• Home
  • »
  • News
  • »
  • tech
  • »
  • 5G Network: 5ಜಿ ಎಂದರೆ 5 ಪ್ರಮುಖ ಗುರಿ! ಇದು ದೇಶದ ಅಭಿವೃದ್ಧಿ ಪಥ ಎಂದ ಮುಕೇಶ್ ಅಂಬಾನಿ

5G Network: 5ಜಿ ಎಂದರೆ 5 ಪ್ರಮುಖ ಗುರಿ! ಇದು ದೇಶದ ಅಭಿವೃದ್ಧಿ ಪಥ ಎಂದ ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

ನರೇಂದ್ರ ಮೋದಿ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ದೇಶ ಕಾಯುತ್ತಿದ್ದ ಬಹುನಿರೀಕ್ಷಿತ 5ಜಿ ತಂತ್ರಜ್ಞಾನಾಧಾರಿತ ದೂರ ಸಂವಹನ ಸೇವೆಗಳನ್ನು ಉದ್ಘಾಟಿಸಿದ್ದಾರೆ. ಮುಕೇಶ್ ಅಂಬಾನಿ ಅವರು 5ಜಿ ತಂತ್ರಜ್ಞಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ 5ಜಿ ಎಂದರೇನು? ಅವರ ಮಾತುಗಳಲ್ಲೇ ಕೇಳಿ...

ಮುಂದೆ ಓದಿ ...
  • Share this:

ಈಗಾಗಲೇ 5ಜಿ ತಂತ್ರಜ್ಞಾನದ ಬಗ್ಗೆ ಎಲ್ಲೆಡೆ ಚರ್ಚೆ ಆರಂಭವಾಗಿದೆ. ನಿಜಕ್ಕೂ ಈ ತಂತ್ರಜ್ಞಾನ ಮುಂದಿನ ಪೀಳಿಗೆಯ ಸಂಪರ್ಕ ತಂತ್ರಜ್ಞಾನಕ್ಕಿಂತಲೂ ಹೆಚ್ಚಿನದಾಗಿದೆ. ಇಪ್ಪತ್ತೊಂದನೇಯ ಶತಮಾನದ ಸಂಪೂರ್ಣ ಸಾಮರ್ಥ್ಯದ ಅಂಶಗಳಾದ ಕೃತಕ ಬುದ್ಧಿಮತ್ತೆ (Artificial intelligence), ಮೆಟಾವರ್ಸ್ ಮುಂತಾದವುಗಳನ್ನು ಅನಾವರಣಗೊಳಿಸುವ ಪ್ರಮುಖ ಕೀಲಿಕೈಯಾಗಿದೆ ಈ ತಂತ್ರಜ್ಞಾನ ಎಂದು ರಿಲಯನ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಹೇಳಿದ್ದಾರೆ.  ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ದೇಶ ಕಾಯುತ್ತಿದ್ದ ಬಹುನಿರೀಕ್ಷಿತ 5ಜಿ ತಂತ್ರಜ್ಞಾನಾಧಾರಿತ ದೂರ ಸಂವಹನ ಸೇವೆಗಳನ್ನು ಉದ್ಘಾಟಿಸಿದ್ದಾರೆ. 


ಈ ಉದ್ಘಾಟನೆಗೂ ಮುಂಚೆ ಮಾತನಾಡಿದ ಮುಕೇಶ್ ಅಂಬಾನಿ ಅವರು 5ಜಿ ತಂತ್ರಜ್ಞಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು, "5ಜಿ ತಂತ್ರಜ್ಞಾನ ಎಂಬುದು ಕೇವಲ ಮುಂದಿನ ಪೀಳಿಗೆಯ ಅದ್ಭುತ ತಂತ್ರಜ್ಞಾನವಾಗಿಲ್ಲ, ಬದಲಾಗಿ ಇದು ಇನ್ನೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನನಗನಿಸುವಂತೆ ಇದು 21ನೇ ಶತಮಾನದ ತಂತ್ರಜ್ಞಾನ ಕ್ಷಮತೆ ಎನ್ನಬಹುದಾದ ಎಐ, ಮೆಟಾವರ್ಸ್, ರೊಬೋಟಿಕ್ಸ್, ಬ್ಲಾಕ್ ಚೈನ್ ಮುಂತಾದ ಅಸಾಧಾರಣ ಅಂಶಗಳನ್ನು ಸಂಪೂರ್ಣವಾಗಿ ಅನಾವರಣಗೊಳಿಸುವ ಪ್ರಮುಖ ಮಾರ್ಗವಾಗಿದೆ" ಎಂದು ಹೇಳಿದರು.


ಮುಂದುವರೆಯುತ್ತ ಅವರು ಈ 5ಜಿ ಎಂಬುದು ಐದು ಗುರಿಗಳನ್ನು ಸೂಚಿಸುತ್ತದೆ ಹಾಗೂ ಆ ಐದು ಗುರಿಗಳು ದೇಶವನ್ನು ಪರಿವರ್ತಿಸುವ ಪ್ರಮುಖ ಅಂಶಗಳಾಗಿವೆ ಎಂದು ಮುಕೇಶ್ ಅಭಿಪ್ರಾಯ ಪಟ್ಟಿದ್ದು ಆ ಐದು ಗುರಿಗಳು ಯಾವುವು ಎಂಬುದನ್ನು ತಿಳಿಯೋಣ.


ಐದು ಪ್ರಮುಖ ಗುರಿಗಳು:


1. 5ಜಿ ತಂತ್ರಜ್ಞಾನವು ಸಾಮಾನ್ಯ ಭಾರತೀಯರಿಗೂ ಕೈಗೆಟುಕುವಂತಹ ಶಿಕ್ಷಣ ಮತ್ತು ಕೌಶಲ್ಯವೃದ್ಧಿಯನ್ನು ಒದಗಿಸಲು ಸಶಕ್ತವಾಗಿದೆ. ಈ ಮೂಲಕ ಭಾರತದ ಯುವ ಸಮುದಾಯ ಸದ್ಯದ ಜಗತ್ತಿನ ಶಕ್ತಿಯುತ ಸ್ಕಿಲ್ ಹಾಗೂ ಶಿಕ್ಷಣವನ್ನು ತಮ್ಮ ಸಾಮರ್ಥ್ಯಕ್ಕನುಸಾರ ಪಡೆದು ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ಅವಕಾಶ ಪಡೆಯುತ್ತಾರೆ.


2. 5ಜಿ ತಂತ್ರಜ್ಞಾನವು ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಗ್ರಾಮೀಣ ವಲಯಕ್ಕೂ ನೀಡಲು ಸಮರ್ಥವಾಗಿದೆ. ಯಾವುದೇ ಹೆಚ್ಚಿನ ಬಂಡವಾಳವಿಲ್ಲದೆ ಪ್ರಚಲಿತದಲ್ಲಿರುವ ಆಸ್ಪತ್ರೆಗಳನ್ನು ಸ್ಮಾರ್ಟ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಬಹುದಾಗಿದೆ. ಈ ಮೂಲಕ ಅತ್ಯುತ್ತಮ ವೈದ್ಯರ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಪ್ರತಿಯೊಬ್ಬರೂ ಸರಾಗವಾಗಿ ಪಡೆಯಬಹುದು. ಇದು ಗ್ರಾಮೀಣ ವಲಯದಲ್ಲೂ ಆರೋಗ್ಯ ಕ್ಷೇತ್ರವನ್ನು ಸುಧಾರಿಸುತ್ತದೆ.


ಇದನ್ನೂ ಓದಿ: 5ಜಿಯಿಂದ ಲೈಫೇ ಬದಲು! ಹೇಗಿರುತ್ತೆ ಮೊಬೈಲ್ ಎಕ್ಸ್‌ಪೀರಿಯನ್ಸ್?


3. ಇನ್ನು ಕೃಷಿ, ಸೇವೆಗಳು, ವ್ಯಾಪಾರ, ಕೈಗಾರಿಕೆ, ಮಾಹಿತಿ ಮುಂತಾದ ಕ್ಷೇತ್ರಗಳಿಗೆ ಬಂದರೆ 5ಜಿ ತಂತ್ರಜ್ಞಾನವು ದತ್ತಾಂಶಗಳ ಪರಿಣಾಮಕಾರಿ ನಿರ್ವಹಣೆ ಹಾಗೂ ಡಿಜಿಟಲೀಕರಣದ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮಧ್ಯೆ ಇರುವ ಅಂತರವನ್ನು ಮಹತ್ತರವಾಗಿ ಕಡಿಮೆ ಮಾಡುತ್ತದೆ. ಈ ಮೂಲಕ ಎಲ್ಲ ವಾಣಿಜ್ಯೀಕರಣದ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಸಿಕ್ಕಿ ಆರ್ಥಿಕವಾಗಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು.


4. ಸದ್ಯ ದೊಡ್ಡ ಹಾಗೂ ಮಧ್ಯಮ ಕೈಗಾರಿಕೆಗಳು ಬಳಸುತ್ತಿರುವ ಶಕ್ತಿಯುತ ಪರಿಕರಗಳನ್ನು 5ಜಿ ತಂತ್ರಜ್ಞಾನವು ಸಣ್ಣ ಕೈಗಾರಿಕೆಗಳೂ ಸಹ ಬಳಸುವಂತೆ ಅನುವು ಮಾಡಿಕೊಡುತ್ತದೆ. ಹಾಗಾಗಿ ಸಣ್ಣ ಕೈಗಾರಿಕೆಗಳೂ ಸಹ ಹೆಚ್ಚಿನ ಆದಾಯಗಳಿಸುವ ಮೂಲಕ ಪ್ರದೇಶದ ಒಟ್ಟಾರೆ ಆರ್ಥಿಕ ಸ್ಥಿತಿ ಉತ್ತಮವಾಗಿಸುವಲ್ಲಿ ಕೊಡುಗೆ ನೀಡಬಹುದು.


ಇದನ್ನೂ ಓದಿ: ಟೆಲಿಕಾಂ ಕ್ಷೇತ್ರದ ಇತಿಹಾಸದಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ: ಅಶ್ವಿನಿ ವೈಷ್ಣವ್


5. ಇನ್ನು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆಯನ್ನು ಪ್ರತಿಯೊಂದು ಕ್ಷೇತ್ರಗಳಲ್ಲಿ ತಂದಾಗ 5ಜಿ ತಂತ್ರಜ್ಞಾನವು ಭಾರತವನ್ನು ಜಗತ್ತಿನ ಬುದ್ಧಿಮತ್ತೆಯ ರಾಜಧಾನಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಭಾರತವು ಜಗತ್ತಿನಲ್ಲಿ ಅತಿ ಹೆಚ್ಚು ಮೌಲ್ಯವರ್ಧಿತ ಡಿಜಿಟಲ್ ಪರಿಹಾರಗಳನ್ನು ರಫ್ತು ಮಾಡುವ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಬಹುದು.

First published: