• Home
  • »
  • News
  • »
  • tech
  • »
  • Instagram Followers: ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗಬೇಕೇ? ಹಾಗಿದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡಿ!

Instagram Followers: ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗಬೇಕೇ? ಹಾಗಿದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Increase Followers: ಸೋಷಿಯಲ್‌ ಮೀಡಿಯಾದಲ್ಲಿ ಇನ್ಸ್ಟಾಗ್ರಾಮ್‌ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇದರಲ್ಲಿರುವಂತಹ ರೀಲ್ಸ್‌ ಆಯ್ಕೆ ಜನರನ್ನು ಹೆಚ್ಚು ಆಕರ್ಷಿಸಿದೆ. ನೀವು ಈ ಟ್ರಿಕ್ಸ್‌ ಬಳಸುವ ಮೂಲಕ ನಿಮ್ಮ ಫಾಲೋವರ್ಸ್‌ ಅನ್ನು ಹೆಚ್ಚಿಸಿಕೊಳ್ಳಬಹುದು!

  • Share this:

    ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಲ್ಲೂ ಇನ್ಸ್ಟಾಗ್ರಾಮ್‌ ಬಳಕೆ ಮಾಡುವವರು ಹೆಚ್ಚಾಗಿದ್ದಾರೆ.  ಇದಲ್ಲದೆ ಭಾರತದಲ್ಲಿ ಟಿಕ್‌ಟಾಕ್‌ ಬ್ಯಾನ್‌ ಆದ ಮೇಲೆ ಇನ್ಸ್ಟಾಗ್ರಾಮ್‌ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಈ ಅಪ್ಲಿಕೇಶನ್‌ ಕಾರ್ಯನಿರ್ವಹಿಸುತ್ತದೆ. ಇದರ  ಜೊತೆ ಇನ್ಸ್ಟಾಗ್ರಾಮ್‌ನ ರೀಲ್ಸ್‌ ಫ್ಯೂಚರ್‌ ಬಳಕೆದಾರರನ್ನು ಇನ್ನಷ್ಟು ಗಮನಸೆಳೆದಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಫಾಲೋವರ್ಸ್‌ ಹೆಚ್ಚಾಗಬೇಕೆಂಬ ಆಸೆ ಇರುತ್ತದೆ. ಆದರೆ ಕೆಲವೊಬ್ಬರಿಗೆ ಫೋಟೋಸ್‌ ಹಾಕುವ ಮೂಲಕ, ರೀಲ್ಸ್‌ ಮಾಡುವ ಮೂಲಕ ಫಾಲೋವರ್ಸ್‌ ಹೆಚ್ಚಿಸಿಕೊಳ್ತಾರೆ. ಆದರೆ ಈ ಫಾಲೋವರ್ಸ್‌ ಅನ್ನು ನಿಮ್ಮ ಅಕೌಂಟ್‌ನಲ್ಲೂ ಹೆಚ್ಚಿಸಬೇಕಾ ಹಾಗಿದ್ರೆ ಈ ಕೆಳಗೆ ನೀಡಿರುವ ಟ್ರಿಕ್ಸ್‌ ಫಾಲೋ ಮಾಡಿ.


    ಸೋಷಿಯಲ್‌ ಮೀಡಿಯಾದಲ್ಲಿ ಇನ್ಸ್ಟಾಗ್ರಾಮ್‌ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ. ಇದರಲ್ಲಿರುವಂತಹ ರೀಲ್ಸ್‌ ಆಯ್ಕೆ ಜನರನ್ನು ಹೆಚ್ಚು ಆಕರ್ಷಿಸಿದೆ. ಈ ರೀಲ್ಸ್‌ ಮಾಡುವ ಮುಖಾಂತರ ಈಗಾಗಲೇ ಹಲವಾರು ಸೆಲೆಬ್ರಿಟಿಗಳಾಗಿದ್ದಾರೆ. ಇದರ ಮೂಲಕವೇ ಫಾಲೋವರ್ಸ್‌ ಅನ್ನು ಹೆಚ್ಚಿಸಿದ್ದಾರೆ. ಆದರೆ ಇನ್ನು ಮುಂದೆ ನೀವು ಈ ಟ್ರಿಕ್ಸ್‌ ಬಳಸುವ ಮೂಲಕ ನಿಮ್ಮ ಫಾಲೋವರ್ಸ್‌ ಅನ್ನು  ಹೆಚ್ಚಿಸಬಹುದು.


    ಫಾಲೋವರ್ಸ್‌ ಹೆಚ್ಚಿಸಲಿರುವ ಥರ್ಡ್‌ ಪಾರ್ಟಿ ಆ್ಯಪ್


    ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‌ ಹೆಚ್ಚಿಸಲು ಹಲವಾರು ಥರ್ಡ್‌ ಪಾರ್ಟಿ ಆ್ಯಪ್‌ಗಳಿವೆ. ಈ ಆ್ಯಪ್‌ಗಳನ್ನು ಬಳಸಿಕೊಂಡು ನಿಮ್ಮ ಫಾಲೋವರ್ಸ್ರ ಅನ್ನು ಹೆಚ್ಚಿಸುವ ಅವಕಾಶಗಳಿವೆ. ಅಷ್ಟೇ ಅಲ್ಲದೆ ನಿಮ್ಮ ಪೋಸ್ಟ್​ಗಳಿಗೆ ಹೆಚ್ಚು ಲೈಕ್ಸ್ ಬರುವಂತೆಯೂ ಮಾಡಬಹುದು. ಈ ಆ್ಯಪ್‌ಗಳು ನಿಮಗೆ ರಿಯಲ್ ಫಾಲೋವರ್ಸ್ ನೀಡುತ್ತದೆ. ಕೆಲವೊಂದು ಆ್ಯಪ್‌ಗಳಿಗೆ ಹಣ ಪಾವತಿ ಮಾಡಿ ಫಾಲೋವರ್ಸ್‌ ಹೆಚ್ಚಿಸಬಹುದು. ಈ ರೀತಿಯ ಆ್ಯಪ್‌ಗಳು ಕೆಲವೊಮ್ಮೆ ಪೋಸ್ಟ್‌ನ ಲೈಕ್‌ಗಳನ್ನೂ ಹೆಚ್ಚಿಸುತ್ತದೆ.


    Need to increase your followers on Instagram Follow this trick
    ಸಾಂದರ್ಭಿಕ ಚಿತ್ರ


    ಇದನ್ನೂ ಓದಿ: Xiaomi Redmi Note 12 ಸೀರಿಸ್‌ ರಿಲೀಸ್​ ಡೇಟ್​ ಫಿಕ್ಸ್​, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಫೋನ್


    ಫಾಲೋವರ್ಸ್ ಹೆಚ್ಚಿಸಲು ವೆಬ್​ಸೈಟ್ ಕೂಡ ಇದೆ


    ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‌ ಹೆಚ್ಚಿಸಲು ಹಲವಾರು ವೆಬ್‌ಸೈಟ್‌ಗಳಿವೆ. ಉದಾಹರಣೆಗೆ www.Skfollowerspro.in ಹಾಗೂ https://locationary.org ವೆಬ್‌ಸೈಟ್‌ಗಳ ಮೂಲಕ ನೀವು ಫಾಲೋವರ್ಸ್​​ ಹೆಚ್ಚಿಸಬಹುದು. ಇದಲ್ಲದೆ ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಬ್ಲಾಗಿಂಗ್, ಇನ್ಫ್ಲುಯೆನ್ಸರ್ ಮಾರ್ಕೆಟಿಂಗ್ ಇತ್ಯಾದಿಗಳು ನಿಮ್ಮ ಇನ್​ಸ್ಟಾಗ್ರಾಮ್ ಫಾಲೋವರ್ಸ್​​ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.


    ನೀವು ಕೇವಲ ವೆಬ್‌ಸೈಟ್‌, ಥರ್ಡ್‌ ಪಾರ್ಟಿ ಆ್ಯಪ್ ಮೂಲಕ ಮಾತ್ರವಲ್ಲದೇ ನಿಮ್ಮ ಇನ್ಸ್ಟಾಗ್ರಾಮ್‌ನಲ್ಲೂ ಕೆಲವೊಂದು ಟ್ರಿಕ್ಸ್ ಮೂಲಕ ನಿಮ್ಮ ಫಾಲೋವರ್ಸ್‌ ಅನ್ನು ಹೆಚ್ಚಿಸಬಹುದು. ಹೇಗೆಂದರೆ ನಿಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ, ರೀಲ್ಸ್‌ ಏನಾದರು ಹಾಕುವಾಗ ಹ್ಯಾಶ್‌ಟ್ಯಾಗ್‌ ಅನ್ನು ಬಳಸಬೇಕು. ಹ್ಯಾಶ್‌ಟ್ಯಾಗ್‌ ಆ್ಯಡ್‌ ಮಾಡಿದರೆ ನಿಮ್ಮ ಪೋಸ್ಟ ಟ್ರೆಂಡಿಂಗ್‌ನಲ್ಲಿರುವ ಪೋಸ್ಟ್‌ನಲ್ಲಿ ಸೇರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗುವ ಸಾಧ್ಯತೆಗಳಿವೆ.


    ಇದನ್ನೂ ಓದಿ: ಪೈಪೋಟಿ ಕೊಡಲು ಸಜ್ಜಾಯ್ತು ಬಿಎಸ್‌ಎನ್‌ಎಲ್‌, ಶೀಘ್ರವೇ 4G-5G ಸೇವೆ ಆರಂಭಕ್ಕೆ ಪ್ಲಾನ್!


    ಟೈಟಲ್‌ ಎಫೆಕ್ಟಿವ್‌ ಆಗಿ ಬರೀಬೇಕು


    Need to increase your followers on Instagram Follow this trick
    ಸಾಂದರ್ಭಿಕ ಚಿತ್ರ


    ಈ ವಿಚಾರದ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ನೀವು ಇನ್ಸ್ಟಾಗ್ರಾಮ್‌ನಲ್ಲಿ ಯಾವುದೇ ಪೋಸ್ಟ್‌, ರೀಲ್ಸ್‌ ಹಾಕುವಾಗ ಎಫೆಕ್ಟಿವ್‌ ಟೈಟಲ್‌ ಹಾಕಬೇಕು. ಈ ರೀತಿ ಹಾಕುವುದರಿಂದ ನಿಮ್ಮ ಅಕೌಂಟ್‌ಗೆ ಫಾಲೋವರ್ಸ್‌ ಹೆಚ್ಚಾಗುತ್ತದೆ.


    ವಿಶೇಷ ಸೂಚನೆ:


    ಇನ್​ಸ್ಟಾಗ್ರಾಮ್​ನಲ್ಲಿ ಫಾಲೋವರ್ಸ್ ಹೆಚ್ಚಿಸಲು, ಫಾಂಟ್ ಸ್ಟೈಲಿಶ್ ಆಗಿ ಕಾಣಲು, ಲೈಕ್ಸ್ ಬರಲು, ಕಮೆಂಟ್ ಮಾಡಲೆಂದು ಅನೇಕ ಥರ್ಡ್ ಪಾರ್ಟಿ ಆ್ಯಪ್​ಗಳಿವೆ. ಆದರೆ, ಇದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ರೀತಿಯ ಆ್ಯಪ್​ಗಳಿಗೆ ಜನರು ಮರಳಾಗುತ್ತಾರೆ ಎಂದು ತಿಳಿದು ಹ್ಯಾಕರ್​ಗಳು ಫೇಕ್ ಆ್ಯಪ್ ಕ್ರಿಯೆಟ್ ಮಾಡಿ ಇಟ್ಟಿರುತ್ತಾರೆ. ಅದನ್ನು ನೀವು ಇನ್​ಸ್ಟಾಲ್ ಮಾಡಿ ಲಾಗಿನ್ ಆಗಿ ಉಪಯೋಗಿಸಿದರೆ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಆಗಬಹುದು. ಹೀಗಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಡೌನ್‌ಲೋಡ್‌ ಮಾಡುವ ಮೊದಲು ಸುರಕ್ಷಿತವಾಗಿದೆಯಾ ಎಂದು ನೋಡಿಕೊಳ್ಳಿ. ಈ ರೀತಿಯ ಯಾವುದೇ ಆ್ಯಪ್ ಇನ್​ಸ್ಟಾಲ್ ಮಾಡುವ ಮುನ್ನ ಎಚ್ಚರ ವಹಿಸಿಕೊಳ್ಳಿ.

    Published by:Harshith AS
    First published: