Netflix StreamFest: ನೆಟ್​​ಫ್ಲಿಕ್ಸ್​​ ಸ್ಟ್ರೀಮ್​​ಫೆಸ್ಟ್​; ಭರ್ಜರಿ ಆಫರ್​; 2 ದಿನಗಳ ಕಾಲ ಉಚಿತ ಸಿನಿಮಾ ನೋಡುವ ಅವಕಾಶ

Netflix: ನೆಟ್​ಫ್ಲಿಕ್ಸ್​ ಹಮ್ಮಿಕೊಂಡಿರುವ ಸ್ಟ್ರೀಮ್​ಫೆಸ್ಟ್​​ ಮಧ್ಯಾಹ್ನ 12.01 ರಂದು ಪ್ರಾರಂಭವಾಗಿ ಡಿಸೆಂಬರ್​ 6 ರಂದು 11:59ರವರೆ ಇರಲಿದೆ.

ನೆಟ್​​ಫ್ಲಿಕ್ಸ್

ನೆಟ್​​ಫ್ಲಿಕ್ಸ್

 • Share this:
  ನೆಟ್​ಫ್ಲಿಕ್ಸ್​​ ಇಂಡಿಯಾ ಸ್ಟ್ರೀಮ್​ಫೆಸ್ಟ್​ ಆಯೋಜನೆ ಮಾಡಿದ್ದು, ವಾರಂತ್ಯದಲ್ಲಿ ಉಚಿತ ಸೇವೆ ನೀಡಲು ಮುಂದಾಗಿದೆ. ಡಿಸೆಂಬರ್​​ 5ರಿಂದ 6ರವರೆಗೆ ನೆಟ್​ಫ್ಲಿಕ್ಸ್​ ಮೂಲಕ ಉಚಿತ ಸಿನಿಮಾ, ಟಿವಿ ಶೋ, ಡಾಕುಮೆಂಟ್​ ವೀಕ್ಷಿಸಬಹುದಾದ ಅವಕಾಶ ನೀಡುತ್ತಿದೆ.

  ನೆಟ್​ಫ್ಲಿಕ್ಸ್​ ಹಮ್ಮಿಕೊಂಡಿರುವ ಸ್ಟ್ರೀಮ್​ಫೆಸ್ಟ್​​ ಮಧ್ಯಾಹ್ನ 12.01 ರಂದು ಪ್ರಾರಂಭವಾಗಿ ಡಿಸೆಂಬರ್​ 6 ರಂದು 11:59ರವರೆ ಇರಲಿದೆ. ಬಳಕೆದಾರರಿಗೆ ಆ್ಯಪ್ ಡೌನ್​​​ಲೋಡ್​ ಮಾಡಿಕೊಂಡು ಸ್ಮಾರ್ಟ್​ಫೋನ್​ನಲ್ಲೂ ವೀಕ್ಷಿಸಬಹುದಾಗಿದೆ ಎಂದು ನೆಟ್​ಫ್ಲಿಕ್ಸ್​ ತಿಳಿಸಿದೆ.

  ನೆಟ್​ಪ್ಲಿಕ್ಸ್​ ಖಾತೆಯನ್ನು ತೆರೆಯುವುದು ಸೀಮಿತವಾಗಿದೆ. ಆದರೆ ಎಲ್ಲಾ ಡಿವೈಸ್​ ನಲ್ಲೂ ವೀಕ್ಷಿಸಬಹುದಾಗಿದೆ. ಬಿಗ್​ ಸ್ಕ್ರೀನ್ ಮೂಲಕ ನೆಟ್​ಪ್ಲಿಕ್ಸ್​ ವೀಕ್ಷಿಸಬಹುದಾಗಿದೆ. ಆದರೆ ಈ ಮೊದಲು ನೆಟ್​​ಫ್ಲಿಕ್ಸ್​ ನೋಡಲು ಬಳಸಿದ ಇಮೇಲ್​ ವಿಳಾಸ ಅಥವಾ ಫೋನ್​ ನಂಬರ್​ ಅನ್ನು ನಮೂದಿಸಬೇಕು.  ಭಾರತ ಎಲ್ಲಾ ನೆಟ್​ಫ್ಲಿಕ್ಸ್​ ಬಳಕೆದಾರರಿಗೆ ಈ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ಆದರೆ ಸೀಮಿತ ಜನರು ಮಾತ್ರ ಈ ಸೇವೆಯನ್ನು ವೀಕ್ಷಿಸಬಹುದಾದ ಆಯ್ಕೆಯನ್ನು ನೀಡುತ್ತಿದೆ.
  Published by:Harshith AS
  First published: