‘ಪಬ್​ಜಿ‘ ಚಟಕ್ಕೆ ಮತ್ತೊಂದು ಬಲಿ; ಹೊಸ ಮೊಬೈಲ್​ ಕೊಡಿಸದ್ದಕ್ಕೆ ಮನನೊಂದು ಆತ್ಮಹತ್ಯೆ

ಬಾಲಕ ತನ್ನ ಪೋಷಕರ ಬಳಿ 37,000 ಮೊಬೈಲ್​ ತೆಗೆದು ಕೊಡುವಂತೆ ಒತ್ತಾಯಿಸಿದ್ದಾನೆ. ಪೋಷಕರು 20,000 ರೂಗಿಂತ ಅಧಿಕ ಬೆಲೆಯ ಮೊಬೈಲ್​ ತೆಗೆದುಕೊಡುವುದಿಲ್ಲವೆಂದು ಹೇಳಿದ್ದಾರೆ. ಈ ಕಾರಣಕ್ಕೆ  ಮನನೊಂದ ಬಾಲಕ ಆತ್ಮಹತ್ಯೆಗೆ ಶರಣಾದ ಎಂದು ಪೋಲಿಸರು ತಿಳಿಸಿದ್ದಾರೆ.

news18
Updated:February 5, 2019, 8:38 AM IST
‘ಪಬ್​ಜಿ‘ ಚಟಕ್ಕೆ ಮತ್ತೊಂದು ಬಲಿ; ಹೊಸ ಮೊಬೈಲ್​ ಕೊಡಿಸದ್ದಕ್ಕೆ ಮನನೊಂದು ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
news18
Updated: February 5, 2019, 8:38 AM IST
ಮುಂಬೈ:  ‘ಪಬ್​ಜಿ‘ ಆಟವಾಡಲು ಹೊಸ ಮೊಬೈಲ್​ ಕೊಡಿಸದ್ದಕ್ಕೆ 18 ವರ್ಷದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ಮುಂಬೈ ಪ್ರದೇಶದಲ್ಲಿ ನಡೆದಿದೆ. ಬಾಲಕ ‘ಪಬ್​ಜಿ‘ ಆಟವಾಡಲು ತನ್ನ ಪೋಷಕರ ಬಳಿ ಹೊಸ ಮೊಬೈಲ್​ ಕೊಡಿಸಬೇಕಾಗಿ ಹಠ ಹಿಡಿದಿದ್ದು, ಪೋಷಕರು ಬಾಲಕ  ಹೇಳಿದ ಮೊಬೈಲ್​ ತೆಗೆದುಕೊಡಲು ನಿರಾಕರಿಸಿದ ಕಾರಣ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮುಂಬೈ  ನೆಹರು ನಗರ ಪ್ರದೇಶದಲ್ಲಿ ಈ ಘಟನೆಯು ನಡೆದಿದ್ದು, ಬಾಲಕ ತನ್ನ ಪೋಷಕರ ಬಳಿ 37,000 ಮೊಬೈಲ್​ ತೆಗೆದು ಕೊಡುವಂತೆ ಒತ್ತಾಯಿಸಿದ್ದಾನೆ. ಪೋಷಕರು 20,000 ರೂಗಿಂತ ಅಧಿಕ ಬೆಲೆಯ ಮೊಬೈಲ್​ ತೆಗೆದುಕೊಡುವುದಿಲ್ಲವೆಂದು ಹೇಳಿದ್ದಾರೆ. ಈ ಕಾರಣಕ್ಕೆ  ಮನನೊಂದ ಬಾಲಕ ಆತ್ಮಹತ್ಯೆಗೆ ಶರಣಾದ ಎಂದು ಪೋಲಿಸರು ತಿಳಿಸಿದ್ದಾರೆ.

ಇದನ್ನೂ ಓದಿ: ವೀರ ಯೋಧರಿರುವ ಬೆಳಗಾವಿಯ ಮರಾಠ ರೆಜಿಮೆಂಟ್​ಗೆ 250 ವರ್ಷದ ಸಂಭ್ರಮ

‘ಪಬ್​ಜಿ‘ ಆಟದ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಯುವಕರು ಹಾಗೂ ಚಿಕ್ಕ ವಯಸ್ಸಿನ ಬಾಲಕರು ‘ಪಬ್​ಜಿ‘ ಆಟದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ನಿಷೇಧ ಹೂಡುವಂತೆ ಪೋಷಕರು ಬೇಡಿಕೆ ನೀಡುತ್ತಿದ್ದಾರೆ.  ಇತ್ತೀಚೆಗೆ 11 ವರ್ಷದ ಬಾಲಕ ‘ಪಬ್​ಜಿ‘ ಆಟದ ಕುರಿತು ಮುಂಬೈ ಹೈ-ಕೋರ್ಟ್​ಮನವಿ ಬರೆದಿದ್ದು, ‘ಪಬ್​ಜಿ‘ ಆಟದಿಂದ ಹಿಂಸಾಚಾರ, ಅಕ್ರಮಶೀಲತೆ ಉತ್ತೇಜಿಸುವ ಘಟನೆಗಳು ಹೆಚ್ಚಾಗುತ್ತಿದೆ. ಈ ಕುರಿತು ‘ಪಬ್​ಜಿ‘ ಆಟವನ್ನು ನಿಷೇಧ ಹೂಡುವಂತೆ ನ್ಯಾಯಾಲಯಕ್ಕೆ ಮನವಿ ಬರೆದಿದ್ದಾನೆ.

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...