• Home
  • »
  • News
  • »
  • tech
  • »
  • National Internet Day: ಇಂದು ರಾಷ್ಟ್ರೀಯ ಇಂಟರ್‌ನೆಟ್ ದಿನ, ಇನ್ನಾದರೂ ಅಂತರ್ಜಾಲ ಸೇವೆಗೆ ಸಿಗುತ್ತಾ ವೇಗ?

National Internet Day: ಇಂದು ರಾಷ್ಟ್ರೀಯ ಇಂಟರ್‌ನೆಟ್ ದಿನ, ಇನ್ನಾದರೂ ಅಂತರ್ಜಾಲ ಸೇವೆಗೆ ಸಿಗುತ್ತಾ ವೇಗ?

ಇಂಟರ್ನೆಟ್‌ ದಿನ 2022

ಇಂಟರ್ನೆಟ್‌ ದಿನ 2022

Internet Day 2022: ಇಂಟರ್‌ನೆಟ್ ಸಂಪರ್ಕವನ್ನು 1969ರ ಅಕ್ಟೋಬರ್ 29 ರಂದು ಮಾಡಲಾಯಿತು. ನೀಲ್ ಆರ್ಮ್‌ಸ್ಟ್ರಾಂಗ್ ಅವರು ಚಂದ್ರನ ಮೇಲೆ ಇಳಿದ ಕೇವಲ ಎರಡು ತಿಂಗಳ ನಂತರ ಈ ಇಂಟರ್ನೆಟ್‌ ಸಂಪರ್ಕವನ್ನು ಸ್ಥಾಪಿಸಲಾಯಿತು.

  • Share this:

    ಇಂಟರ್ನೆಟ್‌ (Internet) ಎಂಬುದು ಈಗಿನ ಆಧುನಿಕ ತಂತ್ರಜ್ಞಾನದಲ್ಲಿ ನಮ್ಮ ಜೀವನದ ಪ್ರಮುಖ ಭಾಗವಾಗಿ ರೂಪುಗೊಂಡಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರನ್ನು ಸಂಪರ್ಕ ಮಾಡಬೇಕಾದರೆ ಇಂಟರ್ನೆಟ್ ಸಹಕಾರಿಯಾಗಿದೆ. ಇಂಟರ್ನೆಟ್ ದೊಡ್ಡ ಸಂಖ್ಯೆಯ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನೆಟ್‌ವರ್ಕ್‌ಗಳಿಂದ (Network) ಮಾಡಲ್ಪಟ್ಟಿದೆ. ಪ್ರಸ್ತುತವಾಗಿ ಇಂಟರ್ನೆಟ್ ಇಲ್ಲದ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಏಕೆಂದರೆ ಅಷ್ಟು ಜನರು ಈ ಇಂಟರ್ನೆಟ್‌ಗೆ ಹೊಂದಿಕೊಂಡಿದ್ದಾರೆ ಎಂದು ಹೇಳಬಹುದು. ಇಂಟರ್ನೆಟ್‌ ಮಾಹಿತಿಯನ್ನು ತಿಳಿಯಬೇಕಾದರೆ ಬೇಗನೆ ಸಹಾಯಕವಾಗುತ್ತದೆ. ಇದರಿಂದ ಜ್ಞಾನವನ್ನು ಪಡೆಯುವುದರ ಜೊತೆಗೆ ಇಂಟರ್ನೆಟ್ ಬಳಕೆದಾರರಿಗೆ ಅಂತ್ಯವಿಲ್ಲದ ಮನರಂಜನೆಯನ್ನು (Entertainment) ಪೂರೈಕೆ ಮಾಡುತ್ತದೆ.


    ಇಂಟರ್ನೆಟ್ ಎಂಬುದು ಬಹಳಷ್ಟು ಜನರಿಗೆ ಸಹಕಾರಿಯಾಗಿದೆ. ಇದು ಮನೆಯಲ್ಲಿಯೇ ಕುಳಿತು ಬ್ಯಾಂಕಿಂಗ್‌ ಸೇವೆಗಳನ್ನು ಮಾಡಲು, ಅಂತರ್ಜಾಲದ ಮೂಲಕ ವ್ಯವಹಾರ ನಡೆಸಲು ಅಲ್ಲದೇ ನಮಗೆ ಬೇಕಾದ ವಿಷಯಗಳನ್ನು ಇದರ ಸಹಾಯದಿಂದ ಕಂಡುಕೊಳ್ಳಬಹುದಾಗಿದೆ.


    ಇಂಟರ್ನೆಟ್‌ ದಿನದ ಇತಿಹಾಸ:


    ಇಂಟರ್ನೆಟ್ ವಿಶ್ವದ ಅತಿದೊಡ್ಡ ನೆಟ್ವರ್ಕ್ ಆಗಿದೆ. ಇದು ಜಾಗತಿಕ ಕಂಪ್ಯೂಟರ್ ನೆಟ್‌ವರ್ಕ್ ಆಗಿದ್ದು ಅದು ಹಲವು ರೀತಿಯ ಮಾಹಿತಿ ಮತ್ತು ಸಂವಹನ ಸೌಲಭ್ಯಗಳನ್ನು ಒದಗಿಸುತ್ತದೆ. ಮೊದಲ ಇಂಟರ್ನೆಟ್ ಸಂಪರ್ಕವನ್ನು 1969ರ ಅಕ್ಟೋಬರ್ 29 ರಂದು ಮಾಡಲಾಯಿತು. ನೀಲ್ ಆರ್ಮ್‌ಸ್ಟ್ರಾಂಗ್ ಅವರು ಚಂದ್ರನ ಮೇಲೆ ಇಳಿದ ಕೇವಲ ಎರಡು ತಿಂಗಳ ನಂತರ ಈ ಇಂಟರ್ನೆಟ್‌ ಸಂಪರ್ಕವನ್ನು ಸ್ಥಾಪಿಸಲಾಯಿತು.


    ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಅನಗತ್ಯ ಸಂದೇಶ ಕಳುಹಿಸಿದರೆ ದಂಡ! ಇದಕ್ಕಂತನೇ ಸರ್ಕಾರದಿಂದ ಸಮಿತಿ ರಚನೆ


    ಇದಾಗಿ ಕೆಲವು ವರ್ಷಗಳ ಬಳಿಕ HTTP (ಹೈಪರ್‌ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್), HTML (ಹೈಪರ್‌ಟೆಕ್ಸ್ಟ್ ಮಾರ್ಕ್‌ಅಪ್ ಲ್ಯಾಂಗ್ವೇಜ್) ಅನ್ನು ಅಭಿವೃದ್ಧಿಗೊಳಿಸಿದರು.  WWW, HTTP, HTML ಮತ್ತು URL ಗಳ ಅಭಿವೃದ್ಧಿಯು 1989 ಮತ್ತು 1991 ರ ನಡುವೆ ನಡೆಯಿತು. ಈ ಎಲ್ಲದರ ಅಭಿವೃದ್ಧಿಯ ನಂತರ 2005ರ ಅಕ್ಟೋಬರ್ 29 ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಆಚರಿಸಲಾಯಿತು.


    INational Internet Day Internet service getting faster Here is the information
    ಸಾಂದರ್ಭಿಕ ಚಿತ್ರ


    ಇಂಟರ್ನೆಟ್‌ ದಿನದ ಮಹತ್ವ:


    ಸರಳವಾಗಿ ಹೇಳುವುದಾದರೆ ಇಂಟರ್ನೆಟ್ ಒಂದು ಮಹತ್ತರವಾದ  ವಿಷಯವಾಗಿದೆ. ಇದು ಎರಡು ಕಂಪ್ಯೂಟರ್‌ಗಳು ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಸರ್ವರ್ ಎನ್ನುವುದು ನಿರ್ದಿಷ್ಟ ಕಂಪ್ಯೂಟರ್ ಆಗಿದ್ದು ಅದು ನೇರವಾಗಿ ಇಂಟರ್ನೆಟ್‌ಗೆ ಸಂಪರ್ಕ ಹೊಂದಿದೆ


    . ಪ್ರಪಂಚದಾದ್ಯಂತದ ಜನರು ವೀಡಿಯೊ ಕಾನ್ಫರೆನ್ಸ್ ಮಾಡಲು, ಆನ್ಲೈನ್‌ ಮೂಲಕ ಏನಾದರು ವ್ಯವಹಾರಗಳನ್ನು ಮಾಡಲು ಸಹಾಯವಾಗುತ್ತದೆ. ಇದಲ್ಲದೆ ಇಂಟರ್ನೆಟ್‌ ಬಳಕೆದಾರರಿಗೆ ನಂಬಲಸಾಧ್ಯವಾದ ದರದಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಕೊಡುತ್ತದೆ ಮತ್ತು ರವಾನಿಸಲು ಸುಲಭಮಾಡಿಕೊಡುತ್ತದೆ. ಮನರಂಜನೆಗೆ ಅಥವಾ ಇನ್ನಾವುದೇ ಕೆಲಸಕ್ಕೆ ಇಂಟರ್ನೆಟ್ ಸುಲಭೀಕರಿಸಿದೆ. ಅದಕ್ಕಾಗಿಯೇ ರಾಷ್ಟ್ರೀಯ ಇಂಟರ್ನೆಟ್ ದಿನವನ್ನು ಆಚರಿಸಲಾಗುತ್ತದೆ.


    ಇದಲ್ಲದೆ ಕೆಲವು ದೇಶಗಳು ತಮ್ಮ ನಾಗರಿಕರಿಗೆ ಇಂಟರ್ನೆಟ್ ಬಳಸಲು ಅನುಮತಿಸುವುದಿಲ್ಲ. ಚೀನಾ, ಕ್ಯೂಬಾ, ಇರಾನ್, ಉತ್ತರ ಕೊರಿಯಾ ಮತ್ತು ಸಿರಿಯಾದಂತಹ ಕೆಲವು ದೇಶಗಳಲ್ಲಿನ ಸರ್ಕಾರವು ಬಳಕೆಗೆ ನಿಷೇಧ ಹೇರಿವೆ. ಇಂಟರ್ನೆಟ್ ಬಳಸುವ ನಾಗರಿಕರಿಗೆ ಷರತ್ತುಗಳನ್ನು ಅಥವಾ ಅದರ ಮೇಲಿನ ಸ್ವಾತಂತ್ರ್ಯವನ್ನು ಮಿತಿಗೊಳಿಸಿವೆ.


    National Internet Day Internet service getting faster Here is the information
    ಸಾಂದರ್ಭಿಕ ಚಿತ್ರ


    ಇಂಟರ್ನೆಟ್‌ ಬಳಕೆಯ ಅಂಶಗಳು:


    • ಇಂಟರ್ನೆಟ್‌ ಬಳಕೆದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅದೇ ರೀತಿ ಸಮೀಕ್ಷೆಯ ಪ್ರಕಾರ ವರ್ಷಕ್ಕೆ ಸರಾಸರಿ ಶೇ 8.2 ದರದಲ್ಲಿ ಹೆಚ್ಚಾಗುತ್ತದೆ. ಇದಕ್ಕೆ ಹೋಲಿಸಿದರೆ ಜಾಗತಿಕ ಜನಸಂಖ್ಯೆಯು ವಾರ್ಷಿಕವಾಗಿ ಕೇವಲ ಶೇ 1.05 ರಷ್ಟು ಸರಾಸರಿ ದರದಲ್ಲಿ ಹೆಚ್ಚಾಗುತ್ತದೆ ಎಂದು ವರದಿ ಹೇಳುತ್ತದೆ.

    • ಏಷ್ಯಾದಲ್ಲಿ 2.8 ಕೋಟಿಗಿಂತ ಹೆಚ್ಚಿನ ಇಂಟರ್ನೆಟ್‌ ಬಳಕೆದಾರರು ಇದ್ದಾರೆ. ಇದು ಇಂಟರ್ನೆಟ್‌ ಬೆಳವಣಿಗೆಯಾಗಲು ಕಾರಣ ಅಂತ ಹೇಳಬಹುದು.

    • ಯುರೋಪ್ 700 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದ್ದು ಎರಡನೇ ಸ್ಥಾನದೆಲ್ಲಿದೆ.

    • ಪ್ರಪಂಚದಾದ್ಯಂತ ಶೇ 32 ರಷ್ಟು ಇಂಟರ್ನೆಟ್ ಬಳಕೆದಾರರು 25 ರಿಂದ 34 ವರ್ಷ ವಯಸ್ಸಿನವರಾಗಿದ್ದಾರೆ.


    ಇದನ್ನೂ ಓದಿ: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ

    • ಸರಾಸರಿ ಇಂಟರ್ನೆಟ್ ವೇಗವು 5.6 Mbps ಆಗಿದೆ. ಅತಿ ಹೆಚ್ಚು ಸರಾಸರಿಯು ದಕ್ಷಿಣ ಕೊರಿಯಾದಲ್ಲಿ 26.7 Mbps ಆಗಿದೆ.

    Published by:Harshith AS
    First published: