HOME » NEWS » Tech » MOTOROLA MOTO G9 POWER LAUNCHED IN INDIA PRICE SPECIFICATIONS AND MORE HG

Motorola Moto G9 Power; ತ್ರಿವಳಿ ಕ್ಯಾಮೆರಾ, 6 ಸಾವಿರ mAh ಬ್ಯಾಟರಿ; ಬಜೆಟ್​​ ಬೆಲೆಗೆ ಸಿಗುತ್ತಿದೆ ಮೊಟೊ G9 ಪವರ್​!

ಮೊಟೊ G9 ಪವರ್​ ಸ್ಮಾರ್ಟ್​ಫೋನ್​​ 6.8 ಇಂಚಿನ ಹೆಚ್​ಡಿ ಡಿಸ್​​​ಪ್ಲೇ ಹೊಂದಿದ್ದು, ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿದೆ.

news18-kannada
Updated:December 8, 2020, 4:49 PM IST
Motorola Moto G9 Power; ತ್ರಿವಳಿ ಕ್ಯಾಮೆರಾ, 6 ಸಾವಿರ mAh ಬ್ಯಾಟರಿ; ಬಜೆಟ್​​ ಬೆಲೆಗೆ ಸಿಗುತ್ತಿದೆ ಮೊಟೊ G9 ಪವರ್​!
Moto G9 Power
  • Share this:
ಮೊಟೊರೋಲಾ ಜಿ9 ಪವರ್​ ಸ್ಮಾರ್ಟ್​ಫೋನನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.  ನೂತನ ಸ್ಮಾರ್ಟ್​ಫೋನನ್ನು ಬಜೆಟ್​ ಬೆಲೆ ಪರಿಚಯಿಸಿದ್ದು, ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ಡಿಸೆಂಬರ್​ 15 ರಿಂದ ಸೇಲ್​ ಮಾಡಲು ಮುಂದಾಗಿದೆ. ನೂತನ ಫೋನ್​ 64 ಮೆಗಾಫಿಕ್ಸೆಲ್​ ಕ್ಯಾಮೆರಾದ ಜೊತೆಗೆ 6 ಸಾವಿರ ಎಮ್​ಎಹೆಚ್​ ಬ್ಯಾಟರಿಯನ್ನು ಹೊಂದಿದೆ. ಮೊಟೊರೋಲಾ ಜಿ9 ಪವರ್ ಸ್ಮಾರ್ಟ್​ಫೋನಿನ ಬೆಲೆ ಮತ್ತು ಫೀಚರ್​ ಬಗ್ಗೆ ಮಾಹಿತಿ ಇಲ್ಲಿದೆ.

Moto G9 Power

ಮೊಟೊ G9 ಪವರ್​ ಸ್ಮಾರ್ಟ್​ಫೋನ್​​ 6.8 ಇಂಚಿನ ಹೆಚ್​ಡಿ ಡಿಸ್​​​ಪ್ಲೇ ಹೊಂದಿದ್ದು, ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿದೆ. ತ್ರಿವಳಿ ಕ್ಯಾಮೆರವನ್ನು ಈ ಸ್ಮಾರ್ಟ್​ಫೋನ್​ ಹೊಂದಿದ್ದು, 64 ಮೆಗಾಫಿಕ್ಸೆಲ್​ ಕ್ಯಾಮೆರಾ ಜೊತೆಗೆ ಕ್ವಾಡ್​​ ಪಿಕ್ಸೆಲ್​​ ಟೆಕ್ನಾಲಜಿ ಅಳವಡಿಸಿದೆ. 2 ಮೆಗಾಫಿಕ್ಸೆಲ್​ ಸೆಕೆಂಡರಿ ಸೆನ್ಸಾರ್​, 2 ಮೆಗಾಫಿಕ್ಸೆಲ್​​​ ಡೆಪ್ತ್​​​ ಸೆನ್ಸಾರ್​ ಇದರಲ್ಲಿ ನೀಡಲಾಗಿದೆ.

ಸ್ನಾಪ್​​ಡ್ರಾಗನ್​ 662 ಪ್ರೊಸೆಸರ್​ನಲ್ಲಿ ಕಾರ್ಯ ನಿರ್ವಹಿಸುವ ಈ ಸ್ಮಾರ್ಟ್​ಫೋನ್​ 4GB RAM​ ಮತ್ತು 64GB ಸ್ಟೊರೇಜ್​ ಆಯ್ಕೆಯನ್ನು ಹೊಂದಿದೆ. 512GB ತನಕ ಮೆಮೊರಿ ವೃದ್ಧಿಸಬಹುದಾಗಿದೆ.

ಇನ್ನು ಸ್ಮಾರ್ಟ್​ಫೋನಿನಲ್ಲಿ ಫಿಂಗರ್​ಪ್ರಿಂಟ್​ ಸೆನ್ಸಾರ್​ ನೀಡಲಾಗಿದೆ. ಯುಎಸ್​ಬಿ ಟೈಪ್​-ಸಿ ಪೋರ್ಟ್​ ಮತ್ತು ಹೆಡ್​ಫೋನ್​ ಜಾಕ್​ ನೀಡಿದೆ. 4G ಲೈಟ್​, ವೈ-ಫೈ 802.11ಎಸಿ, ಬ್ಲೂಟೂತ್​ v5.0 ಫೀಚರ್​ ಇದರಲ್ಲಿದೆ. ಗ್ರಾಹಕರಿಗಾಗಿ ಎಲೆಕ್ಟ್ರಿಕ್​ ವೈಲೆಟ್​​, ಮೆಟಾಲಿಕ್​​ ಸೇಜ್​ ಬಣ್ಣದಲ್ಲಿ ಪರಿಚಯಿಸಿದೆ.

ಮೊಟೊರೊಲಾ ಪರಿಚಯಿಸಿರುವ Moto G9 Power ಸ್ಮಾರ್ಟ್​ಫೋನ್​ 11,999 ರೂ.ಗೆ ಮಾರಾಟ ಮಾಡುತ್ತಿದೆ.
Published by: Harshith AS
First published: December 8, 2020, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories