Netflix Offer: ವಾರಾಂತ್ಯಕ್ಕೆ ಉಚಿತ ಸೇವೆ ನೀಡಲು ಮುಂದಾದ ನೆಟ್​​ಫ್ಲಿಕ್ಸ್​!

ನೆಟ್​ಫ್ಲಿಕ್ಸ್​​ ಈಗಾಗಲೇ ಹೊಸ ಬಳಕೆದಾರರಿಗೆ 30 ದಿನಗಳ ಕಾಲ ಉಚಿತ ಸೇವೆಯನ್ನು ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ವೆಬ್ ಸಿರೀಸ್ ಅನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದೆ.

ನೆಟ್​​ಫ್ಲಿಕ್ಸ್

ನೆಟ್​​ಫ್ಲಿಕ್ಸ್

 • Share this:
  ಕೊರೋನಾ ಸಮಯದಲ್ಲಿ ಒಟಿಟಿ ಫ್ಲಾರ್ಟ್​ಫಾರ್ಮ್​ಗಳ ಬಳಕೆ ಹೆಚ್ಚಾಗಿದೆ. ಅನೇಕರು ನೆರ್ಟ್​ಫ್ಲಿಕ್ ಮೂಲಕ ಸಿನಿಮಾ, ವೆಬ್ ಸಿರೀಸ್ ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ಆದರೀಗ ನೆಟ್​ಫ್ಲಿಕ್ ಇಂತಹ ಸಮಯದಲ್ಲಿ ಉಚಿತ ಸೇವೆ ನೀಡಲು ಮುಂದಾಗಿದೆ.

  ಭಾರತ ಮಾತ್ರವಲ್ಲದೆ, ವಿದೇಶದಲ್ಲೂ ಉಚಿತ ಸೇವೆಯನ್ನು ನೀಡಲು ನೆಟ್​ಫ್ಲಿಕ್ಸ್​​ ಮುಂದಾಗಿದೆ. ವಾರಾತ್ಯದಲ್ಲಿ ಸೇವೆಯನ್ನು ನೀಡುವ ಬಗ್ಗೆ ಚಿಂತಿಸಿದೆ.

  ನೆಟ್​ಫ್ಲಿಕ್ಸ್​​ ಈಗಾಗಲೇ ಹೊಸ ಬಳಕೆದಾರರಿಗೆ 30 ದಿನಗಳ ಕಾಲ ಉಚಿತ ಸೇವೆಯನ್ನು ನೀಡುತ್ತಿದೆ. ಅಷ್ಟು ಮಾತ್ರವಲ್ಲದೆ, ವೆಬ್ ಸಿರೀಸ್ ಅನ್ನು ಉಚಿತವಾಗಿ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದೆ. ಇತ್ತೀಚೆಗೆ ಕ್ಯಾಲಿಫೋರ್ನಿಯಾ, ಲಾಸ್ ಗ್ಯಾಟೋಸ್​​ನಲ್ಲಿ 30 ದಿನಗಳ ಉಚಿತ ಸೇವೆಯನ್ನು ಒದಗಿಸುವುದನ್ನು ನಿಲ್ಲಿಸಿದೆ. ಆದರೆ ಭಾರತದಲ್ಲಿ ಈ ಸೇವೆಯನ್ನು ನೀಡುತ್ತಿದೆ.

  ಸದ್ಯ ದೇಶದ ಪ್ರತಿಯೊಬ್ಬರಿಗೂ ವಾರಾಂತ್ಯದಲ್ಲಿ ನೆಟ್​ಫ್ಲಿಕ್ಸ್​​ ಪ್ರವೇಶವನ್ನು ಉಚಿತವಾಗಿ ನೀಡುವ ಬಗ್ಗೆ ಚಿಂತಿಸಿದೆ. ಸಿನಿಮಾ, ಸಿರೀಸ್​ಗಳನ್ನು ವೀಕ್ಷಿಸುವ ಮೂಲಕ ಹೊಸ ಗ್ರಾಹಕರನ್ನು ಸೆಳೆದುಕೊಳ್ಳಲು ಈ ರೀತಿಯ ಯೋಜನೆ ಹಾಕಿಕೊಂಡಿದೆ.

  ನೆಟ್​ಫ್ಲಿಕ್ಸ್​​ ವಾರಾಂತ್ಯದಲ್ಲಿ ಪ್ರತಿಯೊಬ್ಬರಿಗೂ ಉಚಿತವಾಗಿ ಸೇವೆಯನ್ನು ನೀಡುವ ಬಗ್ಗೆ ಹೆಚ್ಚೇನು ಹೇಳಿಕೊಂಡಿಲ್ಲ.

  ನೆಟ್​​ಫ್ಲಿಕ್ಸ್​ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಕ್ತಾರರೊಬ್ಬರು ಈ ಬಗ್ಗೆ ಮಾತನಾಡಿದ್ದು, , ಹೊಸ ಸದಸ್ಯರನ್ನು ಆಕರ್ಷಿಸಲು ಮತ್ತು ಅವರಿಗೆ ಹೊಸ ಅನುಭವವನ್ನು ನೀಡಲು ನಾವು ಮಾರ್ಕೆಂಟಿಗ್ ಪ್ರಚಾರದತ್ತ ಹೆಚ್ಚು ಪ್ರಯತ್ನಿಸುತ್ತಿದ್ದೇವೆ.ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ಹಾಟ್​ಸ್ಟಾರ್​​ನಂತಹ ಫ್ಲಾರ್ಟ್​ಫಾರ್ಮ್​ ಎದುರು ಸ್ಪರ್ಧಿಸಲು ನೆರ್ಟ್​ಫ್ಲಿಕ್ಸ್​ಗೆ  ಪ್ರಚಾರದ ಅಗತ್ಯವಿದೆ. ಸೆ.30 ವೇಳೆ 19.5 ಕೋಟಿ ಚಂದಾದಾರನ್ನು ತಲುಪಿದೆ ಎಂದರು.

  ಗಂಟೆಗೆ 532.93 ಕಿ.ಮೀ! ಅಗೇರಾ ಕಾರಿನ ದಾಖಲೆಯನ್ನು ಮುರಿದು ವಿಶ್ವದಾಖಲೆ ಬರೆದ ಟುವಾಟೆರಾ!
  Published by:Harshith AS
  First published: