ಓಟಿಟಿ ಪ್ಲಾಟ್ಫಾರ್ಮ್ (OTT Platform) ಮೂಲಕ ಎಲ್ಲರ ಗಮನ ಸೆಳೆದಿದ್ದ ನೆಟ್ಫ್ಲಿಕ್ಸ್ (Netflix) ಇದೀಗ ಹೊಸ ಪ್ರಯತ್ನವನ್ನು ಕೈಗೊಂಡಿದೆ. ಈ ಮೂಲಕ ನೆಟ್ಫ್ಲಿಕ್ಸ್ ಇಂಡಿಯಾ ಮತ್ತು ಬೋಟ್ ರಾಕರ್ಸ್ (Boat Rockers) ಇವೆರಡೂ ಕಂಪನಿಗಳು ಸೇರಿಕೊಂಡು 3 ಆಡಿಯೋ ಡಿವೈಸ್ಗಳನ್ನು (Audio Device) ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ನೆಟ್ಫ್ಲಿಕ್ಸ್ ಎಂಬು ಒಂದು ಓಟಿಟಿ ವೇದಿಕೆಯಾಗಿದ್ದು ಇದು ತನ್ನ ಪ್ಲಾಟ್ಫಾರ್ಮ್ನಲ್ಲಿ ವಿಡಿಯೋ ಸ್ಟ್ರೀಮಿಂಗ್ (Video Streaming) ಮಾಡುವ ಮೂಲಕ ಬಹಳಷ್ಟು ಗ್ರಾಹಕರನ್ನು ಹೊಂದಿತ್ತು. ಆದರೆ ಬೋಟ್ ತನ್ನ ಆಡಿಯೋ ಡಿವೈಸ್ಗಳನ್ನು ಬಿಡುಗಡೆ ಮಾಡುವ ಮೂಲಕ ದೇಶದ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನವನ್ನು ಪಡೆದೊಂಡಿದೆ. ಇದೀಗ ಈ ಎರಡು ಕಂಪನಿಗಳು ಸೇರಿ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸಲಿದೆ.
ಹೌದು, ನೆಟ್ಫ್ಲಿಕ್ಸ್ ಓಟಿಟಿ ಪ್ಲಾಟ್ಫಾರ್ಮ್ ಆಗಿ ಬೋಟ್ನೊಂದಿಗೆ ಕೈಜೋಡಿಸಿದ್ದು ವಿಶೇಷ ಎನ್ನಬಹುದು. ಇದೀಗ ಕೆಲವೇ ದಿನಗಳಲ್ಲಿ ಈ ಎರಡು ಕಂಪನಿಗಳಿಂದ 3 ಆಡಿಯೋ ಡಿವೈಸ್ಗಳು ದೇಶದ ಮಾರುಕಟ್ಟೆಗೆ ಕಾಲಿಡಲಿದೆ. ಹಾಗಿದ್ರೆ ಇದರ ಬೆಲೆ, ವಿಶೇಷತೆಗಳೇನು ಎಂಬುದನ್ನು ಈ ಕೆಳಗೆ ಓದೋಣ.
ಯಾವುದೆಲ್ಲಾ ಆ ಬೋಟ್, ನೆಟ್ಫ್ಲಿಕ್ಸ್ನ ಡಿವೈಸ್ಗಳು:
ನೆಟ್ಫ್ಲಿಕ್ಸ್ ಈ ಬಾರಿ ಬಿಡುಗಡೆ ಮಾಡಲಿರುವಂತಹ ಪ್ರೊಡಕ್ಟ್ನ ಮುಖ್ಯ ಉದ್ದೇಶವೇ ನಾಯ್ಸ್ಕ್ಯಾನ್ಸಲಿಂಗ್ ಫೀಚರ್ಸ್ ಅನ್ನು ಒಳಗೊಂಡಿರುವುದು. ಈ ಬೋಟ್ ಮತ್ತು ನೆಟ್ಫ್ಲಿಕ್ಸ್ ಬಿಡುಗಡೆ ಮಾಡುವಂತಹ ಪ್ರೊಡಕ್ಟ್ಗಳು ಇದೇ ಡಿಸೆಂಬರ್ 20 ರಿಂದ ಮಾರುಕಟ್ಟೆಯಲ್ಲಿ ಲಭ್ಯ ಇರಲಿವೆ. ಬೋಟ್ X ನೆಟ್ಫ್ಲಿಕ್ಸ್ ಸ್ಟ್ರೀಮ್ ಆವೃತ್ತಿಯು ಮೂರು ವರ್ಷನ್ಗಳಲ್ಲಿ ಬರಲಿದೆ, ಬೋಟ್ ನಿರ್ವಾಣ 751ANC, ಏರ್ಡೋಪ್ಸ್ 411ANC ಮತ್ತು ರಾಕರ್ಸ್ 333 ಪ್ರೋಗಳಾಗಿದೆ. ಈ ಸಾಧನಗಳಿಗೆ ಈಗಾಗಲೇ ಪ್ರಿಬುಕಿಂಗ್ ಆರಂಭವಾಗಿದೆ.
ಇದನ್ನೂ ಓದಿ: ಜನಪ್ರಿಯ ’ಕೂ’ ಆ್ಯಪ್ನ ಟ್ವಿಟರ್ ಅಕೌಂಟ್ ಡಿಲೀಟ್! ಕಾರಣ ಏನು ಗೊತ್ತಾ?
ಬೋಟ್ ನಿರ್ವಾಣ 751ANC:
ಬೋಟ್ ಮತ್ತು ನೆಟ್ಫ್ಲಿಕ್ಸ್ನಿಂದ ಬಿಡುಗಡೆಯಾಗುವಂತಹ ಬೋಟ್ ನಿರ್ವಾಣ 751ಎಎನ್ಸಿ ಆಡಿಯೋ ಗ್ಯಾಜೆಟ್ ಉತ್ತಮ ಫೀಚರ್ಸ್ ಅನ್ನು ಹೊದಿರಲಿದೆ. ಇದು ವಾಯರ್ಲೆಸ್ ಹೆಡ್ಫೋನ್ ಆಗಿದ್ದು. 40mm ಡ್ರೈವರ್ಗಳನ್ನು ಹೊಂದಿದೆ. ಈ ಮೂಲಕ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಅನ್ನು ಹೊಂದಿದ್ದು 1ಡಿಬಿಯವರೆಗೆ ಇದು ಒಳಗೊಂಡಿದೆ. ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 65 ಗಂಟೆಗಳ ಕಾಲ ನಿರಂತರವಾಗಿ ಬಳಕೆ ಮಾಡಬಹುದಾಗಿದೆ.
ಬೋಟ್ ಏರ್ಡೊಪ್ಸ್ 411ANC
ಇದು ಕೂಡ ವಾಯರ್ಲೆಸ್ ಇಯರ್ಬಡ್ಸ್ ಆಗಿದೆ. ಇದು ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ ಅನ್ನು ಒಳಗೊಂಡಿದ್ದು ಇದು 25ಡಿಬಿಯವರೆಗೆ ಫೀಚರ್ ಅನ್ನು ಹೊಂದಿದೆ.ಇನ್ನು ಇದು 10mm ಡ್ರೈವರ್ಗಳನ್ನು ಹೊಂದಿಕೊಂಡು ಉತ್ತಮ ಸೌಂಡ್ ಅನ್ನು ಇದು ನೀಡುತ್ತದೆ. ಇನ್ನು ಇದರ ಬ್ಯಾಟರಿ ಫೀಚರ್ಸ್ ಬಗ್ಗೆ ಹೇಳುವುದಾದರೆ ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 17.5 ಗಂಟೆಯವರೆಗೆ ನಿರಂತರವಾಗಿ ಬಳಸಬಹುದಾಗಿದೆ.
ರಾಕರ್ಸ್ 333 ಪ್ರೋ ನೆಕ್ಬ್ಯಾಂಡ್ನ ಫೀಚರ್ಸ್
ಈ ರಾಕರ್ಸ್ 333 ಪ್ರೋ ನೆಕ್ಬ್ಯಾಂಡ್ ವಾಯರ್ಲೆಸ್ ಬ್ಲೂಟೂತ್ ನೆಕ್ ಬ್ಯಾಂಡ್ ಆಗಿದ್ದು ಡ್ಯುಯಲ್ 10mm ಡ್ರೈವರ್ಗಳೊಂದಿಗೆ ಉತ್ತಮ ಸೌಂಡ್ ಫೀಚರ್ ಅನ್ನು ಹೊಂದಿದೆ. ಇನ್ನು ಇದು ಬಹಳ ಹಗುರವಾದ ವಿನ್ಯಾಸವನ್ನು ಹೊಂದಿದೆ. ಬ್ಲೂಟೂತ್ ಆವೃತ್ತಿ v5.2 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ IPX5 ರೇಟಿಂಗ್ನೊಂದಿಗೆ ಬೆವರು ಮತ್ತು ನೀರು ನಿರೋಧಕವಾಗಿದ್ದು, 150mAh ಸಾಮರ್ಥ್ಯದ ಬ್ಯಾಟರಿ ಮತ್ತು ಚಾರ್ಜಿಂಗ್ಗಾಗಿ ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ನೀಡಲಾಗಿದೆ.
ಬೆಲೆ ಮತ್ತು ಲಭ್ಯತೆ:
ಬೋಟ್ ನಿರ್ವಾಣ 751ANC ಡಿವೈಸ್ಗೆ 3,999 ರೂಪಾಯಿಯಲ್ಲಿ ಖರೀದಿ ಮಾಡಬಹುದಾಗಿದೆ.
ಹಾಗೆಯೇ ಬೋಟ್ ಏರ್ಡೋಪ್ಸ್ 411ANC ಇಯರ್ಬಡ್ಸ್ಗೆ 2,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ.
ರಾಕರ್ಸ್ 333 ಪ್ರೋ ನೆಕ್ಬ್ಯಾಂಡ್ಗೆ 1,699 ರೂ.ಗಳ ಬೆಲೆ ಇದೆ. ಈ ಆಡಿಯೋ ಡಿವೈಸ್ಗಳು ಪ್ರಸ್ತುತವಾಗಿ ಪ್ರೀ ಬುಕಿಂಗ್ ಮಾಡಿ ಖರೀದಿ ಮಾಡಬಹುದು. ಇವುಗಳ ಮಾರಾಟವು ಡಿಸೆಂಬರ್ 20 ರಂದು ಮಧ್ಯಾಹ್ನ 12 ಗಂಟೆಗೆ ಇಕಾಮರ್ಸ್ ವೆಬ್ಸೈಟ್ನಲ್ಲಿ ಪ್ರಾರಂಭವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ