HOME » NEWS » Tech » MOTOROLA MOTO E7 POWER LAUNCH TODAY EXPECTED PRICE SPECIFICATIONS AND MORE HG

Moto E7 Power: ಇಂದು ಮೊಟೊ E7 ಪವರ್​ ಮಾರುಕಟ್ಟೆಗೆ; ಬಜೆಟ್​ ಬೆಲೆಯ ಈ ಸ್ಮಾರ್ಟ್​ಫೋನಿನ ವಿಶೇಷತೆಗಳೇನು?

Motorola Moto E7 Power

news18-kannada
Updated:February 19, 2021, 3:22 PM IST
Moto E7 Power: ಇಂದು ಮೊಟೊ E7 ಪವರ್​ ಮಾರುಕಟ್ಟೆಗೆ; ಬಜೆಟ್​ ಬೆಲೆಯ ಈ ಸ್ಮಾರ್ಟ್​ಫೋನಿನ ವಿಶೇಷತೆಗಳೇನು?
Moto E7 Power
  • Share this:
ಮೊಟೊರೊಲಾ ಕಂಪೆನಿ ಮೊಟೊ E7 ಪವರ್​ ಹೆಸರಿನ ಬಜೆಟ್​ ಬೆಲೆಯ ಸ್ಮಾರ್ಟ್​ಫೋನನ್ನು ಇಂದು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಬಿಡುಗಡೆಗೊಳಿಸುತ್ತಿದೆ. 

ಮೊಟೊ E7 ಪವರ್​ ಸ್ಮಾರ್ಟ್​ಫೋನ್​ 6.5 ಹೆಚ್​ಡಿ+ಎಲ್​ಸಿಡಿ ಡಿಸ್​ಪ್ಲೇ ಹೊಂದಿದ್ದು, 4ಜಿಬಿ ರ್ಯಾಮ್ ಮತ್ತು 64ಜಿಬಿ ಇಂಟರ್​ನಲ್​ ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸುತ್ತಿದೆ.

ಅಂದಹಾಗೆಯೇ 13 ಮೆಗಾಫಿಕ್ಸೆಲ್​​ ಕ್ಯಾಮೆರಾ ಮತ್ತು ಎಲ್​ಇಡಿ ಫ್ಲಾಶ್​​ ನೀಡಲಾಗಿದೆ. ಅದರ ಜೊತೆಗೆ 2ಮೆಗಾಫಿಕ್ಸೆಲ್​​ ಸೆಕೆಂಡ್​​ ಸೆನ್ಸಾರ್​ ನೀಡಲಾಗಿದೆ. ಮುಂಭಾಗದಲ್ಲಿ 5 ಮೆಗಾಫಿಕ್ಸೆಲ್​ ಸೆನ್ಸಾರ್​ ನೀಡಲಾಗಿದೆ. ವಾಟರ್​​ಡ್ರಾಪ್​​ ಸೈಲ್​ನಲ್ಲಿ ಪರಿಚಯಿಸುತ್ತಿದೆ.

ಆ್ಯಂಡ್ರಾಯ್ಡ್​ 10ನಲ್ಲಿ ಕಾರ್ಯನಿರ್ವಹಿಸಲಿರುವ ಮೊಟೊ E7 ಪವರ್​ ಸ್ಮಾರ್ಟ್​ಫೋನ್ ಬಿಡುಗಡೆಗೊಂಡ ನಂತರ​ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ. ಗ್ರಾಹಕರಿಗಾಗಿ ನೀಲಿ, ಕೆಂಪು ಬಣ್ಣದಲ್ಲಿ ಪರಿಚಯಿಸಲಿದೆ.
 ಮೊಟೊ E7 ಪವರ್​ ಸ್ಮಾರ್ಟ್​ಫೋನನ್ನು 5 ಸಾವಿರ ಎನ್​ಎಹೆಚ್​ ಬ್ಯಾಟರಿ ಸಾಮರ್ಥ್ಯದಲ್ಲಿ ಪರಿಚಯಿಸುತ್ತಿದೆ. 10 ಸಾವಿರ ಬೆಲೆಗೆ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.


ಅಂದಹಾಗೆಯೇ ಮೊಟೊ E7 ಪವರ್​ ಬೆಲೆ 7499 ರೂ ಎಂದು ಅಂದಾಜಿಸಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್​ಕಾರ್ಟ್​ನಲ್ಲಿ ಪರಿಚಯಿಸುತ್ತಿದೆ. ಕೆಲವೇ ದಿನಗಳಲ್ಲಿ ಪ್ಲಿಪ್​ಕಾರ್ಟ್​ ಮೊಟೊ E7 ಪವರ್​ ಸ್ಮಾರ್ಟ್​ಫೋನನ್ನು ತನ್ನ ಮಳಿಗೆಯಲ್ಲಿ ಮಾರಾಟ ಮಾಡಲಿದೆ.

ಇನ್ನು ವೈ-ಫೈ ನೆಟ್​ವರ್ಕ್​ ಸಪೋರ್ಟ್​, 3.5ಎಮ್​ಎಮ್​ ಹೆಡ್​ಫೋನ್​ ಜಾಕ್​, ಯುಎಸ್​ಬಿ ಟೈಪ್​-ಸಿ ಫಿಚರ್ಸ್​ ಅನ್ನು ಅಳವಡಿಸಿಕೊಂಡಿದೆ

Published by: Harshith AS
First published: February 19, 2021, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories