ಇಂಟರ್​ನೆಟ್​ನಲ್ಲಿ ಧೋನಿ ಅಂತ ಸರ್ಚ್​ ಮಾಡುವ ಮುನ್ನ ಯೋಚಿಸಿ; ಇಲ್ಲಿದೆ ಆಘಾತಕಾರಿ ಸುದ್ದಿ!

ಕೇವಲ ಧೋನಿ ಬಗ್ಗೆ ಮಾತ್ರವಲ್ಲಿದೆ ಬಾಲಿವುಡ್ ನಟಿಯರಾದ ರಾಧಿಕಾ ಆಪ್ಟೆ, ಶ್ರದ್ಧಾ ಕಪೂರ್, ಬ್ಯಾಡ್ಮಿಂಟನ್ ತಾರೆ ಪಿ. ವಿ ಸಿಂಧೂ, ಸಚಿನ್ ತೆಂಡೂಲ್ಕರ್ ಸೇರಿದಂರೆ ಪ್ರಮುಖರ ಬಗ್ಗೆ ಹುಡುಕುವುದು ಸಹ ಅಪಾಯವಾಗಿದೆ.

Vinay Bhat | news18-kannada
Updated:October 23, 2019, 12:29 PM IST
ಇಂಟರ್​ನೆಟ್​ನಲ್ಲಿ ಧೋನಿ ಅಂತ ಸರ್ಚ್​ ಮಾಡುವ ಮುನ್ನ ಯೋಚಿಸಿ; ಇಲ್ಲಿದೆ ಆಘಾತಕಾರಿ ಸುದ್ದಿ!
ಎಂ ಎಸ್ ಧೋನಿ ಹಾಗೂ ರಾಧಿಕ ಆಪ್ಟೆ
  • Share this:
ಬೆಂಗಳೂರು (ಅ. 23): ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ವದಾದ್ಯಂತ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಧೋನಿ ಬಗ್ಗೆ ಇಂಟರ್​ನೆಟ್​​ನಲ್ಲಿ ಅಭಿಮಾನಿಗಳು ನಿರಂತರವಾಗಿ ಶೋಧ ನಡೆಸುತ್ತಿರುತ್ತಾರೆ. ಆದರೆ, ಸದ್ಯ ಅವರ ಜನಪ್ರಿಯತೆ ನೆಟಿಜನ್​ಗಳಿಗೆ ಅಪಾಯಕಾರಿ ಎಂದು ಸಾಬೀತಾಗಿದೆ.

ಗೂಗಲ್ ಸರ್ಚ್​ನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಬಗ್ಗೆ ಯಾವುದೇ ಮಾಹಿತಿಯನ್ನು ಹುಡುಕಿದರೆ ಅದರ ಜೊತೆಗೆ ಅಪಾಯಕಾರಿ ವೈರಸ್ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಸೇರಿಕೊಳ್ಳುತ್ತದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

MS Dhoni most dangerous celebrity to search online in India; Check out top 10 list, states McAfee
ಎಂ ಎಸ್ ಧೋನಿ, ಟೀಂ ಇಂಡಿಯಾ ಮಾಜಿ ನಾಯಕ


ಅಂದರೆ ಧೋನಿ ಕುರಿತಾದ ಕುತೂಹಲಕಾರಿ ಅಂಶಗಳು ನಿಮ್ಮನ್ನು ವೈರಸ್ ವೆಬ್​ಸೈಟ್​​ಗಳಿಗೆ ನೇರ ಸಂಪರ್ಕ ಕಲ್ಪಿಸುವ ಸಾಧ್ಯತೆ ಇದೆ ಎಂದು ಆ್ಯಂಟಿ ವೈರಸ್ ಸೇವೆ ನೀಡುವ ಮೆಕಾಫಿ ಸಂಸ್ಥೆ ತಿಳಿಸಿದೆ.

ಪ್ರತಿಭಟನೆ ಹಿನ್ನಲೆ; ಬಾಂಗ್ಲಾದೇಶ ಬದಲು ಟೀಂ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ ಈ ತಂಡ?

ಕೇವಲ ಧೋನಿ ಬಗ್ಗೆ ಮಾತ್ರವಲ್ಲಿದೆ ಬಾಲಿವುಡ್ ನಟಿಯರಾದ ರಾಧಿಕಾ ಆಪ್ಟೆ, ಶ್ರದ್ಧಾ ಕಪೂರ್, ಬ್ಯಾಡ್ಮಿಂಟನ್ ತಾರೆ ಪಿ. ವಿ ಸಿಂಧೂ, ಸಚಿನ್ ತೆಂಡೂಲ್ಕರ್ ಸೇರಿದಂರೆ ಪ್ರಮುಖರ ಬಗ್ಗೆ ಹುಡುಕುವುದು ಸಹ ಅಪಾಯವಾಗಿದೆ. ಮೊಬೈಲ್ ಮತ್ತು ಕಂಪ್ಯೂಟರ್​​​ಗಳಿಗೆ ವೈರಸ್ ನುಸುಳಲು ಸ್ಟಾರ್ ಸೆಲೆಬ್ರಿಟಿಗಳ ಹೆಸರು ಬಳಕೆಯಾಗುತ್ತಿದೆ ಎಂದು ಮೆಕಾಫಿ ಹೇಳಿದೆ.

ಈ ಬಗ್ಗೆ ಮಾತನಾಡಿರುವ ಮೆಕಾಫಿ ಕಂಪನಿಯ ಭಾರತದ ವ್ಯವಸ್ಥಾಪಕ, "ಮೋಸ್ಟ್ ಡೇಂಜರಸ್ ಸೆಲೆಬ್ರಿಟಿ 2019 ಪಟ್ಟಿಯಲ್ಲಿ ಧೋನಿ ಪ್ರಥಮ ಸ್ಥಾನ ಪಡೆದಿದ್ದಾರೆ. ಧೋನಿ ಅಭಿಮಾನಿಗಳು ದೇಶ-ವಿದೇಶಗಳಲ್ಲಿದ್ದಾರೆ. ಅವರು ಧೋನಿಯ ಬಗ್ಗೆ ಮತ್ತಷ್ಟು ತಿಳಿಯಲು ಹಂಬಲಿಸುತ್ತಿರುತ್ತಾರೆ. ಧೋನಿ ಬಗೆಗಿನ ಫೊಟೋ ಅಥವಾ ಇತರೆ ಮಾಹಿತಿಯನ್ನು ಡೌನ್ ಲೋಡ್ ಮಾಡುತ್ತಾರೆ. ಇದರಿಂದ ಗ್ರಾಹಕರ ಅಮೂಲ್ಯ ಮಾಹಿತಿ ಬೇರೆಯವರಿಗೆ ಲಭ್ಯವಾಗುತ್ತದೆ"ಧೋನಿಯೇ ನಿವೃತ್ತಿ ನೀಡಿಲ್ಲ, ನನ್ನ ಗಂಡ ಯಾಕೆ ಕೊಡಬೇಕು?; ಪಾಕ್ ಆಟಗಾರನ ಪತ್ನಿ

"ಕೆಲವರಿಗೆ ಈ ಬಗ್ಗೆ ಮಾಹಿತಿ ಇದ್ದರೂ ತಮ್ಮ ನೆಚ್ಚಿನ ಕ್ರೀಡೆ, ಮನೋರಂಜನೆ, ವಿಡಿಯೋವನ್ನು ನೋಡಲೇ ಬೇಕೆಂದು ಪೈರೇಟೆಡ್ ವೆಬ್​ಸೈಟ್​​ನಲ್ಲಿ ನೋಡಲು ಇಚ್ಚಿಸುತ್ತಾರೆ" ಎಂದು ಹೇಳಿದ್ದಾರೆ. ಮೆಕಾಫಿ ಬಿಡುಗಡೆ ಮಾಡಿರುವ 2019ರ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

ಎಂ ಎಸ್ ಧೋನಿ, ಸಚಿನ್ ತೆಂಡೂಲ್ಕರ್, ಗೌತಮ್ ಗುಲಾಟಿ, ಸನ್ನಿ ಲಿಯೋನ್, ಬಾದ್​ಶಾ, ರಾಧಿಕಾ ಆಪ್ಟೆ, ಶ್ರದ್ಧಾ ಕಪೂರ್, ಹರ್ಮನ್​ಪ್ರೀತ್​ ಕೌರ್, ಪಿವಿ ಸಿಂಧು, ಕ್ರಿಸ್ಟಿಯಾನೊ ರೊನಾಲ್ಡೊ.

First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading