news18-kannada Updated:December 9, 2020, 5:19 PM IST
ನೆಟ್ಫ್ಲಿಕ್ಸ್
ನೆಟ್ಫ್ಲಿಕ್ಸ್ ಉಚಿತ ಸ್ಟ್ರೀಮ್ ಫೆಸ್ಟ್ ಹಮ್ಮಿಕೊಂಡಿದ್ದು, ಈಗಾಗಲೇ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಇದೀಗ ಎರಡನೇ ಹಂತದ ಉಚಿತ ಸೇವೆಯನ್ನು ಆರಂಭಿಸಿದೆ. ಇಂದಿನಿಂದ ಪ್ರಾರಂಭವಾಗಿ ಡಿಸೆಂಬರ್ 11ರವರೆಗೆ ಸೇವೆ ನೀಡಲಿದೆ. ಉಚಿತವಾಗಿ ಸಿನಿಮಾ, ಸಿರೀಸ್ ನೋಡುವ ಅವಕಾಶವನ್ನು ಕಲ್ಪಿಸಿದೆ.
ಈಗಾಗಲೇ ನೆಟ್ಫ್ಲಿಕ್ಸ್ ನೀಡುತ್ತಿರುವ ಉಚಿತ ಸ್ಟ್ರೀಮ್ ಸೇವೆಯನ್ನು ಅನೇಕರು ನೋಡುತ್ತಿದ್ದಾರೆ. ನಿಗದಿತ ಬಳಕೆದಾರರಿಗೆ ಮಾತ್ರ ಈ ಸೇವೆ ಒದಗಿಗುತ್ತಿದೆ. ಖಾತೆ ತೆರೆಯದೆ ಸಿನಿಮಾ ಮತ್ತು ಕಾರ್ಯಕ್ರಮಗಳನ್ನುಸುಲಭವಾಗಿ ವೀಕ್ಷಿಸಬಹುದಾಗಿದೆ.
ಆ್ಯಂಡ್ರಾಯ್ಡ್, ಐಫೋನ್, ಸ್ಮಾರ್ಟ್ಟಿವಿ ಮೂಲಕ ನೆಟ್ಫ್ಲಿಕ್ ಉಚಿತ ಸ್ಟ್ರೀಮ್ ಸೇವೆಯನ್ನು ವೀಕ್ಷಿಸಬಹುದಾಗಿದೆ. ಮೊದಲ ಹಂತದಲ್ಲಿ ಈ ಸೇವೆಯ ಲಾಭ ಪಡೆದವರು ಎರಡನೇ ಬಾರಿಗೆ ಉಚಿತವಾಗಿ ಲಾಗಿನ್ ಆಗಲು ಆಗುವುದಿಲ್ಲ.
https://www.netflix.com/in/StreamFest ಲಿಂಕ್ ಮೇಲೆ ಕ್ಲಿಕ್ ಮಾಡಿ ಹೆಸರು. ಇಮೇಲ್ ವಿಳಾಸ, ಪಾಸ್ವರ್ಡ್ ನಮೂದಿಸಿ ಉಚಿತ ಸೇವೆ ಪಡೆಯಬಹುದಾಗಿದೆ.
Published by:
Harshith AS
First published:
December 9, 2020, 5:16 PM IST