ನಕಲಿ ಐಡಿ ಬಳಸಿ ಸಿಮ್’ಗಳ ಮಾರಾಟ: 938 ದೂರುಗಳು ದಾಖಲು; ಟೆಲಿಕಾಂ ಸಚಿವ ಹೇಳಿಕೆ

news18
Updated:December 29, 2017, 5:20 PM IST
ನಕಲಿ ಐಡಿ ಬಳಸಿ ಸಿಮ್’ಗಳ ಮಾರಾಟ: 938 ದೂರುಗಳು ದಾಖಲು; ಟೆಲಿಕಾಂ ಸಚಿವ ಹೇಳಿಕೆ
news18
Updated: December 29, 2017, 5:20 PM IST
ನವದೆಹಲಿ: ನಕಲಿ ಹೆಸರುಗಳಲ್ಲಿ ಸಿಮ್ ಪಡೆದು ವಂಚನೆ ನಡೆಸುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕುತೂಹಲಕರ ಮಾಹಿತಿ ಬಿಡುಗಡೆ ಮಾಡಿದೆ. ಕಳೆದ 5 ವರ್ಷಗಳಲ್ಲಿ ನಕಲಿ ಗುರುತು ಚೀಟಿಗಳನ್ನು ಬಳಸಿಕೊಂಡು ಸಾಕಷ್ಟು ಸಿಮ್’ಗಳ ಮಾರಾಟ ನಡೆದಿದೆಯಂತೆ. ಈ ನಿಟ್ಟಿನಲ್ಲಿ ಕೇಂದ್ರ ಟೆಲಿಕಾಂ ಇಲಾಖೆಗೆ 938 ದೂರುಗಳು ಬಂದಿವೆ. ಸುಮಾರು 65 ಸಾವಿರಕ್ಕೂ ಹೆಚ್ಚು ಮೊಬೈಲುಗಳಲ್ಲಿ ಈ ಸಿಮ್’ಗಳನ್ನು ಬಳಸಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಟೆಲಿಕಾಂ ಸಚಿವ ಮನೋಜ್ ಸಿನ್ಹಾ ನಿನ್ನೆ ರಾಜ್ಯಸಭೆಗೆ ತಿಳಿಸಿದ್ದಾರೆ. ಆದರೆ, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ನಕಲಿ ಐಡಿ ಬಳಸಿ ಪಡೆದಿರುವ ಎಲ್ಲಾ ಸಿಮ್’ಗಳನ್ನು ಡೀಆ್ಯಕ್ಟಿವೇಟ್ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಅಂತಹ ಎಲ್ಲಾ ಸಿಮ್’ಗಳನ್ನು ಶೀಘ್ರದಲ್ಲೇ ಡೀಆ್ಯಕ್ಟಿವೇಟ್ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಇದೀಗ ಸಿಮ್’ಗೆ ಆಧಾರನ್ನು ಲಿಂಕ್ ಮಾಡುವುದರಿಂದ ನಕಲಿ ಸಿಮ್’ಗಳನ್ನು ನಿಯಂತ್ರಿಸಬಹುದು ಎಂಬುದು ಸರಕಾರದ ಲೆಕ್ಕಾಚಾರ. ಈಗಾಗಲೇ ಆ ಪ್ರಕ್ರಿಯೆ ಕೂಡ ಚಾಲನೆಯಲ್ಲಿದೆ. ಬಹುತೇಕ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಂದ ಆಧಾರ್ ಲಿಂಕ್ ಮಾಡಿಕೊಳ್ಳುತ್ತಿವೆ.
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ