• Home
 • »
 • News
 • »
 • tech
 • »
 • Oppo A17K: ಇದಪ್ಪಾ ಎಲ್ಲರೂ ಒಪ್ಪುವ ಒಪ್ಪೋ ಫೋನ್! ಹೊಸ ಮೊಬೈಲ್‌ ಹೇಗಿದೆ? ಬೆಲೆ ಎಷ್ಟಿದೆ?

Oppo A17K: ಇದಪ್ಪಾ ಎಲ್ಲರೂ ಒಪ್ಪುವ ಒಪ್ಪೋ ಫೋನ್! ಹೊಸ ಮೊಬೈಲ್‌ ಹೇಗಿದೆ? ಬೆಲೆ ಎಷ್ಟಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚಾಗಿ ಗ್ರಾಹಕರು ಉತ್ತಮವಾದ ಮೊಬೈಲ್‌ಗಳನ್ನೇ ಬಯಸುತ್ತಾರೆ. ಆದ್ದರಿಂದ ಈ ರೀತಿಯ ಪ್ರೊಡಕ್ಟ್‌ಗಳು ಬಂದಾಗ ತಕ್ಷಣ ಖರೀದಿಸುತ್ತಾರೆ. ಈ ಸ್ಮಾರ್ಟ್‌ಫೋನ್‌ ಕೂಡಾ ಉತ್ತಮ ಬೆಲೆಯ ಫೋನ್‌ ಆಗಿದ್ದು, ಆಕರ್ಷಕ ವಿನ್ಯಾಸ, ಉತ್ತಮ ಬ್ಯಾಟರಿ, ಕ್ಯಾಮರಾಗಳನ್ನು ಹೊಂದಿದೆ. ಇನ್ನು ಈ ಮೊಬೈಲ್‌ನ ಬೆಲೆ, ಫೀಚರ್ಸ್‌ ಅನ್ನು ಈ ಕೆಳಗೆ ನೀಡಲಾಗಿದೆ. 

ಮುಂದೆ ಓದಿ ...
 • Share this:

  ಇದೀಗ ಸ್ಮಾರ್ಟ್‌ಫೋನ್‌ ಕಂಪನಿಗಳು (Smartphone company) ದಿನದಿಂದ ದಿನಕ್ಕೆ ಆಫರ್‌ಗಳನ್ನು (Offer) ಬಿಡುತ್ತಲೇ ಇದೆ. ಅದೇ ರೀತಿ ಈ ಬಾರಿ Oppo ಸ್ಮಾರ್ಟ್‌ಫೋನ್‌ ಕೂಡಾ ಅಗ್ಗದಲ್ಲಿ ಮೊಬೈಲ್‌ ಮಾರಾಟ ಮಾಡಲು ಸಿದ್ಧವಾಗಿದೆ. ಹೆಚ್ಚು ಬಜೆಟ್‌ನಲ್ಲಿ ಉತ್ತಮ ಕ್ಯಾಮರಾ, ಬ್ಯಾಟರಿಯ ಫೋನನ್ನು ರಿಲೀಸ್‌ ಮಾಡುತ್ತಿರುವ ಒಪ್ಪೋ ಈಗ ಅದೇ ಮಾದರಿಯ ಫೋನ್‌ನೊಂದಿಗೆ ಮತ್ತೆ ಬರುತ್ತಿದೆ. ಕಳೆದ ತಿಂಗಳು  ಒಪ್ಪೋ A ಸೀರಿಸ್‌ನಲ್ಲಿ (Oppo A17 series) ಹೊಸದಾಗಿ A17 (Oppo A17) ಫೋನನ್ನು ರಿಲೀಸ್‌ (Release) ಮಾಡಿತ್ತು. ಇದೀಗ ಇದರ ಮುಂದುವರೆದ ವರ್ಷನ್‌ (Version) ಆಗಿ A17K (Oppo A17K) ಎಂಬ ಮತ್ತೊಂದು ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ (Launch) ಮಾಡುತ್ತಿದೆ.


  ಹೆಚ್ಚಾಗಿ ಗ್ರಾಹಕರು ಉತ್ತಮವಾದ ಮೊಬೈಲ್‌ಗಳನ್ನೇ ಬಯಸುತ್ತಾರೆ. ಆದ್ದರಿಂದ ಈ ರೀತಿಯ ಪ್ರೊಡಕ್ಟ್‌ಗಳು ಬಂದಾಗ ತಕ್ಷಣ ಖರೀದಿಸುತ್ತಾರೆ. ಈ ಸ್ಮಾರ್ಟ್‌ಫೋನ್‌ ಕೂಡಾ ಉತ್ತಮ ಬೆಲೆಯ ಫೋನ್‌ ಆಗಿದ್ದು, ಆಕರ್ಷಕ ವಿನ್ಯಾಸ, ಉತ್ತಮ ಬ್ಯಾಟರಿ, ಕ್ಯಾಮರಾಗಳನ್ನು ಹೊಂದಿದೆ. ಇನ್ನು ಈ ಮೊಬೈಲ್‌ನ ಬೆಲೆ, ಫೀಚರ್ಸ್‌ ಅನ್ನು ಈ ಕೆಳಗೆ ನೀಡಲಾಗಿದೆ.


  A17Kನ ಬೆಲೆ ಮತ್ತು ಫೀಚರ್ಸ್‌


  • ಒಪ್ಪೋ A17K ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾದ ಒಂದು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದೆ. ಇದು 3GB RAM ಮತ್ತು 64GB ಸ್ಟೋರೇಜ್ ಹೊಂದಿದ್ದು 10,499 ರೂಪಾಯಿ ನಿಗದಿ ಮಾಡಲಾಗಿದೆ. ಈ ಫೋನ್‌ ಕಪ್ಪು ಮತ್ತು ಗೋಲ್ಡ್ ಕಲರ್‌ ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.


  ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಬಿಗ್‌ ಆಫರ್, ಮನೆಮಂದಿಗೆ ಗಿಫ್ಟ್‌ ಖರೀದಿಸೋಕೆ ಇದೆ ಚಾನ್ಸ್!

  • ಇನ್ನು ಈ ಸ್ಮಾರ್ಟಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯುಶನ್‌ ಹೊಂದಿದೆ. ಹಾಗೆ 6.5 ಇಂಚಿನ HD+ LCD ಡಿಸ್ ಪ್ಲೇ ಹಾಗೂ 60Hz ರಿಫ್ರೆಶ್‌ ರೇಟ್‌ನಿಂದ ಕೂಡಿದೆ.

  •  ಮೀಡಿಯಾ ಟೆಕ್‌ ಹೆಲಿಯೊ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ Android 12ನಲ್ಲಿ ಸಪೋರ್ಟ್‌ ನೀಡುತ್ತದೆ. ಹಾಗೇ ಇದು 6GB Ram ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.


  New attractive phone launch from Oppo Here is the information on how much it costs
  ಸಾಂದರ್ಭಿಕ ಚಿತ್ರ


  • Oppo A17 ಸ್ಮಾರ್ಟ್‌ಫೋನ್‌ ರಿಯರ್‌ ಕ್ಯಾಮರಾ ಸೆಟಪ್‌  ಹೊಂದಿದ್ದು ಇದರಲ್ಲಿ ಮುಖ್ಯ ಕ್ಯಾಮರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ.

  • 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ವಿಡಿಯೋ ಕರೆ ಮತ್ತು ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಅದೇ ರೀತಿ ಕ್ಯಾಮರಾ ಫೀಚರ್ಸ್‌ ನೈಟ್‌ ಮೋಡ್‌, ಟೈಮ್‌ಲಾಪ್ಸ್‌, ಎಕ್ಸ್‌ಪರ್ಟ್‌, ಪನೋರಮ ಮತ್ತು ಗೂಗಲ್‌ ಲೆನ್ಸ್‌ ಇದೆ.

  • ಹೆಚ್ಚು ಬಾಳಿಕೆ ಬರುವ 5000mah ಬ್ಯಾಟರಿಯನ್ನು ಹೊಂದಿದೆ. ಜೊತೆಗೆ ಸೂಪರ್‌ ಪವರ್‌ ಮೋಡ್‌ ಮತ್ತು ಸೂಪರ್‌ ನೈಟ್‌ಟೈಮ್‌ ಸ್ಟ್ಯಾಂಡ್‌ಬೈ ಅನ್ನು ಒಳಕೊಂಡಿದೆ.

  • ಡ್ಯುಯೆಲ್‌ ಸಿಮ್‌, Wifi 5, ಬ್ಲೂಟೂತ್‌ v5.3 ಹಾಗೂ ಮೈಕ್ರೊ ಯುಎಸ್‌ಬಿ ಪೋರ್ಟ್‌ ಸಿ ಯಿಂದ ಕೂಡಿದೆ.


  ಇದನ್ನೂ ಓದಿ: ನಿಮ್ಮ ವಾಟ್ಸಪ್ ಬ್ಯಾನ್‌ ಆಗಿದ್ಯಾ? ಹೀಗೆ ಮಾಡಿ ಅದನ್ನು ಸರಿ ಮಾಡ್ಕೊಳ್ಳಿ


  ಈ ರೀತಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಬರುವುದರಿಂದ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಮೊಬೈಲ್‌ಅನ್ನು ಪಡೆಯಬಹುದು. ಈಗಿನ ತಂತ್ರಜ್ಞಾನಗಳು ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸುವುದರಿಂದ ಹೆಚ್ಚು ಲಾಭವನ್ನು ಪಡೆಯುತ್ತದೆ. ಹಾಗೆ ಗ್ರಾಹಕರು ಕೂಡ ಈ ರೀತಿಯದ್ದೆ ಪ್ರೊಡಕ್ಟ್‌ಗಳನ್ನು ಹುಡುಕುತ್ತಿರುತ್ತಾರೆ.

  Published by:Harshith AS
  First published: