• Home
  • »
  • News
  • »
  • tech
  • »
  • Twitter Verification: ಟ್ವಿಟ್ಟರ್​​ನಲ್ಲಿ ಬ್ಲೂ ಟಿಕ್‌ ಬರಬೇಕಾ? ಹಾಗಿದ್ರೆ ಈ ಟ್ರಿಕ್ಸ್‌ ಫಾಲೋ ಮಾಡಿ!

Twitter Verification: ಟ್ವಿಟ್ಟರ್​​ನಲ್ಲಿ ಬ್ಲೂ ಟಿಕ್‌ ಬರಬೇಕಾ? ಹಾಗಿದ್ರೆ ಈ ಟ್ರಿಕ್ಸ್‌ ಫಾಲೋ ಮಾಡಿ!

ಟ್ವಿಟರ್

ಟ್ವಿಟರ್

ಇನ್ನುಮುಂದೆ ಟ್ವಿಟರ್‌ನಲ್ಲಿ ಬ್ಲೂ ಟಿಕ್‌ ಪಡೀಬೇಕಾದರೆ ಹಣ ಪಾವತಿಸಬೇಕು. ಇನ್ನು ಬರಲಿರುವ ಈ ಯೋಜನೆ ಹಲವಾರು ಫೀಚರ್ಸ್‌ ಅನ್ನು ಹೊಂದಿದ್ದು ಬಳಕೆದಾರರಿಗೆ ಬಹಳಷ್ಟು ಸಹಾಯವಾಗಲಿದೆ. ಸ್ಪೆಷಲ್‌ ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.

  • Share this:

    ಇದೀಗ ಪ್ರಸಿದ್ಧ ಸೋಷಿಯಲ್‌ ಮೀಡಿಯಾಗಳಲ್ಲಿ (Social Media) ಟ್ವಿಟರ್‌ ಕೂಡ ಒಂದು. ಕೆಲವು ದಿನಗಳ ಹಿಂದೆ ಟ್ವಿಟರ್‌ನ (Twitter) ಸ್ವಾಧೀನ ಪಡಿಸಿಕೊಳ್ಳುವುದರ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಆದರೆ ಟ್ವಿಟರ್‌ ಅನ್ನು ಎಲಾನ್‌ ಮಸ್ಕ್‌ (Elon Musk) ಖರೀದಿ ಮಾಡುವ ಮೂಲಕ ಈ ಚರ್ಚೆಯನ್ನು ಬಗೆಹರಿಸಿದರು. ಇದೀಗ ಟೆಸ್ಲಾ ಸಿಇಒ (CEO) ಎಲಾನ್‌ ಮಸ್ಕ್‌ ತಮ್ಮ ಟ್ವಿಟರ್‌ನ ಕಾರ್ಯವೈಖರಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಇದು ಇವರ ಟ್ವಿಟರ್‌ ಅನ್ನು ಅಪ್ಡೇಟ್‌ ಮಾಡುವುದು ಮುಖ್ಯ ಗುರಿಯಾಗಿದೆ. ಟ್ವಿಟರ್‌ನಲ್ಲಿ ಇನ್ನು ಮುಂದೆ ಹಲವಾರು ಬದಲಾವಣೆಗಳು ಆಗಲಿದ್ದು ಜನರಿಗೆ ಬೇಕಾಗುವ ಫೀಚರ್ಸ್‌ ಅನ್ನು ನೀಡಲಿದೆ ಎಂದು ತಂತ್ರಜ್ಞರು ವರದಿ ಮಾಡಿದ್ದಾರೆ.


    ‘ದಿ ವರ್ಜ್‌’ನಲ್ಲಿನ ವರದಿಯ ಪ್ರಕಾರ, ಟ್ವಿಟರ್​ನ ಬ್ಲೂ ಸಬ್​ಸ್ಕ್ರಿಪ್ಷನ್ ಅಥವಾ ಟ್ವಿಟರ್‌ ವೆರಿಫಿಕೇಶನ್ ಪಡೆಯಬೇಕಾದರೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ. ಈ ಮೂಲಕ ಟ್ವಿಟರ್ ಬಳಕೆದಾರರ ವೆರಿಫಿಕೇಶನ್ ಪ್ರಕ್ರಿಯೆ ಸಂಪೂರ್ಣವಾಗಿ ಬದಲಾಗಲಿದೆ. ಆದರೆ, ಮಸ್ಕ್ ಯಾವ ರೀತಿಯ ಬದಲಾವಣೆ‌ ಆಗುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಕೆಲವೊಂದು ಇದುವರೆಗೆ ಆದಂತಹ ಬದಲಾವಣೆಗಳು ಇಲ್ಲಿವೆ.


    ಏನಿದು ಹೊಸ ಯೋಜನೆ?


    ಟ್ವಿಟರ್‌ ದಿನದಿಂದ ದಿನಕ್ಕೆ ಬಳಕೆದಾರರಿಗೆ ಹೊಸ ಹೊಸ ಫಿಚರ್ಸ್‌ ಅನ್ನು ಪರಿಚಯಿಸುತ್ತಿದೆ. ಇದೀಗ ಟ್ವಿಟರ್‌ ತನ್ನ ಬಳಕೆದಾರರು ಖಾತೆಗಳನ್ನು ವೆರಿಫಿಕೇಶನ್‌ ಮಾಡಲು 19.99 ಡಾಲರ್‌ ಅಂದರೆ ಭಾರತದಲ್ಲಿ 1600 ರೂಪಾಯಿಯನ್ನು ಪಾವತಿಸಬೇಕು.ಈ ಯೋಜನೆಯನ್ನು ತರಲು ಟ್ವಿಟರ್‌ ಪ್ರಕ್ರಿಯೆಯನ್ನು ಶುರುಮಾಡಿದೆ.


    ಇದನ್ನೂ ಓದಿ: ಸೋಷಿಯಲ್‌ ಮೀಡಿಯಾ ಅಕೌಂಟ್‌ಗೆ ಬ್ಲೂ ಟಿಕ್‌ ಪಡಿಬೇಕಾ? ಆದಷ್ಟು ಬೇಗ ಈ ಟ್ರಿಕ್ಸ್‌ ಫಾಲೋ ಮಾಡಿ


    ಆದರೆ ಈ ಬ್ಲೂ ಟಿಕ್‌ ಅಥವಾ ವೆರಿಫಿಕೇಶನ್‌ ಹೊಂದಿರಲು ಕೇವಲ 90 ದಿನಗಳವರೆಗೆ ಮಾತ್ರ ಅವಕಾಶವಿರುತ್ತದೆ. ಇದಲ್ಲದೆ ಈ ಚಂದಾದಾರಿಕೆಯ ವೈಶಿಷ್ಟ್ಯವನ್ನು ತಮ್ಮ ಖಾತೆಗಳಲ್ಲಿ ಅಳವಡಿಸಿಕೊಂಡರೆ ಇದು ಟ್ವೀಟ್‌ಗಳನ್ನು ಎಡಿಟ್‌ ಮಾಡಲು ಅಥವಾ ಅನ್‌ಡು ಮಾಡಲು ಅವಕಾಶ ನೀಡುತ್ತದೆ.


    Need a Blue Tick for a Social Media Account Follow these tricks as soon as possible
    ಟ್ವಿಟರ್


    ಯಾವಾಗ ಈ ಯೋಜನೆ ಪ್ರಾರಂಭ?


    ನವೆಂಬರ್ 7ರ ಒಳಗೆ ಈ ಫೀಚರ್​ ಅನ್ನು ಜಾರಿಗೊಳಿಸುವಂತೆ ಕಂಪೆನಿಯ ಸಿಇಒ ತಿಳಿಸಿದ್ದಾರೆ. ಇದರ ಜೊತೆಗೆ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೂ ತಿಳಿಸಲಾಗಿದೆ. ಆದಾಗ್ಯೂ ಎಲಾನ್‌ ಮಸ್ಕ್ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಈ ಯೋಜನೆಯನ್ನು ರದ್ದುಗೊಳಿಸುವ ಸಾಧ್ಯತೆಯೂ ಇದೆ.


    ಬ್ಲೂಟಿಕ್‌ನ ಫೀಚರ್ಸ್:


    ಯೂಸರ್ ವೆರಿಫಿಕೇಶನ್ ಪ್ರಕ್ರಿಯೆಯನ್ನು ಮರುಪರಿಶೀಲಿಸಲಾಗುವುದು ಎಂದು ಎಲೋನ್ ಮಸ್ಕ್ ತಮ್ಮ ಟ್ವೀಟ್​ನಲ್ಲಿ ಹೇಳಿದ್ದರು. ಆದರೆ ಇದರ ಒಂದು ದಿನದ ನಂತರ ಟ್ವಿಟರ್ ಬ್ಲೂ ಟಿಕ್ ಸಬ್​ಸ್ಕ್ರಿಪ್ಷನ್ ವಿಷಯದಲ್ಲಿ ಹಲವಾರು ನಿಯಮಗಳು ಬರಲಿವೆರ ಎಂದು ಕೆಲವೊಂದು ವರದಿಗಳು ಬಂದಿವೆ. ಟ್ವಿಟರ್‌ ಒಂದು ವರ್ಷದ ಹಿಂದೆ ಟ್ವಿಟರ್ ಬ್ಲೂ ಸಬ್​ಸ್ಕ್ರಿಪ್ಷನ್ ಆರಂಭಿಸಲಾಗಿತ್ತು. ಈ ಬ್ಲೂಟಿಕ್‌ ಹೊಂದಿರುವವರು ಜಾಹೀರಾತು ಇಲ್ಲದೇ ಕೆಲ ಪ್ರಕಾಶಕರ ಲೇಖನಗಳನ್ನು ಓದಲು ಮತ್ತು ಹೋಮ್ ಸ್ಕ್ರೀನ್ ಬಣ್ಣ ಬದಲಾಯಿಸುವುದು ಮುಂತಾದ ಫೀಚರ್​ಗಳನ್ನು ಹೊಂದಿದೆ.


    ಅಕ್ಷರಗಳ ಮಿತಿ ಏರಿಕೆ:


    ಟ್ವಿಟರ್ನಲ್ಲಿ ಇದುವರೆಗೆ ಬಳಕೆದಾರರಿಗೆ ಏನಾದರೊಂದು ಬರೀಬೇಕಾದರೆ ಒಂದಿಷ್ಟು ಮಿತಿಗಳಿದ್ದವು. ಆದರೆ ಇನ್ನು ಮುಂದೆ ಈ ಮಿತಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುವುದು ಅಥವಾ ಇದುವರೆಗೆ ಇದ್ದಂತಹ ಮಿತಿಗಿಂತ ಸ್ವಲ್ಪ ಹೆಚ್ಚಿಸಬಹುದೇ ಎಂಬ ಚಿಂತನಡೆ ನಡೆಸಲಾಗುತ್ತಿದೆ ಎಂದು ಎಲಾನ್‌ ಮಸ್ಕ್‌ ಅವರು ತಿಳಿಸಿದ್ದಾರೆ.


    Need a Blue Tick for a Social Media Account Follow these tricks as soon as possible
    ಟ್ವಿಟರ್


    ಇದುವರೆಗೆ ಇದ್ದಂತಹ ಅಕ್ಷರದ ಮಿತಿ:


    ಪ್ರಸ್ತುತವಾಗಿ ಟ್ವಿಟರ್ ಜನರಿಗೆ 280 ಅಕ್ಷರಗಳಲ್ಲಿ ಪೋಸ್ಟ್ ಮಾಡಲು ಅನುಮತಿಸುತ್ತದೆ. ಟ್ವಿಟರ್ ಪ್ರಾರಂಭದ ಸಮಯದಲ್ಲಿ, ಒಂದು ಟ್ವೀಟ್‌ಗೆ 140 ಅಕ್ಷರಗಳ ಮಿತಿಯನ್ನು ನಿಗದಿಪಡಿಸಿತ್ತು, ಆದರೆ ನವೆಂಬರ್ 2017 ರಲ್ಲಿ, ಕಂಪನಿಯು ಅದನ್ನು 280 ಅಕ್ಷರಗಳಿಗೆ ಹೆಚ್ಚಿಸಿತು. ಅಂದಿನಿಂದ 280 ಅಕ್ಷರಗಳ ಮಿತಿಯು ಇಲ್ಲಿಯವರೆಗೆ ಚಾಲನೆಯಲ್ಲಿದೆ. ಇದೀಗ ಈ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ.


    ಇದನ್ನೂ ಓದಿ: Redmi Note 12 Pro+ ಫೋನಿನಲ್ಲಿ 200-MP ಸ್ಯಾಮ್‌ಸಂಗ್ HPX ಕ್ಯಾಮೆರಾ! ನೀವು ನೋಡಲೇಬೇಕು


    ಎಲಾನ್‌ ಮಸ್ಕ್‌ ಟ್ವಿಟರ್‌ ಮೇಲೆ ಒಡೆತನವನ್ನು ಪಡೆದುಕೊಂಡ ಮೇಲೆ ಹಲವಾರು ಬದಲಾವಣೆಗಳು ಆಗಲಿವೆ ಎಂದು ಅಂದೇ ವರದಿ ಮಾಡಿದ್ದರು. ಅದೇ ರೀತಿ ಬದಲಾವಣೆಗಳನ್ನು ಮಾಡುತ್ತಾ ಬರುತ್ತಿದ್ದಾರೆ.

    Published by:Harshith AS
    First published: