ನಿಮಗೆ ಮರೆವು ಇದ್ರೆ Fine ಕಟ್ಬೇಕಾಗುತ್ತೆ ಹುಷಾರ್! ಬಚಾವಾಗೋಕೆ ಈ App ಬಳಸಿ

mParivahan: ನಿಮ್ಮ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಬಹುದು. ಅವುಗಳನ್ನು ಅಧಿಕಾರಿಗಳಿಗೆ ತೋರಿಸಿ ಆರಾಮವಾಗಿ ಪ್ರಯಾಣಿಸಬಹುದು.

ಟ್ರಾಫಿಕ್​ ನಿಯಮ ಮರೆಯದಿರಿ!

ಟ್ರಾಫಿಕ್​ ನಿಯಮ ಮರೆಯದಿರಿ!

  • Share this:
ಮರೆವು ಯಾರಿಗಿಲ್ಲ ಹೇಳಿ? ಕೆಲಸಕ್ಕೆ ಹೊರಡುವಾಗ ಅವಸರದಲ್ಲಿ ಪರ್ಸ್ ಮರೆಯುವುದು, ಆ ಪರ್ಸ್​ನಲ್ಲಿ ಡ್ರೈವಿಂಗ್ ಲೈಸೆನ್ಸ್ (Driving License) ಇಟ್ಟುಕೊಂಡು ಟ್ರಾಫಿಕ್ ಪೊಲೀಸರ (Traffic Police) ತಪಾಸಣೆ ವೇಳೆ ಡ್ರೈವಿಂಗ್ ಲೈಸೆನ್ಸ್ ಮರೆತು ಹೋಗುವುದು ಸರ್ವೇಸಾಮಾನ್ಯ. ನಮ್ಮ ನಿಮ್ಮಂತಹ ವಾಹನ ಸವಾರರಿಗೆ ನಿತ್ಯದ ಅನುಭವ. ರಸ್ತೆಯಲ್ಲಿ ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ (DL) ಮತ್ತು ವಾಹನ ನೋಂದಣಿ ಪ್ರಮಾಣಪತ್ರದ ಅಗತ್ಯವಿದೆ. ದ್ವಿಚಕ್ರ ವಾಹನವಾಗಲಿ, ನಾಲ್ಕು ಚಕ್ರದ ವಾಹನಗಳಾಗಲಿ ಅಥವಾ ಇನ್ನಾವ ವಾಹನವೇ ಆಗಿರಲಿ ಈ ದಾಖಲೆಗಳನ್ನು (Vehicle Documents) ಹೊಂದಿರಬೇಕು. ಪದೇ ಪದೇ ನಿಮ್ಮ ಡ್ರೈವಿಂಗ್ ಲೈಸೆನ್ಸ್, RC ಅನ್ನು ಮರೆತುಬಿಡುತ್ತೀರಾ? ತಲೆಬಿಸಿ ಮಾಡಿಕೊಳ್ಳಬೇಡಿ, ನಿಮಗಾಗಿ ಪರಿಹಾರ (mParivahan) ಇಲ್ಲಿದೆ!

ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಪಾಸಣೆ ವೇಳೆ ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್‌ಸಿ ತೋರಿಸುವುದು ಕಡ್ಡಾಯವಾಗಿದೆ. ಆದರೆ ನೀವು  ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್‌ಸಿ ತೋರಿಸಿದರೆ ಸಾಕು. ಆದರೆ ನಿಮ್ಮ ಚಾಲನಾ ಪರವಾನಗಿ, ಆರ್‌ಸಿ ಫೋಟೋವನ್ನು ಸರ್ಕಾರ ನಿಗದಿಪಡಿಸಿರುವ ರೀತಿಯಲ್ಲೇ ತೋರಿಸಬೇಕಿದೆ.

ಚಾಲನಾ ಪರವಾನಗಿ ಅಥವಾ ಆರ್‌ಸಿ ಭೌತಿಕ ಪ್ರತಿ ಬೇಡ!
ಮೋಟಾರು ವಾಹನ ಕಾಯಿದೆ 1989 ರ ತಿದ್ದುಪಡಿಯ ಪ್ರಕಾರ ವಾಹನ ಚಾಲಕರು ಚಾಲನಾ ಪರವಾನಗಿ ಅಥವಾ ಆರ್‌ಸಿ ಭೌತಿಕ ಪ್ರತಿಯನ್ನು ಹೊಂದುವ ಅಗತ್ಯವಿಲ್ಲ. ಡಿಜಿಟಲ್ ಪ್ರತಿಯನ್ನು ತೋರಿಸಬಹುದಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಿಶೇಷವಾಗಿ mParivahan ಎಂಬ ಹೆಸರಿನಲ್ಲಿ ಆ್ಯಪ್ ಅನ್ನು ರಚಿಸಿದೆ.

ಆರಾಮಾಗಿ ಪ್ರಯಾಣಿಸಿ!
ನಿಮ್ಮ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈ ಅಪ್ಲಿಕೇಶನ್‌ನಲ್ಲಿ ಸಂಗ್ರಹಿಸಬಹುದು. ಅವುಗಳನ್ನು ಅಧಿಕಾರಿಗಳಿಗೆ ತೋರಿಸಿ ಆರಾಮವಾಗಿ ಪ್ರಯಾಣಿಸಬಹುದು. ಎಂಪಿರಿವಾಹನ್ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್, ಆಪಲ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು.

ಎಂಪರಿವಾಹನ್ ಅಪ್ಲಿಕೇಶನ್‌ನಲ್ಲಿ ಚಾಲಕರ ಪರವಾನಗಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂದು ನೀವೂ ತಿಳಿಯಿರಿ.

ಮೊದಲು ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಎಂಪಿರಿವಾಹನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ನಿಮ್ಮ ಮೊಬೈಲ್ ನೋಂದಣಿಯನ್ನು ಸಂಖ್ಯೆಯೊಂದಿಗೆ ಮಾಡಬೇಕು.

ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ: Mango Rate: ಒಂದು ಕೆಜಿ ಮಾವಿನ ಹಣ್ಣಿಗೆ 2.70 ಲಕ್ಷ! ಎಲ್ಲಿ ಸಿಗುತ್ತೆ ಈ ಮಾವು?

ಮೊದಲು ನೀವು ಡ್ರೈವಿಂಗ್ ಲೈಸೆನ್ಸ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ನಿಮ್ಮ ಚಾಲನಾ ಪರವಾನಗಿ ಸಂಖ್ಯೆಯನ್ನು ನೀವು ನಮೂದಿಸಬೇಕು.

ನನ್ನ ಡ್ಯಾಶ್‌ಬೋರ್ಡ್‌ಗೆ ಸೇರಿಸು ಕ್ಲಿಕ್ ಮಾಡಿ.

ನಿಮ್ಮ ಜನ್ಮ ದಿನಾಂಕವನ್ನು ನೀವು ನಮೂದಿಸಬೇಕು.

ನಿಮ್ಮ ಚಾಲನಾ ಪರವಾನಗಿಯನ್ನು ಡ್ಯಾಶ್‌ಬೋರ್ಡ್‌ಗೆ ಸೇರಿಸಲಾಗುತ್ತದೆ.

ಅದೇ ರೀತಿ ನೋಂದಣಿ ಪ್ರಮಾಣಪತ್ರವನ್ನು ಡ್ಯಾಶ್‌ಬೋರ್ಡ್‌ನಲ್ಲಿ ಸೇರಿಸಬೇಕು.

ಆರಾಮ್​ಸೇ ಪಾರಾಗಿ!
ವರ್ಚುವಲ್ ಡ್ರೈವಿಂಗ್ ಲೈಸೆನ್ಸ್, ಆರ್‌ಸಿ ಡ್ಯಾಶ್‌ಬೋರ್ಡ್‌ನಲ್ಲಿ ಕಾಣಿಸುತ್ತದೆ. ಕ್ಲಿಕ್ ಮಾಡಿದರೆ ಪೂರ್ಣ ವಿವರಗಳು ಮತ್ತು ಕ್ಯೂಆರ್ ಕೋಡ್ ಕೂಡ ಕಾಣಿಸುತ್ತದೆ. ಸಂಚಾರಿ ಪೊಲೀಸರು ಅಥವಾ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿರುವಾಗ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಎಂಪರಿವಾಹನ್ ಆ್ಯಪ್‌ನಲ್ಲಿ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್‌ಸಿ ತೋರಿಸಿದರೆ ಸಾಕು. ಅಧಿಕಾರಿಗಳು QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಪರಿಶೀಲಿಸುತ್ತಾರೆ.

ಇದನ್ನೂ ಓದಿ: Loan Fraud: ರಾಜ್​ಕುಮಾರ್ ರಾವ್, ಸನ್ನಿ ಲಿಯೋನ್​ ಅವರಂತೆ ನೀವೂ ಮೋಸ ಹೋಗ್ಬೇಡಿ!

ಎಂಪರಿವಾಹನ್ ಅಪ್ಲಿಕೇಶನ್‌ನಲ್ಲಿ ವಿವಿಧ ಬಳಕೆದಾರರು ಡ್ರೈವಿಂಗ್ ಲೈಸೆನ್ಸ್ ಮತ್ತು ಆರ್‌ಸಿಯನ್ನು ಸೇರಿಸಬಹುದು. ಉದಾಹರಣೆಗೆ ಹೆಂಡತಿಯ ವಾಹನವನ್ನು ಗಂಡ ಓಡಿಸುತ್ತಿದ್ದಾನೆ ಎಂದಿಟ್ಟುಕೊಳ್ಳಿ. ನಂತರ ಹೆಂಡತಿ ವಾಹನದ ನೋಂದಣಿ ಪ್ರಮಾಣಪತ್ರವನ್ನು ತೋರಿಸಬೇಕು. ಪತಿ ಚಾಲನಾ ಪರವಾನಗಿಯನ್ನು ತೋರಿಸಬೇಕು. ಹಾಗಾಗಿ ಇವುಗಳನ್ನು ಒಂದೇ ಅಪ್ಲಿಕೇಶನ್​ನಲ್ಲಿ ಸೇರಿಸಬಹುದು.
Published by:guruganesh bhat
First published: