ನೀವು ಈ ಬ್ಯಾಂಕಿಂಗ್ ಆ್ಯಪ್​ ಬಳಸುತ್ತಿದ್ದೀರಾ? ಹಾಗಿದ್ರೆ ನಿಮ್ಮ ಹಣ ಮಂಗಮಾಯ ಗ್ಯಾರೆಂಟಿ!

ಹೆಚ್ಚಿನ ಬ್ಯಾಂಕುಗಳು ಇಂತಹ ನಕಲಿ ಆ್ಯಪ್​ನ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿಲ್ಲ

zahir | news18
Updated:February 8, 2019, 3:15 PM IST
ನೀವು ಈ ಬ್ಯಾಂಕಿಂಗ್ ಆ್ಯಪ್​ ಬಳಸುತ್ತಿದ್ದೀರಾ? ಹಾಗಿದ್ರೆ ನಿಮ್ಮ ಹಣ ಮಂಗಮಾಯ ಗ್ಯಾರೆಂಟಿ!
@Digital Trends
zahir | news18
Updated: February 8, 2019, 3:15 PM IST
ಭಾರತೀಯರು ಇತ್ತೀಚಿನ ವರ್ಷಗಳಿಂದ ಡಿಜಿಟಲ್​ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಅದರಂತೆ ಹಲವು ಬ್ಯಾಂಕುಗಳು ಮೊಬೈಲ್​ ಅಪ್ಲಿಕೇಶನ್​ಗಳನ್ನು ಹೊರ ತಂದಿದೆ. ಇನ್ನು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಹತ್ತು ಹಲವು ಬ್ಯಾಂಕಿಂಗ್ ಆ್ಯಪ್​​ಗಳನ್ನು ಕಾಣಬಹುದು. ಇವುಗಳಲ್ಲಿ ಹೆಚ್ಚಿನವು ನಕಲಿ ಆ್ಯಪ್​ಗಳು ಎಂಬ ಅಚ್ಚರಿಯ ವರದಿಯೊಂದು ಬಹಿರಂಗವಾಗಿದೆ. ಈ ವರದಿ ಪ್ರಕಾರ ಗೂಗಲ್​ ಪ್ಲೇ ಸ್ಟೋರ್​ನಲ್ಲಿ SBI, ICICI, ಆಕ್ಸಿಸ್​ ಬ್ಯಾಂಕ್, ಸಿಟಿ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕುಗಳ ನಕಲಿ ಆ್ಯಪ್​ಗಳನ್ನು ಸೃಷ್ಟಿಸಲಾಗಿದೆ. ಈ ಆ್ಯಪ್​ಗಳನ್ನು ಬಳಸಿದರೆ ನಿಮ್ಮ ಬ್ಯಾಂಕ್​ ಡೇಟಾ ಸೋರಿಕೆಯಾಗಲಿದೆ. ಐಟಿ ಸೆಕ್ಯುರಿಟಿ ಫಾರ್ಮ್ ಸೊಫೋಸ್ ಲ್ಯಾಬ್ಸ್​ ನೀಡಿದ ವರದಿ ಪ್ರಕಾರ, ಹ್ಯಾಕರುಗಳು ನಕಲಿ ಅಪ್ಲಿಕೇಶನ್​ಗಳನ್ನು ಪ್ಲೇಸ್ಟೋರ್​ನಲ್ಲಿ ನೀಡಿದ್ದು, ಈ ಆ್ಯಪ್​ ಬಳಸಿದ ಗ್ರಾಹಕರ ಮಾಹಿತಿಗಳನ್ನು ಕದಿಯಲಾಗುತ್ತಿದೆ ಎಂದು ತಿಳಿಸಿದೆ.

ನಕಲಿ Vs ಅಸಲಿ
ಈ ವರದಿಯಲ್ಲಿ ನಕಲಿ ಅಪ್ಲಿಕೇಶನ್​ಗಳು ಅಸಲಿ ಬ್ಯಾಂಕ್​ ಆ್ಯಪ್​ ಅನ್ನು ಹೋಲುತ್ತದೆ ಎಂದು ಹೇಳಲಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಮೊದಲು ಸಿಗುವ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳುತ್ತಾರೆ. ಇಲ್ಲಿ ನಕಲಿ ಯಾವುದು ಮತ್ತು ಅಸಲಿ ಯಾವುದೆಂದು ತಿಳಿಯಲು ಯಾವುದೇ ಆಯ್ಕೆಗಳಿರುವುದಿಲ್ಲ. ಹೀಗಾಗಿ ಡೌನ್​ಲೋಡ್​ ಮಾಡಿಕೊಂಡ ಆ್ಯಪ್​ನಲ್ಲಿ ಖಾತೆದಾರರು ತಮ್ಮ ಬ್ಯಾಂಕಿಂಗ್ ಮಾಹಿತಿಗಳನ್ನು ನಮೂದಿಸುತ್ತಾರೆ. ಹೀಗೆ ನೀವು ನಮೂದಿಸಿದ ಅಪ್ಲಿಕೇಶನ್​ಗಳು ಮಾಲ್ವೇರ್​(ವೈರಸ್​) ಆ್ಯಪ್​ಗಳಿದ್ದು, ಅದರ ಮೂಲಕ ಸಾವಿರಾರು ಬ್ಯಾಂಕ್ ಖಾತೆದಾರರ ಕ್ರೆಡಿಟ್ ಕಾರ್ಡ್​ ಮತ್ತು ಖಾತೆಯ ವಿವರಗಳಿಗೆ ಹ್ಯಾಕರುಗಳು ಕನ್ನ ಹಾಕುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಬ್ಯಾಂಕುಗಳಿಂದ ತನಿಖೆಗೆ ಆದೇಶ
ಹೆಚ್ಚಿನ ಬ್ಯಾಂಕುಗಳು ಇಂತಹ ನಕಲಿ ಆ್ಯಪ್​ನ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿಲ್ಲ ಎಂದು ತಿಳಿಸಿದೆ. ಇದರ ಹೊರತಾಗಿ ಕೆಲ ಬ್ಯಾಂಕುಗಳು ಫೇಕ್​ ಆ್ಯಪ್​ಗಳ ಬಗ್ಗೆ ತನಿಖೆಗೆ ಮುಂದಾಗಿದೆ. ಕಂಪ್ಯೂಟರ್​ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳನ್ನು ನಿಯಂತ್ರಿಸುವ ನ್ಯಾಷನಲ್ ನೋಡಲ್ ಏಜೆನ್ಸಿ CERT-in ಇದರ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಲಾಗಿದೆ.

7 ನಕಲಿ ಆ್ಯಪ್​ಗಳು ಚಾಲ್ತಿಯಲ್ಲಿ!
Loading...

SBI, ICICI, ಆಕ್ಸಿಸ್​ ಬ್ಯಾಂಕ್, ಸಿಟಿ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಯೆಸ್ ಬ್ಯಾಂಕ್​ಗಳ ನಕಲಿ ಆ್ಯಪ್​ಗಳನ್ನು ಸೃಷ್ಟಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ. ಸಿಟಿ ಇಂಡಿಯಾ ವಕ್ತಾರರ ಪ್ರಕಾರ, ವರದಿಯಲ್ಲಿ ಉಲ್ಲೇಖಿಸಲಾದ ಆ್ಯಪ್​ಗಳ ಬದ್ಧತೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ಸೊಪೋಸ್ ಲ್ಯಾಬ್ಸ್​ಗೆ ಪತ್ರದ ಮೂಲಕ ಬ್ಯಾಂಕಿನ ಹೆಸರನ್ನು ತೆಗೆದು ಹಾಕುವಂತೆ ಕೇಳಿಕೊಳ್ಳಲಾಗಿದೆ. ಹಾಗೆಯೇ ಈ ರೀತಿಯ ಸಮಸ್ಯೆಯ ಬಗ್ಗೆ ತನಿಖೆ ನಡೆಸುವಂತೆ ಸೈಬರ್ ವಂಚನೆ ಇಲಾಖೆಗೆ ಮಾಹಿತಿ ನೀಡಿರುವುದಾಗಿ ಬ್ಯಾಂಕ್​ ಹೇಳಿಕೊಂಡಿದೆ.

ಇದನ್ನೂ ಓದಿ: Happy Valentines Day 2019 , Propose Day: ಪ್ರೇಮ ನಿವೇದನೆಗೆ ಒಂದಷ್ಟು ಟಿಪ್ಸ್​
First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...