• Home
  • »
  • News
  • »
  • tech
  • »
  • Moto Edge 30 Neo: ಹೊಸ ಫೀಚರ್ಸ್​ನಲ್ಲಿ ಬಂದಿದೆ ಮೊಟೊ ಎಡ್ಜ್‌ 30 ನಿಯೋ, ಈ ಫೋನ್ ವಿಶೇಷತೆ ಇಲ್ಲಿದೆ

Moto Edge 30 Neo: ಹೊಸ ಫೀಚರ್ಸ್​ನಲ್ಲಿ ಬಂದಿದೆ ಮೊಟೊ ಎಡ್ಜ್‌ 30 ನಿಯೋ, ಈ ಫೋನ್ ವಿಶೇಷತೆ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Motorola Moto Edge 30 Neo: ಮೊಟೊರೋಲೊ ಪ್ರಸ್ತುತ ಪಡಿಸುತ್ತಿರುವ ಸ್ಮಾರ್ಟ್‌ಫೋನ್ ಮೊಟೊ ಎಡ್ಜ್‌ 30 ನಿಯೋ ವೆರಿ ಪೆರಿ, ಕಪ್ಪು ಓನಿಕ್ಸ್, ಐಸ್ ಪ್ಯಾಲೇಸ್, ಆಕ್ವಾ ಫೋಮ್‌ ಬಣ್ಣಗಳಲ್ಲಿ ಲಭ್ಯವಿದೆ.

  • Share this:

ಮೊಟೊರೊಲೊ (Motorola) ತನ್ನ ಸ್ಮಾರ್ಟ್‌ಫೋನ್ ಮೊಟೊ ಎಡ್ಜ್‌ 30 ನಿಯೋ (Moto Edge 30 Neo) ಅನ್ನು ಆದಷ್ಟು ಬೇಗ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ವೆರಿ ಪೆರಿ, ಬ್ಲ್ಯಾಕ್ ಓನಿಕ್ಸ್, ಐಸ್ ಪ್ಯಾಲೇಸ್ ಮತ್ತು ಆಕ್ವಾ ಫೋಮ್ ಎಂಬ ನಾಲ್ಕು ಬಣ್ಣದಲ್ಲಿ ಲಭ್ಯವಿರುವ ಮೊಟೊ ಎಡ್ಜ್‌ 30 ನಿಯೋ ಪ್ರಸ್ತುತ ಯುಕೆ ಮತ್ತು ಯುರೋಪ್‌ನಲ್ಲಿ ಲಭ್ಯವಿದೆ. ಸೆಪ್ಟೆಂಬರ್ 8ರಂದು ಹೊಸ ಎಡ್ಜ್ ಸರಣಿಯ ಸ್ಮಾರ್ಟ್‌ಫೋನ್ (Smart Phone) ಬಿಡುಗಡೆ ಕಾರ್ಯಕ್ರಮದ ಕುರಿತು ಕಂಪನಿ ಟ್ವೀಟ್ ಮಾಡಿತ್ತು, ಆದರೆ ನಂತರ ಆ ಟ್ವೀಟ್‌ ಅನ್ನು ಅಳಿಸಿ ಹಾಕಿತ್ತು. ಪ್ರಸ್ತುತ ಈ ಬಗ್ಗೆ ಮತ್ತೊಂದು ಬೆಳವಣಿಗೆ ಕಂಡು ಬಂದಿದ್ದು, ಸದ್ಯದಲ್ಲಿಯೇ ಭಾರತದಲ್ಲಿ ಮೊಟೊ ಎಡ್ಜ್‌ 30 ನಿಯೋ ಲಭ್ಯವಾಗಲಿದೆ.


ಎಡ್ಜ್ 30 ಫ್ಯೂಷನ್ ಮತ್ತು ಅಲ್ಟ್ರಾಗಿಂತ ಭಿನ್ನವಾಗಿ, ಎಡ್ಜ್ 30 ನಿಯೋ ಹಿಂಭಾಗವನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗಿದೆ. ಅಲ್ಲದೇ ಫೋನಿನ ಫ್ರೇಮ್‌ ಅನ್ನು ಸಹ ಪ್ಲಾಸ್ಟಿಕ್‌ನಿಂದಲೇ ಮಾಡಲಾಗಿದೆ. 152.9 x 71.2 x 7.75mm ಡೈಮೆನ್ಷಲ್ಲಿ ಬರುತ್ತಿರುವ ಫೋನ್‌ ಹಗುರವಾಗಿದೆ ಮತ್ತು ಹಿಡಿದಿಡಲು ಸುಲಭವಾಗಿದೆ,


P-OLED 6.28-ಇಂಚಿನ ಡಿಸ್ಪ್ಲೇ, 32MP ಕ್ಯಾಮೆರಾ ಹೊಂದಿರುವ 5G ಫೋನ್ ಪ್ರಸ್ತುತ ಸ್ಮಾರ್ಟ್‌ಫೋನ್‌ಗಳಲ್ಲಿನ ಒಂದು ಉತ್ತಮ ಖರೀದಿಯ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಹಾಗಾದರೆ ಮೊಟೊರೊಲ್‌ನ ʼಮೊಟೊ ಎಡ್ಜ್‌ 30 ನಿಯೋʼ ಫೋನ್‌ನ ವಿಶೇಷತೆಗಳೇನು ಅಂತಾ ಡಿಟೇಲ್‌ ಆಗಿ ತಿಳಿಯೋಣ.


ʼಮೊಟೊ ಎಡ್ಜ್‌ 30 ನಿಯೋʼ ವೈಶಿಷ್ಟ್ಯತೆಗಳು
ಡಿಸ್ಪ್ಲೇ ಹೇಗಿದೆ?
P-OLED, 120Hz ಡಿಸ್ಪ್ಲೇ ಹೊಂದಿರುವ ಮೊಟೊ ಎಡ್ಜ್‌ 30 ನಿಯೋ 6.28 ಇಂಚಿದೆ. 155 ಗ್ರಾಂ ತೂಕ ಹೊಂದಿರುವ ಹೊಸ ಫೋನ್ 1080*2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರವನ್ನು ಹೊಂದಿದೆ. ಓಎಸ್ ಆಂಡ್ರಾಯ್ಡ್ 12 ಅನ್ನು ಬೆಂಬಲಿಸಲಿದ್ದು, ಆಕ್ಟಾ-ಕೋರ್ ಪ್ರೊಸೆಸರ್ ಮತ್ತು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನೊಂದಿಗೆ ಬರುತ್ತದೆ.


ಇದನ್ನೂ ಓದಿ: ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಇನ್ನೊಬ್ಬರಿಗೆ ನೀಡಿದರೆ ದಂಡ ಗ್ಯಾರಂಟಿ! ಅಕೌಂಟ್‌ ಶೇರ್‌ ಮಾಡುವ ಮುನ್ನ ಇದನ್ನ ರೀಡ್ ಮಾಡಿ


ಮೆಮೊರಿ ಕಾರ್ಡ್
ಮೊಟೊ ಎಡ್ಜ್‌ 30 ನಿಯೋದಲ್ಲಿ 128GB ಸ್ಟೋರೆಜ್‌ ಕೂಡ ಲಭ್ಯವಿದ್ದು, ಒಟ್ಟಾರೆ ಇಂಟರ್‌ನಲ್‌ ಸ್ಟೋರೆಜ್‌ 128GB 6GB RAM, 128GB 8GB RAM, 256GB 8GB RAM ಹೊಂದಿದೆ.


ಕ್ಯಾಮೆರಾ
ಫೋನ್‌ನ ಕ್ಯಾಮೆರಾಗಳ ಬಗ್ಗೆ ನೋಡುವುದಾದರೆ, ಎಡ್ಜ್ 30 ನಿಯೋ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಮತ್ತು ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ. ಹಿಂಭಾಗದ ಜೋಡಿಯು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಪಿಕ್ಸೆಲ್ ಬಿನ್ನಿಂಗ್‌ನೊಂದಿಗೆ 64MP ಮುಖ್ಯ ಸ್ನ್ಯಾಪರ್ ಅನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ ಕೂಡ ಉತ್ತಮವಾಗಿದ್ದು, ಇದು 32MP ನೊಂದಿಗೆ ಬರುತ್ತದೆ. ಡ್ಯುಯಲ್-ಎಲ್ಇಡಿ ಫ್ಲ್ಯಾಷ್, HDR, ಪನೋರಮಾ ವೈಶಿಷ್ಟ್ಯಗಳು ಈ ಫೋನ್‌ನಲ್ಲಿ ಲಭ್ಯ ಇದೆ.


ಚಾರ್ಜಿಂಗ್‌, ಬ್ಯಾಟರಿ
ಇದು ಪರದೆಯ ಮೇಲೆ ಫಿಂಗರ್‌ಪ್ರಿಂಟ್ ಆಪ್ಟಿಕಲ್ ಸಂವೇದಕವನ್ನು ಹೊಂದಿದೆ, ಜೊತೆಗೆ ವೇಗವರ್ಧಕ, ಬೆಳಕಿನ ಸಂವೇದಕ ಮತ್ತು ದಿಕ್ಸೂಚಿಗಳನ್ನು ಹೊಂದಿದೆ. 68W ಕ್ಷಿಪ್ರ USB ಟೈಪ್ C ಚಾರ್ಜಿಂಗ್‌ನೊಂದಿಗೆ 4020mAh ತೆಗೆಯಲಾಗದ ಲಿಥಿಯಂ-ಪಾಲಿಮರ್‌ನ ಬ್ಯಾಟರಿಯಿಂದ ಚಾಲಿತವಾಗಿದೆ.


ಬಣ್ಣ
ಮೊಟೊರೋಲೊ ಪ್ರಸ್ತುತ ಪಡಿಸುತ್ತಿರುವ ಸ್ಮಾರ್ಟ್‌ಫೋನ್ ಮೊಟೊ ಎಡ್ಜ್‌ 30 ನಿಯೋ ವೆರಿ ಪೆರಿ, ಕಪ್ಪು ಓನಿಕ್ಸ್, ಐಸ್ ಪ್ಯಾಲೇಸ್, ಆಕ್ವಾ ಫೋಮ್‌ ಬಣ್ಣಗಳಲ್ಲಿ ಲಭ್ಯವಿದೆ.


ಇದನ್ನೂ ಓದಿ: ಒಂದೇ ಒಂದು ಸೆಕೆಂಡ್​ನಲ್ಲಿ ಇಡೀ ಪ್ರಪಂಚದ ಇಂಟರ್ನೆಟ್ ಟ್ರಾಫಿಕ್ ರವಾನಿಸುವ ಚಿಪ್ ಸಂಶೋಧನೆ


ಬೆಲೆ
ಮೊಟೊ ಎಡ್ಜ್‌ 30 ನಿಯೋ 4G, 5G ಮತ್ತು VoLTE ಸಂಪರ್ಕವನ್ನು ಬೆಂಬಲಿಸಲಿದ್ದು, ಬೆಲೆ ಬಗ್ಗೆ ನಿಖರ ಮಾಹಿತಿ ಇಲ್ಲ. ಅದಗ್ಯೂ ಫೋನ್ ‌ ರೂ.31,990 ರಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.

Published by:Sandhya M
First published: