ಅಗ್ಗದ ಬೆಲೆಗೆ ಬಿಡುಗಡೆಯಾಯ್ತು ‘ಮೊಟೊ E6S‘ ಸ್ಮಾರ್ಟ್​ಫೋನ್​; ಇದರ ಬೆಲೆಯೆಷ್ಟು ಗೊತ್ತಾ?

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ‘ಮೊಟೊ E6S‘ ಸ್ಮಾರ್ಟ್​ಫೋನ್​ 720x1560 ಪಿಕ್ಸೆಲ್​ ರೆಸಲ್ಯೂಷನ್​ ಸಾಮರ್ಥ್ಯದೊಂದಿಗೆ 6.1 HD+​ ಡಿಸ್​ಪ್ಲೇ ಹೊಂದಿದೆ

news18-kannada
Updated:September 16, 2019, 9:40 PM IST
ಅಗ್ಗದ ಬೆಲೆಗೆ ಬಿಡುಗಡೆಯಾಯ್ತು ‘ಮೊಟೊ E6S‘ ಸ್ಮಾರ್ಟ್​ಫೋನ್​; ಇದರ ಬೆಲೆಯೆಷ್ಟು ಗೊತ್ತಾ?
‘ಮೊಟೊ E6S‘
  • Share this:
ಮೊಟೊರೊಲಾ ಕಂಪೆನಿ ನೂತನವಾಗಿ ತಯಾರಿಸಿದ ‘ಮೊಟೊ E6S‘​ ಸ್ಮಾರ್ಟ್​ಫೋನ್​ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​ಫೋನ್​ ಹೊಸ ಫೀಚರ್​ ಅನ್ನು ಒಳಗೊಂಡಿದ್ದು, ಈಗಾಗಲೇ ಬೇಡಿಕೆ ಸೃಷ್ಠಿಸಿದೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ‘ಮೊಟೊ E6S‘ ಸ್ಮಾರ್ಟ್​ಫೋನ್​ 720x1560 ಪಿಕ್ಸೆಲ್​ ರೆಸಲ್ಯೂಷನ್​ ಸಾಮರ್ಥ್ಯದೊಂದಿಗೆ 6.1 HD+​ ಡಿಸ್​ಪ್ಲೇ ಹೊಂದಿದೆ. ಜೊತೆಗೆ ಡಿಸ್​ಪ್ಲೇಯು ವಾಟರ್​ಡ್ರಾಪ್​ ನಾಚ್​ ಮಾದರಿಯಲ್ಲಿದೆ.

ಪ್ರೊಸೆಸರ್​:

‘ಮೊಟೊ E6S‘ ಸ್ಮಾರ್ಟ್​ಫೋನ್​ ಆಕ್ಟಾ ಕೋರ್​ ಮಿಡಿಯಾ ಟೆಕ್​ P22 ಪ್ರೊಸೆಸರ್​ ಹೊಂದಿದ್ದು, ಆಂಡ್ರಾಯ್ಡ್​ 9 ಪೈ ಆಪರೇಟಿಂಗ್​ ಸಿಸ್ಟಂ ಸಪೋರ್ಟ್​​ ಪಡೆದುಕೊಂಡಿದೆ. ಅಂತೆಯೇ, ಈ ಸ್ಮಾರ್ಟ್​ಫೋನ್​ 4GB RAM ಮತ್ತು 64GB ಸ್ಟೊರೇಜ್​ ಆಯ್ಕೆಯನ್ನು ಒಳಗೊಂಡಿದೆ. ಎಸ್​ಡಿ ಕಾರ್ಡ್​​ ಮೂಲಕ ಮೆಮೊರಿಯನ್ನು 512GB ವರೆಗೂ ವಿಸ್ತರಿಸಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ.

ಕ್ಯಾಮೆರಾ:

‘ಮೊಟೊ E6S‘ ಸ್ಮಾರ್ಟ್​ಫೋನ್​ನಲ್ಲಿರುವ ಹಿಂಭಾಗದ ಡ್ಯುಯೆಲ್​ ರಿಯರ್​ ಕ್ಯಾಮೆರಾವನ್ನು ನೀಡಲಾಗಿದೆ.  ಎಫ್​/2.0 ಅಪಾರ್ಚರ್​ ಹೊಂದಿರುವ 13 ಮೆಗಾಫಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ನೀಡಲಾಗಿದೆ. ಸೆಕಂಡರಿ ಕ್ಯಾಮೆರಾ 2 ಮೆಗಾಫಿಕ್ಸೆಲ್ ಡೆಪ್ತ್​ ಸೆನ್ಸಾರ್​ ಹೊಂದಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​​ ಕ್ಯಾಮೆರಾವನ್ನು ನೀಡಲಾಗಿದೆ. ಅಟೋ ಫೋಕಸ್​ ಆಯ್ಕೆಯು ಇದರಲ್ಲಿದೆ.

ಬ್ಯಾಟರಿ:ನೂತನ ‘ಮೊಟೊ E6S‘ ಸ್ಮಾರ್ಟ್​ಫೋನ್​ನಲ್ಲಿ 3,000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಂತೆಯೇ, ಈ ಫೋನ್​ನಲ್ಲಿ ರೇರ್​ ಮೌಟೆಂಡ್​ ಫಿಂಗರ್​ ಪ್ರಿಂಟ್​​​ ಸೆನ್ಸಾರ್​​ ಆಯ್ಕೆ, ಆಂಬಿಯಂಟ್​ ಲೈಟ್​ ಸೆನ್ಸಾರ್​, ಪ್ರೊಕ್ಸಿವಿಟಿ ಸೆನ್ಸಾರ್​ ನೀಡಲಾಗಿದೆ. ಜೊತೆಗೆ ವೈಫೈ, ಬ್ಲೂಟೂತ್​ ಸೇರಿದಂತೆ ಜಿಪಿಎಸ್​ ಆಯ್ಕೆಯನ್ನು ಹೊಂದಿದೆ.

ಬೆಲೆ:

ಗ್ರಾಹಕರಿಗಾಗಿ ಮೋಟೋ ‘ಮೊಟೊ E6S‘ ಸ್ಮಾರ್ಟ್​ಫೋನ್​ 7,999 ರೂ.ಗೆ ಮಾರಾಟ ಮಾಡುತ್ತಿದೆ. ಸೆ.23ರ ಫ್ಲಿಪ್​ಕಾರ್ಟ್​ ಫಸ್ಟ್​ ಸೇಲ್​ನಲ್ಲಿ ಮಾರಾಟ ನಡೆಸಲಿದೆ.
First published:September 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading