• Home
  • »
  • News
  • »
  • tech
  • »
  • Sim Port Tips: ನಿಮ್ಮ ಸಿಮ್​ ಕಾರ್ಡ್​ ಪೋರ್ಟ್ ಮಾಡ್ಬೇಕಾ? ತುಂಬಾ ಸುಲಭ, ಹೀಗ್​ ಮಾಡಿ ಸಾಕು!

Sim Port Tips: ನಿಮ್ಮ ಸಿಮ್​ ಕಾರ್ಡ್​ ಪೋರ್ಟ್ ಮಾಡ್ಬೇಕಾ? ತುಂಬಾ ಸುಲಭ, ಹೀಗ್​ ಮಾಡಿ ಸಾಕು!

ಸಿಮ್‌ ಪೋರ್ಟ್

ಸಿಮ್‌ ಪೋರ್ಟ್

ಅನೇಕರು ತಮಗೆ ಇಷ್ಟಬಂದಂತೆ ಸಿಮ್‌ ಅನ್ನು ಪೋರ್ಟ್‌ ಮಾಡಿಕೊಳ್ಳುತ್ತಾರೆ. ಆದರೆ ಒಂದು ಸಿಮ್‌ ಅನ್ನು ಎಷ್ಟು ಬಾರಿ ಪೋರ್ಟ್‌ ಮಾಡ್ಬಹುದು? ಯಾವ ರೀತಿ ಸುಲಭದಲ್ಲಿ ಪೋರ್ಟ್‌ ಮಾಡ್ಬಹುದು? ಎಲ್ಲಾ ಮಾಹಿತಿ ಇಲ್ಲಿದೆ.

  • Share this:

    ಇದು ಡಿಜಿಟಲ್‌ ಯುಗ (Digital) ಇಲ್ಲಿ ದಿನದಿಂದ ದಿನಕ್ಕೆ ತಂತ್ರಜ್ಞಾನಗಳು (Technology) ಬದಲಾಗುತ್ತಿರುತ್ತವೆ. ಈಗಿನ ದಿನಗಳಲ್ಲಿ ಮೊಬೈಲ್‌ (Mobile) ಬಳಸದೇ ಇರುವ ಜನರೇ ಇಲ್ಲ. ಪ್ರತಿಯೊಬ್ಬರಿಗೂ ಏನಾದರು ಮೊಬೈಲ್‌, ಲ್ಯಾಪ್‌ಟಾಪ್‌ಗಳಲ್ಲಿ (Mobile) ಕೆಲಸ ಆಗಬೇಕಾದರೆ ನೆಟ್‌ವರ್ಕ್‌ (Network) ಎಂಬುದು ಬಹಳ ಮುಖ್ಯವಾಗಿರುತ್ತದೆ. ಅದ್ರಲ್ಲೂ ಮೊಬೈಲ್‌ನಲ್ಲೇ ಬಹುತೇಕ ಕೆಲಸಗಳು ಆಗುವುದರಿಂದ ಮೊಬೈಲ್‌ನಲ್ಲಿ ಸಿಮ್‌ (Sim), ನೆಟ್‌ವರ್ಕ್‌, ಡೇಟಾ (Data) ಎಲ್ಲವೂ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದು ಪ್ರದೇಶಗಳಲ್ಲಿ ಕೆಲವು ಸಿಮ್‌ಗಳ ನೆಟ್‌ವರ್ಕ್‌ ನಿಧಾನವಾಗಿರುತ್ತದೆ ಅಥವಾ ಕೆಲವೊಮ್ಮೆ ನೆಟ್‌ವರ್ಕ್‌ಗಳೇ ಇರುವುದಿಲ್ಲ. ಈ ಕಾರಣಕ್ಕಾಗಿ ತಮ್ಮ ನಂಬರ್‌ (Number) ಅನ್ನು ಪೋರ್ಟ್‌ (Port) ಮಾಡಲು ಗ್ರಾಹಕರು ಮುಂದಾಗುತ್ತಾರೆ. ಇದು ತಮ್ಮಲ್ಲಿರುವ ನಂಬರ್‌ ಅನ್ನು ಬದಲಾಯಿಸದೇ ಒಂದು ನೆಟ್‌ವರ್ಕ್‌ ಇಂದ ಇನ್ನೊಂದು ನೆಟ್‌ವರ್ಕ್‌ಗೆ ಬದಲಾಯಿಸುವುದಾಗಿರುತ್ತದೆ.


    ಅನೇಕರು ತಮಗೆ ಇಷ್ಟಬಂದಂತೆ ತಮ್ಮ ಸಿಮ್‌ ಅನ್ನು ಪೋರ್ಟ್‌ ಮಾಡಿಕೊಳ್ಳುತ್ತಾರೆ. ಆದರೆ ಒಂದು ಸಿಮ್‌ ಅನ್ನು ಎಷ್ಟು ಬಾರಿ ಪೋರ್ಟ್‌ ಮಾಡ್ಬಹುದು? ಯಾವ ರೀತಿ ಸುಲಭದಲ್ಲಿ ಪೋರ್ಟ್‌ ಮಾಡ್ಬಹುದು? ಎಂದು ಗೊತ್ತಿರುದಿಲ್ಲ. ಆದರೆ ಇದರ ಸಂಪೂರ್ಣ ಮಾಹಿತಿಯನ್ನು ತಿಳೀಬೇಕಾದರೆ ಈ ಕೆಳಗಿನದನ್ನು ಓದಿ.


    ಸಿಮ್‌ ಪೋರ್ಟ್‌ ಮಾಡಲಿರುವ ಕೆಲವು ನಿಯಮಗಳು:


    ಒಂದು ನೆಟ್‌ವರ್ಕ್‌ನಿಂದ ನೀವು ಮತ್ತೊಂದು ನೆಟ್‌ವರ್ಕ್‌ಗೆ ನಿಮ್ಮ ಮೊಬೈಲ್‌ ನಂಬರನ್ನು ಪೋರ್ಟ್‌ ಮಾಡಿಕೊಳ್ಳಬೇಕಾದರೆ ಅದಕ್ಕೆ ಕೆಲವೊಂದು ನನಿಯಮಗಳಿವೆ. ದೇಶದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ ಹೊಸ ಎಂಎನ್‌ಪಿಯನ್ನು ಜಾರಿಗೆ ತರಲಾಗಿತ್ತು.ಈ ಎಂಎನ್‌ಪಿ ಅಂದರೆ ಮೊಬೈಲ್‌ ನಂಬರ್‌ ಪೋರ್ಟ್‌ ಮಾಡಲಿರುವಂತಹ ನಿಯಮಗಳು.


    ಇದನ್ನೂ ಓದಿ: ಈ ಸಾಧನ ನಿಮ್ಮಲ್ಲಿದ್ರೆ ಸಾಕು, ಕರೆಂಟ್ ಇಲ್ಲದಿದ್ರೂ ವೈ-ಫೈ ವರ್ಕ್ ಆಗುತ್ತೆ!


    ಈ ನಿಯಮಗಳನ್ನು ಪಾಲಿಸಿದರೆ ಗ್ರಾಹಕರು ಸುಲಭದಲ್ಲಿ ಯಾವುದೆ ಅಡೆತಡೆಗಳಿಲ್ಲದೆ ಮೊಬೈಲ್‌ ನಂಬರ್‌ ಅನ್ನು ಪೋರ್ಟ್‌ ಮಾಡಿಕೊಳ್ಳಬಹುದು. ಇದಲ್ಲದೆ ಒಂದು ಮೊಬೈಲ್‌ ನಂಬರನ್ನು ಎಷ್ಟು ಬಾರಿ ಬೇಕಾದರು ಪೋರ್ಟ್‌ ಮಾಡಿಕೊಳ್ಳವು ಅವಕಾಶಗಳಿವೆ. ಇದಕೆ ಯಾವುದೇ ನಿರ್ದಿಷ್ಟ ನಿರ್ಬಂಧಗಳಿಲ್ಲ.


    ಪೋರ್ಟ್‌ ಮಾಡುವ ಮೊದಲು ಗಮನದಲ್ಲಿಡಬೇಕಾದ ವಿಚಾರಗಳು:


    ನಿಮ್ಮ ಮೊಬೈಲ್ ನಂಬರ್ ಪೋರ್ಟ್ ಆಗಬೇಕು ಎಂದರೆ ಕೆಲವು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಮೊಬೈಲ್ ನಂಬರ್ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಿಕೊಳ್ಳಲು ಬಯಸಿದರೆ, ಅದಕ್ಕೂ ಮುಂಚೆ ಹಳೆಯ ಸಿಮ್‌ನಲ್ಲಿ ಬಾಕಿ ಉಳಿಸಿಕೊಂಡಿರುವ ಎಲ್ಲ ಬಿಲ್ ಮೊತ್ತವನ್ನು ಪಾವತಿಸಿರಬೇಕು. ಅಂದರೆ ವಿಶೇಷವಾಗಿ, ಪೋಸ್ಟ್ ಪೋಯ್ಡ್ ಗ್ರಾಹಕರು, ತಿಂಗಳ ಬಿಲ್ ಮೊತ್ತ ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಟೆಲಿಕಾಂ ಸೇವಾದಾರ ಕಂಪನಿಗೆ ಪಾಲಿಸುವುದು ಕಡ್ಡಾಯ. ಬಾಕಿ ಉಳಿಸಿಕೊಂಡಿದ್ದರೆ, ಪೋರ್ಟಿಂಗ್ ಸಾಧ್ಯವಾಗುವುದಿಲ್ಲ.


    ಇದಲ್ಲದೆ ಗ್ರಾಹಕರು ತಾವು ಬಯಸಿದ ಯಾವುದೇ ನೆಟ್‌ವರ್ಕ್‌ಗೆ ಪೋರ್ಟ್‌ ಆಗುವ ಮೊದಲು ಪ್ರಸ್ತುತವಾಗಿ ಹೊಂದಿರುವ ನೆಟ್‌ವರ್ಕ್‌ನಲ್ಲಿ ಕಮ್ಮಿಯೆಂದರೂ 90 ದಿನವನ್ನು ಪೂರೈಸಿರಬೇಕು. ಇಷ್ಟು ದಿನ ಪೂರೈಸದಿದ್ದರೆ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್‌ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.


    ಮೊಬೈಲ್‌ ನಂಬರ್‌ ಪೋರ್ಟ್‌ ಮಾಡಲು ಈ ಕ್ರಮಗಳನ್ನು ಅನುಸರಿಸಿ:


    • ಸಿಮ್‌ ಪೋರ್ಟ್ ಮಾಡಬೇಕಾದರೆ ಮೊದಲು ಯುನಿಕ್‌ ಪೋರ್ಟಿಂಗ್‌ ಕೋಡ್‌ (ಯುಪಿಸಿ) ಅಗತ್ಯ.

    • ಅದಕ್ಕಾಗಿ ಮೊದಲು ಯುಪಿಸಿಯನ್ನು ಜನರೇಟ್‌ ಮಾಡಿಕೊಳ್ಳಬೇಕು.

    • ನಿಮ್ಮ ಮೊಬೈಲ್‌ನಲ್ಲಿ ಕ್ಯಾಪಿಟಲ್‌ ಅಕ್ಷರದಲ್ಲಿ PORT ಸ್ಪೇಸ್‌ ಕೊಟ್ಟು ನೀವು ಪೋರ್ಟ್‌ ಮಾಡಲು ಬಯಸುವ ಮೊಬೈಲ್‌ ನಂಬರನ್ನು ನಮೂದಿಸಿ. ನಂತರ 1900 ನಂಬರ್‌ಗೆ ಎಸ್‌ಎಂಎಸ್‌ ಮಾಡಿ.

    • ಆ ನಂತರ ನಿಮಗೆ ಯುಪಿಸಿ ಎಸ್‌ಎಂಎಸ್‌ ರೂಪದಲ್ಲಿ ದೊರೆಯುತ್ತದೆ.

    •  ನೀವು ಯಾವ ನೆಟ್‌ವರ್ಕ್‌ಗೆ ಪೋರ್ಟ್‌ ಆಗಲು ಬಯಸುತ್ತೀರೋ ಆ  ಟೆಲಿಕಾಂ ಸಂಸ್ಥೆಯ ಸರ್ವೀಸ್‌ ಸೆಂಟರ್‌ಗೆ ಭೇಟಿ ನೀಡಿ.

    • ಕಸ್ಟಮರ್‌ ಅಕ್ವಿಸಿಷನ್‌ ಫಾರ್ಮ್‌ (ಸಿಎಎಫ್)‌ ಫಿಲ್‌ ಮಾಡಬೇಕು ಮತ್ತು ಕೆವೈಸಿ ದಾಖಲೆಯನ್ನು ನೀಡಬೇಕು.


    ಇದನ್ನೂ ಓದಿ: ಇದು ಶಿಯೋಮಿ ಪರಿಚಯಿಸುತ್ತಿರುವ ಹೊಸ ಲ್ಯಾಪ್‌ಟಾಪ್, ಬೆಲೆ ಎಷ್ಟು ಗೊತ್ತಾ?


    ಟೆಲಿಕಾಂನಲ್ಲಿ ಎಂಎನ್‌ಪಿ ನಿಯಮದ ಸೌಲಭ್ಯವು ಬಹಳಷ್ಟು ಗ್ರಾಹಕರಿಗೆ ಉಪಯೋಗವಾಗುತ್ತದೆ. ಇದಲ್ಲದೆ ಈ ಎಂಎನ್‌ಪಿಯಿಂದ ಸಿಮ್‌ಗಳು ಬೇಗನೆ ಪೋರ್ಟ್‌ ಆಗಲು ಸಾಧ್ಯವಾಗುತ್ತದೆ.

    Published by:Harshith AS
    First published: