ಮೊಟೊರೊಲಾದಿಂದ ಬಜೆಟ್​ ಬಿಡುಗಡೆ


Updated:September 4, 2018, 4:16 PM IST
ಮೊಟೊರೊಲಾದಿಂದ ಬಜೆಟ್​ ಬಿಡುಗಡೆ

Updated: September 4, 2018, 4:16 PM IST
ಲೆನೊವೊ ಒಡೆತನದ ಮೊಟೊರೊಲಾ ಸಂಸ್ಥೆ ಇದೀಗ ಹೊಸ 'P' ಶ್ರೇಣಿಯ ಮೊಬೈಲ್​ಗಳನ್ನು ಸ್ಮಾರ್ಟ್​​ಫೋನ್​ ಮಾರುಕಟ್ಟೆಗೆ ಪರಿಚಯಿಸಿದ್ದು ಚೀನಾದಲ್ಲಿ P30 ನೋಟ್​ ಮೊಬೈಲ್​ ಮಾಡಿದೆ.

6.2 ಇಂಚಿನ ಎಲ್​ಸಿಡಿ ಡಿಸ್​ಪ್ಲೇ ರೆಸಲ್ಯುಷನ್​ ಹೊಂದಿರುವ P30 ನೋಟ್​ ಮೊಬೈಲ್​ 4GB RAM ಮತ್ತು 6GB RAM ಅವತರಣಿಕೆಯಲ್ಲಿ ಲಭ್ಯವಿದ್ದು, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಈ ಮೊಬೈಲ್​ 20,000 ದಿಂದ 24,000ರೂ. ಒಳಗೆ ಲಭ್ಯವಿರುತ್ತದೆ.

ಸ್ನಾಪ್​ಡ್ರಾಗನ್​ 636 ಒಕ್ಟಾಕೋರ್​ ಪ್ರೊಸೆಸರ್​ನೊಂದಿಗೆ ಆಡ್ರಿನೊ 509 ಜಿಪಿಯು ಸಪೋರ್ಟ್​​ ಹೊಂದಿರುವ P30 ನೋಟ್​ ಮೊಬೈಲ್​ ಆ್ಯಂಡ್ರಾಯ್ಡ್​​ 8.0 ಓರಿಯೋ ಆಪರೇಟಿಂಗ್​ ಸಿಸ್ಟಂ ಹೊಂದಿದೆ. 4ಜಿಬಿ ಹಾಗೂ 6ಜಿಬಿ ಮೊಬೈಲ್​ಗಳು ಕನಿಷ್ಟ 64 ಜಿಬಿಯ ಆಂತರಿಕ ಮೆಮೊರಿ ಹೊಂದಿದೆ.

ಇನ್ನು ಕ್ಯಾಮೆರಾ, ಬ್ಯಾಟರಿ ವಿಚಾರಕ್ಕೆ ಬರುವುದಾದರೆ P30 ನೋಟ್​ ಮೊಬೈಲ್​ 16 ಮೆಗಾಪಿಕ್ಸೆಲ್​​ ಮತ್ತು 5 ಎಂಪಿ ಹಿಂಭಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಮುಂಭಾಗದಲ್ಲಿ 12 ಮೆಗಾಪಿಕ್ಸೆಲ್​ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಸೂಪರ್​ಫಾಸ್ಟ್​​ ಚಅರ್ಜಿಂಗ್​ ಆಯ್ಕೆಗಾಗಿ ಎಸ್​ಬಿ ಟೈಪ್​ ಸಿ ಚಾರ್ಜಿಂಗ್​ ಪೋರ್ಟ್​ ಸೇರಿಂದಂತೆ 5,000mAh ಬ್ಯಾಟರಿ ನೀಡಲಾಗಿದೆ.

 

 
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...