• Home
 • »
 • News
 • »
 • tech
 • »
 • True Caller: ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರು ಏನೇನೋ ಇದೆಯಾ? ಹಾಗಿದ್ರೆ ಈ ಟ್ರಿಕ್ಸ್‌ ಬಳಸಿ ನೇಮ್ ಎಡಿಟ್ ಮಾಡಿ!

True Caller: ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರು ಏನೇನೋ ಇದೆಯಾ? ಹಾಗಿದ್ರೆ ಈ ಟ್ರಿಕ್ಸ್‌ ಬಳಸಿ ನೇಮ್ ಎಡಿಟ್ ಮಾಡಿ!

ಟ್ರೂ ಕಾಲರ್ ಆ್ಯಪ್

ಟ್ರೂ ಕಾಲರ್ ಆ್ಯಪ್

ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರನ್ನು, ಡೀಟೇಲ್ಸ್‌ ಅನ್ನು ಬದಲಾಯಿಸಲು ಇರುವಂತಹ ಟ್ರಿಕ್ಸ್‌ ಇದಾಗಿದೆ. ಇದು ನಿಮ್ಮ ಮೊಬೈಲ್‌ನಲ್ಲೇ ಸುಲಭದಲ್ಲಿ ವೇಗವಾಗಿ ನಿಮಗೆ ಬೇಕಾದಂತೆ ಹೆಸರನ್ನು ಹಾಕಿಕೊಳ್ಳಬಹುದು. ಹೇಗೆ ಅನ್ನೋದಕ್ಕೆ ಇಲ್ಲಿ ಓದಿ...

 • Share this:

  ಈಗಿನ ಅನೇಕ ಸ್ಮಾರ್ಟ್‌ಫೋನ್‌ ಬಳಕೆದಾರರು  ಟ್ರೂ ಕಾಲರ್‌ ಆ್ಯಪ್‌ (Truecaller App) ಅನ್ನು ಬಳಸುತ್ತಾರೆ. ಇದು ಅನಗತ್ಯ ಕರೆಗಳನ್ನು ನಿರಾಕರಿಸುತ್ತದೆ ಮತ್ತು ಯಾವುದೇ ನಂಬರ್‌ನಿಂದ ಕರೆ ಬಂದಾಗ ಆ ನಂಬರ್‌ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದು ಹೆಚ್ಚಾಗಿ ಗೊತ್ತಿರದ ನಂಬರ್‌ಗಳಿಂದ ಕಾಲ್‌ (Call) ಮಾಡಿದಾಗ ಯಾರೆಂದು ಮಾಹಿತಿ ತಿಳಿಯಲು ತುಂಬಾ ಸಹಕಾರಿಯಾಗುತ್ತದೆ. ಮುಖ್ಯವಾಗಿ ಟ್ರೂ ಕಾಲರ್‌ ಅಪರಿಚಿತ ಕರೆಯನ್ನು (Unknown Call) ಪತ್ತೆಹಚ್ಚುವುದರಲ್ಲಿ ಬಹಳ ಫೇಮಸ್‌ ಆಗಿದೆ. ಹೀಗೆ ಟ್ರೂ ಕಾಲರ್ ಅನೇಕ ಫೀಚರ್​ಗಳನ್ನು ಪರಿಚಯಿಸಿ ವಿಶ್ವದ ಅತ್ಯಂತ ಜನಪ್ರಿಯ ಕ್ರೌಡ್‌ಸೋರ್ಸ್‌ಡ್ ಕಾಲರ್ ID ಅಪ್ಲಿಕೇಶನ್ (Crowdsource Caller Application) ಆಗಿ ಗುರುತಿಸಿಕೊಂಡಿದೆ. ಹೆಚ್ಚಿನ ಸಂದರ್ಭಗಳಲ್ಲಿ ನೀವು ಕರೆ ಮಾಡುವ ಸಂಖ್ಯೆಯನ್ನು ಬಳಸುವಾಗ ಹೆಸರನ್ನು ಕೂಡ ಪತ್ತೆ ಮಾಡಬಹುದು.  


  ಈ ಟ್ರೂ ಕಾಲರ್‌ ಅತ್ಯಂತ ಜನಪ್ರಿಯ ಪಡೆದ ಅಪ್ಲಿಕೇಶನ್‌ ಆಗಿದೆ. ಇದರಿಂದ ಜನರಿಗೆ ಕೆಲವೊಂದು ಸಂದರ್ಭಗಳಲ್ಲಿ ಬಹಳಷ್ಟು ಉಪಯೋಗಗಳಾಗಿವೆ.


  ಟ್ರೂ ಕಾಲರ್‌ ಹೇಗೆ ಕಾರ್ಯನಿರ್ವಹಿಸುತ್ತದೆ? 


  • ಟ್ರೂ ಕಾಲರ್ ಹೊಸ ನಂಬರ್‌ನಿಂದ ಕರೆ ಬಂದರೆ ಅದು ಯಾರದ್ದು ಅಂತಾ ತಿಳಿಸುತ್ತದೆ.

  • ಹಾಗೆಯೇ ಫೋನ್ ರಿಂಗ್ ಆಗುವ ಮೊದಲೇ ಯಾರು ಕರೆ ಮಾಡುತ್ತಿದ್ದಾರೆ ಎಂದು ಹೇಳುವ ಆಯ್ಕೆಯನ್ನು ಈ ಆ್ಯಪ್‌ ಹೊಂದಿದೆ.


  ಇದನ್ನೂ ಓದಿ: ಯೂಟ್ಯೂಬ್​ನಲ್ಲಿ ಜಾಹೀರಾತು ಬಾರದಂತೆ ಮಾಡ್ಬೇಕಾ? ಈ ಟ್ರಿಕ್ಸ್‌ ಬಳಸಿ ಆ್ಯಡ್ಸ್​ ಬ್ಲಾಕ್‌ ಮಾಡಿ!

  • ಟ್ರೂ ಕಾಲರ್‌ನಲ್ಲಿ ಕಾಣಿಸುವ ಹೆಸರುಗಳು ಕೆಲವೊಮ್ಮೆ ತಪ್ಪಾಗಿರುತ್ತವೆ. ಆದರೆ ಬಳಕೆದಾರರೇ ಅವರ ಹೆಸರನ್ನು ಸರಿಯಾಗಿ ನಮೂದಿಸಲು ಅವಕಾಶ ಇದೆ.

  • ನಿಮ್ಮ ಟ್ರೂ ಕಾಲರ್ ಹೆಸರನ್ನು ನೀವು ಸುಲಭವಾಗಿ ಬದಲಾಯಿಸಬಹುದು. ಜನರ ದೃಷ್ಟಿಯಿಂದ ನಿಮ್ಮ ಹೆಸರನ್ನು ನೀವು ಕಾಣದಂತೆ ಮಾಡಲು ಬಯಸಿದರೆ ನಿಮ್ಮ ಫೋನ್ ನಂಬರ್‌ ಅನ್ನು ಅಪ್ಲಿಕೇಶನ್‌ನಿಂದ ಅನ್ಲಿಸ್ಟ್ ಮಾಡಬಹುದು. ಅದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟ್ರಿಕ್.


  Need to edit your name on True Caller Change easily by following these tricks
  ಸಾಂದರ್ಭಿಕ ಚಿತ್ರ


  ಹೆಸರು ಬದಲಾಯಿಸುವ ಟ್ರಿಕ್‌


  • ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಟ್ರೂ ಕಾಲರ್ ಅಪ್ಲಿಕೇಶನ್‌ಗೆ ಹೋಗಬೇಕು.

  • ನಂತರ ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿರುವ ಮೆನು ಆಯ್ಕೆಯನ್ನು ಆರಿಸಿ.

  • ಅಲ್ಲಿ ಎಡಿಟ್‌ ಮಾಡುವ ಆಯ್ಕೆಯೊಂದಿಗೆ ನಿಮ್ಮ ಪ್ರೊಫೈಲ್ ಅನ್ನು ನೀವು ಕಾಣಬಹುದು.

  • ನಿಮ್ಮ ಪ್ರೊಫೈಲ್ ಎಡಿಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳ ಲೀಸ್ಟ್‌ ಇಲ್ಲಿ ಕಾಣಿಸುತ್ತದೆ.

  • ನಂತರ ನಿಮಗೆ ಬೇಕಾದ ಹೆಸರನ್ನು ಎಡಿಟ್‌ ಮಾಡಬಹುದು.

  • ನಂತರ ಮೇಲಿನ ಬಲ ಮೂಲೆಯಲ್ಲಿರುವ ಸೇವ್ ಆಯ್ಕೆಯನ್ನು ಟ್ಯಾಪ್ ಮಾಡಿ. ಇದು ವಿವರಗಳನ್ನು ಸೇವ್‌ ಮಾಡುತ್ತದೆ.


  ಸ್ಮಾರ್ಟ್‌ಫೋನ್‌ನಲ್ಲಿ ಆಗದಿದ್ದರೆ ಡೆಸ್ಕ್‌ಟಾಪ್‌ನಲ್ಲೂ ಮಾಡಬಹುದು

  • ಇದಲ್ಲದೆ ನೀವು ಮೊಬೈಲ್‌ನಲ್ಲಿ ಮಾಡದಿದ್ದರೆ ಡೆಸ್ಕ್‌ಟಾಪ್ ಮೂಲಕವೂ ನಿಮ್ಮ ಹೆಸರನ್ನು ಟ್ರೂ ಕಾಲರ್‌ನಲ್ಲಿ ಬದಲಾಯಿಸಬಹುದು.

  • ಇದಕ್ಕಾಗಿ ನೀವು ಟ್ರೂ ಕಾಲರ್ ವೆಬ್‌ಸೈಟ್‌ಗೆ ಹೋಗಿ, ನಿಮ್ಮ ವಿವರಗಳೊಂದಿಗೆ ಪ್ಲಾಟ್‌ಫಾರ್ಮ್‌ಗೆ ಲಾಗ್ ಇನ್ ಮಾಡಿ.

  • ನಿಮ್ಮ ಫೋನ್ ನಂಬರ್‌ ಅನ್ನು ನಮೂದಿಸಿದ ನಂತರ ಸೂಚಿಸುವ ಹೆಸರನ್ನು ಆಯ್ಕೆ ಮಾಡಿ.


  Need to edit your name on True Caller Change easily by following these tricks
  ಸಾಂದರ್ಭಿಕ ಚಿತ್ರ


  • ಹೊಸ ಹೆಸರನ್ನು ಸೇರಿಸಿ ಮತ್ತು ಸೇವ್‌ ಆಯ್ಕೆಯನ್ನು ಟ್ಯಾಪ್‌ ಮಾಡಿ.

  • ನೀವು ಮಾಡಿರುವ ಬದಲಾವಣೆಗಳು ಟ್ರೂ ಕಾಲರ್‌ನಲ್ಲಿರುವ ಜನರಿಗೆ ಒಂದು ಅಥವಾ ಎರಡು ದಿನಗಳಲ್ಲಿ ಕಾಣಿಸಲು ಪ್ರಾರಂಭವಾಗುತ್ತದೆ.


  ಇದನ್ನೂ ಓದಿ: ಏನಾಯ್ತು Apple ಕಂಪೆನಿಗೆ? ಇನ್ನು ಮುಂದೆ ಮಾರುಕಟ್ಟೆಗೆ ಬರಲ್ವಾ ಐಫೋನ್‌?


  ಇದು ಟ್ರೂ ಕಾಲರ್‌ನಲ್ಲಿ ನಿಮ್ಮ ಹೆಸರನ್ನು, ಡೀಟೇಲ್ಸ್‌ ಅನ್ನು ಬದಲಾಯಿಸಲು ಇರುವಂತಹ ಟ್ರಿಕ್ಸ್‌ ಆಗಿದೆ. ಇದು ನಿಮ್ಮ ಮೊಬೈಲ್‌ನಲ್ಲೇ ಸುಲಭದಲ್ಲಿ ವೇಗವಾಗಿ ನಿಮಗೆ ಬೇಕಂತೆ ಹೆಸರನ್ನು ಹಾಕಿಕೊಳ್ಳಬಹುದು.

  Published by:Harshith AS
  First published: