ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಮೊಬೈಲ್ ಕಂಪನಿಗಳಿವೆ (Mobile Company). ಆದರೆ ಇದರಲ್ಲಿ ಜನಪ್ರಿಯ ಪಡೆದುಕೊಂಡ ಕಂಪನಿಗಳು ಕೆಲವೇ ಕೆಲವು. ಆ ಸಾಲಿನಲ್ಲಿ ಮೊಟೊರೊಲಾ ಕಂಪನಿ (Motorola Company) ಕೂಡ ಒಂದು. ಇದೀಗ ಮೊಟೊರೊಲಾ ಕಂಪನಿಯಿಂದ ಹೊಸ ಸ್ಮಾರ್ಟ್ಫೋನ್ ಬರುತ್ತಿದೆ ಎಮದು ಸುದ್ದಿಯಾಗಿದ್ದು, ಇದು ಬಿಡುಗಡೆಗೂ ಮೊದಲೇ ಗ್ರಾಹಕರಲ್ಲಿ ಭಾರೀ ಕುತೂಹಲವನ್ನು ಮೂಡಿಸಿದೆ. ಇದೀಗ ಮೊಟೊ ಕಂಪನಿಯಿಂದ ಬಿಡುಗಡೆಯಾಗುತ್ತಿರುವ ಸ್ಮಾರ್ಟ್ಫೋನ್ ಮೊಟೊ ಇ13 (Moto E13) ಎಂಬುದಾಗಿದ್ದು ಈ ಮೊಬೈಲ್ನ ಫೋಟೋ ಜೊತೆಗೆ ಇದರ ಫೀಚರ್ಸ್ ಕೂಡ ಸೋರಿಕೆಯಾಗಿದೆ. ಮುಂದಿನ ವರ್ಷದಲ್ಲಿ ಬಿಡುಗಡೆಯಾಗುವಂತಹ ನಿರೀಕ್ಷೆಯಿದ್ದು, ಮಾರುಕಟ್ಟೆಯಲ್ಲಿ ವಿಶೇಷ ರೀತಿಯ ಫೀಚರ್ಸ್ ಅನ್ನು ಹೊಂದಿಕೊಂಡು ಬರಲಿದೆ ಎಂದು ಹೇಳಲಾಗಿದೆ.
ಮೊಟೊರೊಲಾ ಕಂಪನಿಯಿಂದ ಬಿಡುಗಡೆಯಾಗುವಂತಹ ಸ್ಮಾರ್ಟ್ಫೋನ್ ಮೊಟೊ ಇ13 ಎಂಬುದಾಗಿದೆ. ಈ ಸ್ಮಾರ್ಟ್ಫೋನ್ ಮುಂದಿನ ವರ್ಷದಲ್ಲಿ ಬಿಡುಗಡೆಯಾಗಲಿದ್ದು ಬಿಡುಗಡೆಯ ಮೊದಲೇ ಇದರ ಕೆಲವೊಂದು ಫೀಚರ್ಸ್ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದೆ. ಹಾಗಿದ್ರೆ ಮೊಟೊ ಇ13 ಮೊಬೈಲ್ನ ಫೀಚರ್ಸ್ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಮೊಟೊ ಇ13 ಪ್ರೊಸೆಸರ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಮೊಟೊ ಇ13 ಸ್ಮಾರ್ಟ್ಫೋನ್ ಯುನಿಸೊಕ್ ಟಿ606 ಪ್ರೊಸೆಸರ್ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಇದು ಆಂಡ್ರಾಯ್ಡ್ 13 ಗೋ ವರ್ಷನ್ನಲ್ಲಿ ಸ್ಮಾರ್ಟ್ಫೋನ್ ಅನ್ನು ರನ್ ಮಾಡುವ ಸಾಧ್ಯತೆಯಿದೆ. ಹಾಗೆಯೇ 2ಜಿಬಿ ರ್ಯಾಮ್ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 1TB ವೆರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ನೀಡಲಿದೆ.
ಇದನ್ನೂ ಓದಿ: ವಿವೋದಿಂದ 3 ಹೊಚ್ಚಹೊಸ ಸ್ಮಾರ್ಟ್ಫೋನ್ಗಳ ಬಿಡುಗಡೆ! ಹೊಸವರ್ಷಕ್ಕೆ ಅನಾವರಣ
ಮೊಟೊ ಇ13 ಸ್ಮಾರ್ಟ್ಫೋನ್ ಫೀಚರ್ಸ್
ಮೊಟೊ ಇ13 ಸ್ಮಾರ್ಟ್ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್ಫೋನ್ ಆಗಿರುವುದರಿಂದ ಇದು 6.73 ಇಂಚಿನ ಹೆಚ್ಡಿ ಡಿಸ್ಪ್ಲೇ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಡಿಸ್ಪ್ಲೇ 20.5:9 ರಚನೆಯ ಅನುಪಾತವನ್ನು ಹೊಂದಿರಬಹುದು ಎಂದು ಸೋರಿಕೆಯಾದ ಫೋಟೋ ವನ್ನು ನೋಡಿ ಅಂದಾಜಿಸಬಹುದು. ಅಲ್ಲದೆ ಡಿಸ್ಪ್ಲೇ ವಾಟರ್ಡ್ರಾಪ್-ಶೈಲಿಯ ನಾಚ್ ವಿನ್ಯಾಸವನ್ನು ಹೊಂದಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಕ್ಯಾಮೆರಾ ಫೀಚರ್ಸ್
ಈ ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಆದರೆ ಇದರಲ್ಲಿ ಒಂದು ಮಾತ್ರ ಕ್ಯಾಮೆರಾದಲ್ಲಿ ಸೆನ್ಸಾರ್ ಇರಲಿದೆ. ಇನ್ನೊಂದು ಕ್ಯಾಮೆರಾದಲ್ಲಿ ಎಲ್ಇಡಿ ಫ್ಲ್ಯಾಷ್ ಲೈಟ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಈ ಸ್ಮಾರ್ಟ್ಫೋನ್ 5 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.
ಬ್ಯಾಟರಿ ಫೀಚರ್ಸ್ ಹೇಗಿರಲಿದೆ?
ಮೊಟೊ ಇ13 ಸ್ಮಾರ್ಟ್ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರು ನಿರೀಕ್ಷೆಯಿದೆ. ಇದು ವೇಗದ ಚಾರ್ಜಿಂಗ್ ಬೆಂಬಲಿಸುವ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಜೊತೆಗೆ ಫೋನ್ನ ಕೆಳಭಾಗದಲ್ಲಿ ಯುಎಸ್ಬಿ ಟೈಪ್ ಸಿ ಪೋರ್ಟ್ನೊಂದಿಗೆ ಬರುತ್ತದೆ ಎಂದು ರೆಂಡರ್ಗಳು ತೋರಿಸುತ್ತವೆ. ಹಾಗೆಯೇ ಪೋರ್ಟ್ ಪಕ್ಕದಲ್ಲಿ ಬಲಭಾಗದಲ್ಲಿ ಸ್ಪೀಕರ್ ಗ್ರಿಲ್ ಮತ್ತು ಎಡಭಾಗದಲ್ಲಿ ಮೈಕ್ರೊಫೋನ್ ಇದೆ.
ಬೆಲೆ ಮತ್ತು ಲಭ್ಯತೆ:
ಮೊಟೊರೊಲಾ ಕಂಪನಿಯ ಈ ಮೊಬೈಲ್ ಆರಂಭದ ಹಂತದಲ್ಲಿ ಇರುವುದರಿಂದ ಇದು 10 ಸಾವಿರ ರೂಪಾಯಿಯಲ್ಲಿ ಖರೀದಿಸುವ ಅವಕಾಶವನ್ನು ಗ್ರಾಹಕರಿಗೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.
ಮೊಟೊ ಎಕ್ಸ್40 ಸ್ಮಾರ್ಟ್ಫೋನ್
ಇದಲ್ಲದೆ ಮೊಟೊರೊಲಾ ಕಂಪನಿ ಇತ್ತೀಚಿಗೆ ಮೊಟೊರೊಲಾ ಕಂಪನಿ ಹೊಸ ಮೊಟೊ ಎಕ್ಸ್40 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇನ್ನು ಮೊಟೊ ಎಕ್ಸ್40 ಸ್ಮಾರ್ಟ್ಫೋನ್ 6.7 ಇಂಚಿನ ಫುಲ್ ಹೆಚ್ಡಿ ಪ್ಲಸ್ OLED ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ 60 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾ ಹೊಂದಿರುವುದು ಇದರ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಜೊತೆಗೆ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 125W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ