ಇತ್ತೀಚಿಗೆ ಸ್ಮಾರ್ಟ್ಫೋನ್ಗಳ (Smartphones) ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದೇ ರೀತಿ ದೇಶದೆಲ್ಲೆಡೆ 5ಜಿ ನೆಟ್ವರ್ಕ್ (5G Network) ಸೇವೆ ಆರಂಭ ವಾಗಿದೆ. ಆದರೂ ಕೆಲವು ಸ್ಮಾರ್ಟ್ಫೋನ್ ಬಳಕೆದಾರರು ನೆಟ್ವರ್ಕ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಆ ಪ್ರದೇಶದಲ್ಲಿರುವ ನೆಟ್ವರ್ಕ್ ಸ್ಪೀಡ್ (Network Speed) ಅಥವಾ ಮೊಬೈಲ್ನ ಸೆಟ್ಟಿಂಗ್ನ (Mobile Setting) ಕೊರತೆಗಳು ಆಗಿರಬಹುದು. ಟೆಲಿಕಾಂ ಕಂಪನಿಗಳು (Telecom Company) ಇದಿಗ ಎಲ್ಲಾ ಕಡೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಆದರೆ ಕೆಲವೊಂದು ನೆಟ್ವರ್ಕ್ ಸಮಸ್ಯೆಗಳಾಗುತ್ತಿದೆ ಎಂದು ಗ್ರಾಹಕರು ವರದಿ ಮಾಡಿದ್ದಾರೆ. ಈಗ ಬಿಡುಗಡೆಯಾಗುತ್ತಿರುವಂತಹ ಎಲ್ಲಾ ಮೊಬೈಲ್ಗಳು ಉತ್ತಮ ಗುಣಮಟ್ಟದ ಫೀಚರ್ಸ್ ಅನ್ನು ಹೊಂದಿದ ಸ್ಮಾರ್ಟ್ಫೋನ್ಗಳಾಗಿವೆ ಆದರೂ ಸಹ ನೆಟ್ವರ್ಕ್ ಸಮಸ್ಯೆಯಾಗುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ.
ಹೌದು ಇತ್ತೀಚಿಗೆ ಸ್ಮಾರ್ಟ್ಫೋನ್ ಬಳಕೆದಾರರು ಹೆಚ್ಚಾಗಿರುವುದರಿಂದ ಈ ನೆಟ್ವರ್ಕ್ ಕೂಡ ವಿಸ್ತರಿಸಿದೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ, ಕೆಲವೊಂದು ಸ್ಮಾರ್ಟ್ಫೋನ್ಗಳಲ್ಲಿ ನೆಟ್ವರ್ಕ್ ಸ್ಪೀಡ್ ಕಡಿಮೆಯಾಗಿದೆ. ಹಾಗಿದ್ರೆ ಈ ನೆಟ್ವರ್ಕ್ ಸಮಸ್ಯೆಯನ್ನು, ಸ್ಪೀಡ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಓದಿ.
ನೆಟ್ವರ್ಕ್ ರಿಸೀವರ್ ಖರೀದಿಸಿ
ನೆಟ್ವರ್ಕ್ ರಿಸೀವರ್ ಅನ್ನು ಖರೀದಿಸಿ ಮನೆಯಲ್ಲೇ ಫಿಟ್ ಮಾಡಿ. ಇದು ಪ್ರಯಾಣದ ವೇಳೆ ಹೆಚ್ಚು ಉಪಯೋಗವಾಗುವುದಿಲ್ಲ. ಆದರೆ ಮನೆಯಲ್ಲಿರುವಾಗ ಮೊಬೈಲ್ ನೆಟ್ವರ್ಕ್ ಸ್ಪೀಡ್ಆಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಆದ್ದರಿಂದ ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿರುವವರು ರಿಸೀವರ್ ಅನ್ನು ಫಿಟ್ ಮಾಡುವುದರಿಮದ ನೆಟ್ವರ್ಕ್ ಸಮಸ್ಯೆಯನ್ನು ಸುಧಾರಿಸಬಹುದಾಗಿದೆ.
ಇದನ್ನೂ ಓದಿ: ಹೊಸವರ್ಷಕ್ಕೆ ಭಾರತಕ್ಕೆ ಕಾಲಿಡುತ್ತಿದೆ ರೆಡ್ಮಿ ಸ್ಮಾರ್ಟ್ಫೋನ್! ಏನಿರಲಿದೆ ಸ್ಪೆಷಲ್ ಫೀಚರ್ಸ್
ಸ್ಪೆಕ್ಟ್ರಮ್ ಬದಲಾಯಿಸಬೇಕು
ಟೆಲಿಕಾಂ ಕಂಪನಿಗಳು 4ಜಿ, 3ಜಿ, 2ಜಿ ನೆಟ್ವರ್ಕ್ಗಳನ್ನು ಜನರಿಗೆ ಬೇಕಾದ ಹಾಗೆ ಸೆಟ್ ಮಾಡಿಕೊಳ್ಳುವಂತೆ ಅವಕಾಶವನ್ನು ನೀಡುತ್ತದೆ. ಇವುಗಳಲ್ಲಿ 2ಜಿ ಮತ್ತು 3ಜಿ ನೆಟ್ವರ್ಕ್ಗಳು ಬಹಳಷ್ಟು ಪ್ರದೇಶಗಳಲ್ಲಿ ಆಯ್ಕೆಗಳಿವೆ. ಆದ್ದರಿಂದ ಈ ಆಯ್ಕೆಗಳನ್ನು ಹೆಚ್ಚು ಬಳಸುವುದರಿಂದ ನೆಟ್ವರ್ಕ್ ಬಹಳಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಹಾಗೆ ಇನ್ನು ಕೆಲವರು ಮಲ್ಟಿಪಲ್ ಕೆಲಸಗಳ ಉಪಯೋಗಕ್ಕಾಗಿ ಡ್ಯುಯಲ್ ಸಿಮ್ಗಳನ್ನು ಬಳಸುತ್ತಾರೆ ಆ ಸಂದರ್ಭಗಳಲ್ಲಿ ಒಂದು ಸಿಮ್ನಲ್ಲಿ ನೆಟ್ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಇನ್ನೊಂದು ಸಿಮ್ಗೆ ನೆಟ್ವರ್ಕ್ ಮತ್ತು ನಂಬರ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಆಗ ನೆಟ್ವರ್ಕ್ ಸಮಸ್ಯೆಯನ್ನು ಸುಧಾರಿಸಬಹುದು.
ನಿಮ್ಮ ಮೊಬೈಲ್ನಲ್ಲಿರುವ ಕವರ್ ಸಹ ನೆಟ್ವರ್ಕ್ ಸಮಸ್ಯೆಗೆ ಕಾರಣವಾಗಿದೆ
ಕೆಲವೊಂದು ಬಾರಿ ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಮೊಬೈಲ್ನ ರಕ್ಷಣೆಗಾಗಿ ಬ್ಯಾಕ್ ಕವರ್ಗಳನ್ನು ಖರೀದಿ ಮಾಡುತ್ತಾರೆ. ಆದರೆ ತಂತ್ರಜ್ಞರು ಹೇಳುವಂತೆ ಈ ಬ್ಯಾಕ್ಕವರ್ಗಳು ಕೂಡ ಬಳಕೆದಾರರಿಗೆ ನೆಟ್ವರ್ಕ್ ಸಮಸ್ಯೆಯನ್ನು ನೀಡುತ್ತದೆ. ಆದ್ದರಿಂದ ನೆಟ್ವರ್ಕ್ ಸಮಸ್ಯೆ ಇದ್ದಲ್ಲಿ ಈ ಬ್ಯಾಕ್ ಕವರ್ ಅನ್ನು ತೆಗೆದು ಒಮ್ಮೆ ಬಳಸಿ ನೋಡಿ. ನಿಮ್ಮ ನೆಟ್ವರ್ಕ್ ಸರಿಯಾಗುತ್ತದೆ.
ಹೇಗೆ ಸಮಸ್ಯೆಗಳು ಬರುತ್ತದೆ?
ಕೆಲವೊಂದು ಪ್ರದೇಶಗಳಲ್ಲಿ ನೆಟ್ವರ್ಕ್ ಟವರ್ಗಳೇ ಇರಲ್ಲ. ಆ ಸಂದರ್ಭದಲ್ಲಿ ಅಲ್ಲಿ ನೆಟ್ವರ್ಕ್ ಸಮಸ್ಯೆಗಳು ಕಾಣಸಿಗುತ್ತದೆ. ಇನ್ನು ಕೆಲವೊಂದು ದೊಡ್ಡ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಒಟ್ಟಾದಾಗ ಅಲ್ಲಿ ಇಂಟರ್ನೆಟ್ ಅಥವಾ ಮೊಬೈಲ್ ಬಳಕೆದಾರರು ಹೆಚ್ಚಾಗುತ್ತಾರೆ. ಅಲ್ಲಿ ನೆಟ್ವರ್ಕ್ಗಳು ಲೋಡ್ ಆಗದೇ ಇರಬಹುದು. ಇನ್ನು ಕೆಲವೊಂದು ಬಾರಿ ಮೊಬೈಲ್ನ ಸೆಟ್ಟಿಂಗ್ಸ್ಗಳಲ್ಲಿ ಏನಾದರು ತಪ್ಪಿ ಒತ್ತಹೋಗುತ್ತದೆ ಅದಕ್ಕಾಗಿ ನೆಟ್ವರ್ಕ್ ಸೆಟ್ಟಿಂಗ್ಗೆ ಹೋಗುವ ಮೂಲಕ ಅಲ್ಲಿ ನೆಟ್ವರ್ಕ್ ಅನ್ನು ನಿಮಗೆ ಬೇಕಾದ ಹಾಗೆ ಇಟ್ಟುಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ