್​ಗಳನ್ನು ಬಿಡುಗಡೆ ಮಾಡಲು ಆರಂಭಿಸಿದೆ. ಕೆಲ ತಿಂಗಳ ಹಿಂದೆ ವಾಟ್ಸಾಪ್​ನಲ್ಲಿ ಅವತಾರ್​​ ಸ್ಟಿಕ್ಕರ್​ಗಳನ್ನು ಶೇರ್​ ಮಾಡುವ ಫೀಚರ್​ ಪರಿಚಯಿಸಿತ್ತು. ಅದೇ ರೀತಿ ಇದೀಗ ಹೊಸ ಅವತಾರ್​ ಸ್ಟಿಕ್ಕರ್​ ಪ್ಯಾಕ್ (Avatar Sticker Pack)​​ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಬಳಕೆದಾರರು ತಮಗೆ ಬೇಕಾದ ಸ್ಟಿಕ್ಕರ್ಸ್​​​ ಅನ್ನು ಇಲ್ಲಿ ಸೆಟ್​ ಮಾಡಿಟ್ಟುಕೊಳ್ಳಬಹುದು.


    ವಾಟ್ಸಾಪ್​ ಇದೀಗ ಬಳಕೆದಾರರಿಗಾಗಿ ಹೊಸ ಅವತಾರ್ ಸ್ಟಿಕ್ಕರ್ಸ್​ ಪ್ಯಾಕ್​ ಅನ್ನು ಬಿಡುಗಡೆ ಮಾಡಿದೆ. ಹಾಗಿದ್ರೆ ಈ ಹೊಸದಾಗಿ ಬಿಡುಗಡೆ ಮಾಡಿರುವ ಸ್ಟಿಕರ್​​ ಪ್ಯಾಕ್​ಗಳ ವಿಶೇಷತೆ ಹೇಗಿದೆ ಎಂದು ಈ ಲೇಖನದ ಮೂಲಕ ತಿಳಿಯಿರಿ.


    ಹೊಸ ಅವತಾರ್​ ಸ್ಟಿಕ್ಕರ್ ಪ್ಯಾಕ್​


    ವಾಟ್ಸಾಪ್‌ನಲ್ಲಿ ಸೇರ್ಪಡೆ ಆಗಿರುವ ಅವತಾರ್ ಸ್ಟಿಕ್ಕರ್‌ ಪ್ಯಾಕ್‌ನಲ್ಲಿ ಹೊಸ ಸ್ಟಿಕ್ಕರ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇದಲ್ಲದೆ ಅಪ್ಲಿಕೇಶನ್ ಸೆಟ್ಟಿಂಗ್‌ಗಳಲ್ಲಿಯೇ ಅವತಾರ್ ಅನ್ನು ಕಸ್ಟಮೈಸ್ ಮಾಡಬಹುದು. ಒಮ್ಮೆ ಬಳಕೆದಾರರು ತಮ್ಮ ಅವತಾರ್​​ ಅನ್ನು ಕ್ರಿಯೆಟ್‌ ಮಾಡಿದ ನಂತರ ಅದನ್ನು ಪ್ರೊಫೈಲ್‌ ಫೋಟೋ ಆಗಿ ಸಹ ಬಳಸಬಹುದಾಗಿದೆ. ಅಲ್ಲದೆ ಅವತಾರ್‌ಗಳನ್ನು ಚಾಟ್‌ಗಳು ಮತ್ತು ಗ್ರೂಪ್‌ ಚಾಟ್‌ಗಳೊಂದಿಗೆ ಕೂಡ ಶೇರ್‌ ಮಾಡಿಕೊಳ್ಳಬಹುದಾಗಿದೆ. ವಾಟ್ಸಾಪ್‌ ವಿಭಿನ್ನ ಭಾವನೆಗಳು ಮತ್ತು ರಿಯಾಕ್ಷನ್‌ಗಳಿಗೆ ಅನುಗುಣವಾಗಿ ಅವತಾರ್‌ಗಳನ್ನು ಕಸ್ಟಮೈಸ್‌ ಮಾಡಲಿದೆ.


    ಇದನ್ನೂ ಓದಿ: ಒನ್​​ಪ್ಲಸ್​ ಕಂಪೆನಿಯ ಬಹುನಿರೀಕ್ಷಿತ ಸ್ಮಾರ್ಟ್​​ಫೋನ್​ನ ಪ್ರೀಬುಕಿಂಗ್ ಆರಂಭ! ಫೀಚರ್ಸ್ ನೋಡಿದ್ರೆ ಖರೀದಿಸೋದು ಗ್ಯಾರಂಟಿ


    ಆಟೋಮ್ಯಾಟಿಕ್‌ ಆಗಿ ಸ್ಟಿಕ್ಕರ್ ಪ್ಯಾಕ್ ರಚನೆಯಾಗುತ್ತದೆ


    ಇನ್ನು ವಾಟ್ಸಾಪ್ ನಲ್ಲಿ ಅವತಾರ್‌ ಅನ್ನು ಕಾನ್ಫಿಗರ್ ಮಾಡಿದ ನಂತರ ಆಟೋಮ್ಯಾಟಿಕ್‌ ಆಗಿ ಸ್ಟಿಕ್ಕರ್ ಪ್ಯಾಕ್ ರಚನೆಯಾಗುತ್ತದೆ . ನಂತರ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆ ಎಲ್ಲಾ ಸ್ಟಿಕ್ಕರ್‌ಗಳನ್ನು ಹಂಚಿಕೊಳ್ಳಬಹುದು. ಇದಿಷ್ಟೇ ಅಲ್ಲದೆ, ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋವಾಗಿಯೂ ಬಳಕೆ ಮಾಡಿಕೊಳ್ಳಬಹುದು. ಅವಾತರ್‌ ಸ್ಟಿಕ್ಕರ್‌ ಮೂಲಕ ತಮ್ಮ ವರ್ಚುವಲ್ ಗುರುತನ್ನು ವೈಯಕ್ತೀಕರಿಸಿಕೊಳ್ಳಲು ಬಳಕೆದಾರರಿಗೆ ಸುಲಭ ಮಾರ್ಗವಾಗಿದೆ.


    ವಾಟ್ಸಾಪ್ ಹೊಸ ಅವತಾರ್​ ಸ್ಟಿಕ್ಕರ್ ಪ್ಯಾಕ್​


    ಕಾಲಿಂಗ್​ ಶಾರ್ಟ್​ಕಟ್​ ಫೀಚರ್​


    ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಲ್‌ ಮಾಡುವವರಿಗೆ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇನ್ನು ಈ ಕಾಲಿಂಗ್‌ ಶಾರ್ಟ್‌ಕಟ್‌ ಫೀಚರ್ಸ್‌ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯದೆಯೇ ಕಾಲ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಂದರೆ ವಾಟ್ಸಾಪ್‌ನಲ್ಲಿ ನೀವು ಕಾಲ್‌ ಮಾಡಬೇಕಾದರೆ ಕಂಟ್ಯಾಕ್ಟ್‌ ಲಿಸ್ಟ್‌ ತೆಗೆದು ಹೆಸರನ್ನು ಸರ್ಚ್‌ ಮಾಡಬೇಕಾದ ಅನಿವಾರ್ಯತೆ ಬರುವುದಿಲ್ಲ.


    ಬದಲಿಗೆ ನೀವು ಶಾರ್ಟ್‌ಕಟ್‌ ಆಯ್ಕೆಯಲ್ಲಿರಿಸಿರುವ ಕಂಟ್ಯಾಕ್ಟ್‌ ಮೇಲೆ ಕ್ಲಿಕ್‌ ಮಾಡಿದರೆ ಅವರಿಗೆ ನೇರವಾಗಿ ಕರೆ ಹೋಗಲಿದೆ. ಇದಕ್ಕಾಗಿ ನೀವು ವಾಟ್ಸಾಪ್‌ ಅಪ್ಲಿಕೇಶನ್‌ ಅನ್ನು ತೆರೆಯಬೇಕಾದ ಅವಶ್ಯಕತೆಯಿರುವುದಿಲ್ಲ ಅನ್ನೊದು ವಾಟ್ಸಾಪ್‌ನ ಐಡಿಯಾ ಆಗಿದೆ. ಈ ಹೊಸ ಫೀಚರ್ಸ್‌ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸುವಷ್ಟು ಸುಲಭವಾಗಿ ಕರೆ ಮಾಡುವುದಕ್ಕೆ ಅವಕಾಶ ಸಿಗಲಿದೆ ಎನ್ನಲಾಗಿದೆ.




    ವಾಟ್ಸಾಪ್​ನಲ್ಲಿ ಪಿಕ್ಚರ್​ ಇನ್​ ಪಿಕ್ಚರ್​ ಫೀಚರ್​ ಬಿಡುಗಡೆ


    ವಾಟ್ಸಾಪ್​ ಬಳಕೆದಾರರಿಗಾಗಿ ಇತ್ತೀಚೆಗೆ ಹೊಸ ಫೀಚರ್​ ಒಂದನ್ನು ಬಿಡುಗಡೆ ಮಾಡಿದೆ. ಇದು ವಿಡಿಯೋ ಕರೆಯಲ್ಲಿ ಮಾತನಾಡುವವರಿಗೆ ಬಹಳಷ್ಟು ಸಹಕಾರಿಯಾಗುತ್ತದೆ ಎಂದು ಕಂಪೆನಿ ಹೇಳಿದೆ. ವಾಟ್ಸಾಪ್​ ಇದುವರೆಗೆ ಹಲವಾರು ಫೀಚರ್ಸ್​​ಗಳನ್ನು ಬಳಕೆದಾರರಿಗಾಗಿ ಬಿಡುಗಡೆ ಮಾಡಿದ್ದು, ಇದೀಗ ಈ ಸಾಲಿಗೆ ಪಿಕ್ಚರ್​ ಇನ್​ ಪಿಕ್ಚರ್​ ಫೀಚರ್​ ಸೇರಿದೆ. ಈ ಫೀಚರ್​ನಿಂದ ಇನ್ಮುಂದೆ ವಾಟ್ಸಾಪ್ ಬಳಕೆದಾರರು ಆರಾಮವಾಗಿ ವಿಡಿಯೋ ಕಾಲ್​ನಲ್ಲಿ ಮಾತನಾಡಬಹುದಾಗಿದೆ.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು