ನೆಟ್​​ಫ್ಲಿಕ್ಸ್​ ಭರ್ಜರಿ ಆಫರ್: ಕೇವಲ 65 ರೂ. ರೀಚಾರ್ಜ್​ನಲ್ಲಿ ಸಾವಿರಾರು ಸಿನಿಮಾ ಹಾಗೂ ವೆಬ್​ ಸಿರೀಸ್ ವೀಕ್ಷಿಸುವ ಅವಕಾಶ

ನೆಟ್​ಫ್ಲಿಕ್ಸ್​ ಕಂಪೆನಿಯು ಭಾರತೀಯ ಮನರಂಜನಾ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಈ ಯೋಜನೆಯನ್ನು ಪರಿಚಯಿಸಿದೆ ಎನ್ನಲಾಗಿದೆ.

zahir | news18
Updated:April 10, 2019, 4:01 PM IST
ನೆಟ್​​ಫ್ಲಿಕ್ಸ್​ ಭರ್ಜರಿ ಆಫರ್: ಕೇವಲ 65 ರೂ. ರೀಚಾರ್ಜ್​ನಲ್ಲಿ ಸಾವಿರಾರು ಸಿನಿಮಾ ಹಾಗೂ ವೆಬ್​ ಸಿರೀಸ್ ವೀಕ್ಷಿಸುವ ಅವಕಾಶ
@Adweek
zahir | news18
Updated: April 10, 2019, 4:01 PM IST
ಮನರಂಜನಾ ಕ್ಷೇತ್ರದ ವೇದಿಕೆ ನೆಟ್​ಫ್ಲಿಕ್ಸ್ ಇದೀಗ ಮೊಬೈಲ್​ ಹಾಗೂ ಟ್ಯಾಬ್ಲೆಟ್​ ಬಳಕೆದಾರರಿಗೆ ಹೊಸ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ನೀವು 65 ರೂ.ಗೆ ರೀಚಾರ್ಜ್​ ಮಾಡಿಕೊಂಡರೆ ಒಂದು ವಾರಗಳ ಕಾಲ ಆಯಾ ವಿಭಾಗದಲ್ಲಿ ವಿಡಿಯೋ ಸ್ಟ್ರೀಮಿಂಗ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ. ಇದಲ್ಲದೆ ಇತರೆ ಮೂರು ಪ್ಲ್ಯಾನ್​ಗಳನ್ನು ನೆಟ್​ಫ್ಲಿಕ್ಸ್​ ಗ್ರಾಹಕರ ಮುಂದಿಟ್ಟಿದೆ.

ನೆಟ್​ಫ್ಲಿಕ್ಸ್ ನಾಲ್ಕು ಪ್ಲ್ಯಾನ್​ಗಳು:
ನೆಟ್​​ಫ್ಲಿಕ್ಸ್​ ಇಂಡಿಯಾ ನಾಲ್ಕು ರೀಚಾರ್ಜ್​​ ಪ್ಲ್ಯಾನ್​ಗಳನ್ನು ಪ್ರಸ್ತುತ ಪಡಿಸಿದ್ದು, ಇಲ್ಲಿ 65 ರೂ, 125 ರೂ, 165 ರೂ, 200 ರೂ ಯೋಜನೆಗಳು ಗ್ರಾಹಕರಿಗೆ ಲಭ್ಯವಿರಲಿದೆ.

-65 ರೂ. ಯೋಜನೆಯಲ್ಲಿ ನೀವು ಒಂದು ಮೊಬೈಲ್​ನಲ್ಲಿ ಮಾತ್ರ ನೆಟ್​ಫ್ಲಿಕ್ಸ್​ ಸೇವೆಯನ್ನು ಪಡೆಯಬಹುದು.

- 125 ರೂ.ನಲ್ಲಿ ಬಳಕೆದಾರರು ಲ್ಯಾಪ್​ಟಾಪ್ ಮತ್ತು ಟಿವಿಗಳ ಮೂಲಕ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.

-ಇನ್ನು ಸ್ಯಾಂಡರ್ಡ್​ ಯೋಜನೆಯಾಗಿ 165 ರೂ. ಪ್ಲ್ಯಾನ್​ ಗ್ರಾಹಕರಿಗೆ ನೀಡಿದ್ದು, ಈ ರೀಚಾರ್ಜ್​​ ಮೂಲಕ ಏಕಕಾಲದಲ್ಲಿ ಇಬ್ಬರು ಬಳಕೆದಾರರು ವಿಡಿಯೋ ಸ್ಟ್ರೀಮಿಂಗ್ ಮಾಡಿಕೊಳ್ಳಬಹುದು.
Loading...

- 4 ಸ್ಕ್ರೀನ್​ಗಳಿಗಾಗಿ ಅಲ್ಟ್ರಾ ಪ್ಲ್ಯಾನ್​ 200 ರೂ. ರೀಚಾರ್ಜ್​​ ಯೋಜನೆ ನೀಡಲಾಗಿದೆ. ಇಲ್ಲಿ ಒಂದೇ ಸಮಯದಲ್ಲಿ ನಾಲ್ಕು ಬಳಕೆದಾರರು ನೆಟ್​ಫ್ಲಿಕ್ಸ್​ ಅನ್ನು ಬಳಸಿಕೊಳ್ಳಬಹುದಾಗಿದೆ. ಈ ಎಲ್ಲಾ ಪ್ಲ್ಯಾನ್​ಗಳು ಒಂದು ವಾರದ ವ್ಯಾಲಿಡಿಟಿ ಮಾತ್ರ ಹೊಂದಿರಲಿದ್ದು, ಈ ಯೋಜನೆಗಳ ಮೂಲಕ ನೆಟ್​ಫ್ಲಿಕ್ಸ್ ಬಳಕೆದಾರರು ಅನಿಯಮಿತ ವೆಬ್​ಸಿರೀಸ್ ಹಾಗೂ ಸಿನಿಮಾಗಳನ್ನು ವೀಕ್ಷಿಸಬಹುದು. ಇದಾಗ್ಯೂ ಮೊಬೈಲ್​ ಪ್ಲ್ಯಾನ್​ನಲ್ಲಿ​ HD ಅಥವಾ 4K ಕ್ವಾಲಿಟಿಯಲ್ಲಿ ವಿಡಿಯೋ ಪ್ಲೇಯಾಗುವುದಿಲ್ಲ ಎಂದು ತಿಳಿಸಲಾಗಿದೆ.

ಒಂದು ವಾರದೊಂದಿಗೆ ಒಂದು ತಿಂಗಳು ಫ್ರಿ :
ಹೊಸ ಬಳಕೆದಾರರನ್ನು ಗಮನದಲ್ಲಿರಿಸಿ ನೆಟ್​ಫ್ಲಿಕ್ಸ್​ ಈ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. ನೀವು ಇದೇ ಮೊದಲ ಬಾರಿಗೆ ನೆಟ್​ಫ್ಲಿಕ್ಸ್​ ಬಳಸುತ್ತಿದ್ದರೆ ಈ ರೀಚಾರ್ಜ್​​ ಪ್ಲ್ಯಾನ್​ನೊಂದಿಗೆ ಒಂದು ತಿಂಗಳ ಉಚಿತ ಪ್ರಾಯೋಗಿಕ ಯೋಜನೆಯು ನಿಮ್ಮ ಪಾಲಾಗಲಿದೆ. ಅಂದರೆ ನೀವು ಒಂದು ವಾರದ ಪ್ಲ್ಯಾನ್ ಆರಿಸಿಕೊಂಡರೆ ನಿಮಗೆ ಒಂದು ತಿಂಗಳು ಏಳು ದಿನಗಳ ನೆಟ್​ಫ್ಲಿಕ್ಸ್​ ಸೇವೆ ಲಭ್ಯವಿರಲಿದೆ.

ನೆಟ್​ಫ್ಲಿಕ್ಸ್​ ಕಂಪೆನಿಯು ಭಾರತೀಯ ಮನರಂಜನಾ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಈ ಯೋಜನೆಯನ್ನು ಪರಿಚಯಿಸಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಮೆಜಾನ್ ಪ್ರೈಮ್ ಹಾಗೂ ಹಾಟ್​ಸ್ಟಾರ್​ನಂತಹ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಮೂಲಕ ಪ್ರಬಲ ಪೈಪೋಟಿ ಎದುರಿಸುತ್ತಿರುವ ನೆಟ್​ಫ್ಲಿಕ್ಸ್ ಹೊಸ ಪ್ಲ್ಯಾನ್​ಗಳ ಮುಖಾಂತರ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದೆ.
First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...