ಗಣೇಶ ಹಬ್ಬದ ವಿಶೇಷ: ಫ್ಲಿಪ್​​ಕಾರ್ಟ್​ನಲ್ಲಿ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ಓಪನ್​ ಸೇಲ್​

ಮೋಟೋರೋಲಾ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ಫ್ಲಿಪ್​ಕಾರ್ಟ್​ನಲ್ಲಿ ಓಪನ್​ ಸೇಲ್​ ನಡೆಯುತ್ತಿದೆ. ಗೊಪ್ರೊ ಮಾದರಿಯ ವಿಡಿಯೋ ಕ್ಯಾಮಾರಾ ವಿಶೇಷತೆ ಹೊಂದಿರುವ ಮೋಟೋರೋಲಾ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾವನ್ನು ನೀಡಲಾಗಿದೆ.

news18-kannada
Updated:September 2, 2019, 2:09 PM IST
ಗಣೇಶ ಹಬ್ಬದ ವಿಶೇಷ: ಫ್ಲಿಪ್​​ಕಾರ್ಟ್​ನಲ್ಲಿ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ಓಪನ್​ ಸೇಲ್​
ಮೋಟೋರೋಲಾ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​
  • Share this:
ಇತ್ತೀಚೆಗೆ ಮೋಟೋರೋಲಾ ಕಂಪೆನಿ ಬಿಡುಗಡೆ ಮಾಡಿದ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಮೊನ್ನೆ ಫ್ಲಿಪ್​ಕಾರ್ಟ್​ನಲ್ಲಿ ಓಪನ್​ ಸೇಲ್​ ಆರಂಭಿಸಿತ್ತು. ಈಗಾಗಗಲೇ ಹೊಸ ಫೀಚರ್ಸ್​ ಮತ್ತು ಬಜೆಟ್​ ಬೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಿರುವ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ಗಣೇಶ ಹಬ್ಬದ ಪ್ರಯುಕ್ತ ಸಂಭ್ರಮದ ಸಮಾಚಾರವನ್ನು ನೀಡಿದೆ.

ಮೋಟೋರೋಲಾ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ಫ್ಲಿಪ್​ಕಾರ್ಟ್​ನಲ್ಲಿ ಓಪನ್​ ಸೇಲ್​ ನಡೆಯುತ್ತಿದೆ. ಗೊಪ್ರೊ ಮಾದರಿಯ ವಿಡಿಯೋ ಕ್ಯಾಮಾರಾ ವಿಶೇಷತೆ ಹೊಂದಿರುವ ಮೋಟೋರೋಲಾ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ನ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾವನ್ನು ನೀಡಲಾಗಿದೆ. ಇದು 12+5+16 ಮೆಗಾಫಿಕ್ಸೆಲ್ ಸಾಮರ್ಥ್ಯವನ್ನು​ ಹೊಂದಿದೆ. ಸೆಲ್ಫಿಗಾಗಿ 12 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಿದೆ.

ಇದನ್ನೂ ಓದಿ: ಆಲಮಟ್ಟಿಯಲ್ಲಿ ತಂತಾನೆ ತೂಗಿದ ಜೋಕಾಲಿ; ನಿಜಕ್ಕೂ ಆಗಿದ್ದೇನು? – ರಾಕ್ ಗಾರ್ಡನ್ ಸಿಬ್ಬಂದಿ ಹೇಳುವುದೇನು?

ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ಸ್ಯಾಮ್​ಸಂಗ್​​ ಎಕ್ಸಿನೋಸ್​ 9609 ಪ್ರೊಸೆಸರ್​ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನೂತನ ಸ್ಮಾರ್ಟ್​ಫೋನ್​ 4GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯನ್ನು ಒಳಗೊಂಡಿದೆ. ದೀರ್ಘಕಾಲದ ಬಳಕೆಗಾಗಿ 3,500mAh ಬ್ಯಾಟರಿಯನ್ನು ನೀಡಲಾಗಿದೆ. ಗ್ರಾಹಕರಿಗಾಗಿ ಈ ಸ್ಮಾರ್ಟ್​ಫೋನ್​ ನೀಲಿ ಹಾಗೂ ಬಿಳಿಯ ಬಣ್ಣದಲ್ಲಿ ದೊರಕುತ್ತಿದೆ.

ಫ್ಲಿಪ್​ಕಾರ್ಟ್​ ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ಓಪನ್​ ಸೇಲ್​ನಲ್ಲಿ 13,999 ರೂ.ಗೆ ಸಿಗಲಿದೆ.

ಒನ್​ ಆ್ಯಕ್ಷನ್​ ಸ್ಮಾರ್ಟ್​ಫೋನ್​ ವಿಶೇಷತೆ

ಪ್ರೊಸೆಸರ್​: ಸ್ಯಾಮ್​ಸಂಗ್​ ಎಕ್ಸಿನೋಸ್​ 9609RAM​: 4GB RAM​

ಸ್ಟೊರೇಜ್​: 128GB

ಹಿಂಭಾಗದ ಕ್ಯಾಮೆರಾ: 12+5+16 ಮೆಗಾಫಿಕ್ಸೆಲ್​

ಸೆಲ್ಫಿ ಕ್ಯಾಮೆರಾ: 12 ಮೆಗಾಫಿಕ್ಸೆಲ್​

ಬ್ಯಾಟರಿ: 3,500

ಬೆಲೆ: 13,999 ರೂ
First published:September 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading