HOME » NEWS » Tech » MOTOROLA LAUNCHED MOTO G9 WITH TRIPLE REAR CAMERAS SNAPDRAGON 662 SOC IN INDIA HG

Moto G9: ತ್ರಿವಳಿ ಕ್ಯಾಮೆರಾವಿರುವ ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​ ಪರಿಚಯಿಸಿದ ಮೊಟೊರೊಲಾ!

Moto G9: ಮೊಟೊರೊಲಾ ಈ ಮೊದಲು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್​ಫೋನ್​ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ ಮೊಟೊ ಜಿ9 ಸಿರೀಸ್​ ಸ್ಮಾರ್ಟ್​ಫೋನ್, ಅಥವಾ ಜಿ9 ಪ್ಲಸ್​ ಸ್ಮಾರ್ಟ್​ಫೊನ್​ ಬಿಡುಗಡೆ ಮಾಡಲಿದೆಯೋ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು. ಕೊನೆಗೆ ಮೊಟೊ ಜಿ9 ಸ್ಮಾಟ್​ಫೋನ್​ ಅನ್ನು ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್​ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ..

news18-kannada
Updated:August 24, 2020, 3:20 PM IST
Moto G9: ತ್ರಿವಳಿ ಕ್ಯಾಮೆರಾವಿರುವ ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​ ಪರಿಚಯಿಸಿದ ಮೊಟೊರೊಲಾ!
Moto G9
  • Share this:
Moto G9 ಸ್ಮಾರ್ಟ್​ಫೋನ್​ ಉತ್ಪಾದನ ಸಂಸ್ಥೆಯಾದ ಮೊಟೊರೊಲಾ ನೂತನ ಮೊಟೊ ಜಿ9 ಸ್ಮಾರ್ಟ್​ಫೋನ್​ ಅನ್ನು ಇಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಜೆಟ್​ ಬೆಲೆ ಈ ಸ್ಮಾಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಗ್ರಾಹಕರನ್ನು ಆಕರ್ಷಿಸಿದೆ. ಮೊಟೊರೊಲಾ ಈ ಮೊದಲು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್​ಫೋನ್​ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಹಾಗಾಗಿ ಮೊಟೊ ಜಿ9 ಸಿರೀಸ್​ ಸ್ಮಾರ್ಟ್​ಫೋನ್, ಅಥವಾ ಜಿ9 ಪ್ಲಸ್​ ಸ್ಮಾರ್ಟ್​ಫೊನ್​ ಬಿಡುಗಡೆ ಮಾಡಲಿದೆಯೋ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು. ಕೊನೆಗೆ ಮೊಟೊ ಜಿ9 ಸ್ಮಾಟ್​ಫೋನ್​ ಅನ್ನು ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್​ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ..

ಮೊಟೊ ಜಿ9:

ಮೊಟೊರೊಲಾ ಸಂಸ್ಥೆ ಅಭಿವೃದ್ಧಿ ಪಡಿಸಿ ಬಿಡುಗಡೆ ಮಾಡಿದ ಮೊಟೊ ಜಿ9 ಸ್ಮಾರ್ಟ್​ಫೋನ್​​​ 6.5 ಇಂಚಿನ ಹೆಚ್​ಡಿ+ಮ್ಯಾಕ್ಸ್​​ ವಿನ್​ ಟಿಎಫ್​ಟಿ ಡಿಸ್​ಪ್ಲೇ ಹೊಂದಿದೆ. ಒಕ್ಟಾಕೋರ್​​ ಕ್ವಾಲ್​​ಕ್ಯಾಂ ಸ್ನಾಪ್​ಡ್ರ್ಯಾಗನ್​​ 662 ಪ್ರೊಸೆಸರ್​ನಲ್ಲಿ ಕಾರ್ಯನಿರ್ವಹಿಸುತ್ತದೆ. 4ಜಿಬಿ ರ್ಯಾಮ್​ ಮತ್ತು 64ಜಿಬಿ ಸ್ಟೊರೇಜ್​ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ

ಕ್ಯಾಮೆರಾ:

ತ್ರಿವಳಿ ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ. 48ಮೆಗಾಫಿಕ್ಸೆಲ್​ ಪ್ರೈಮರಿ ಕ್ಯಾಮೆರಾ ಜೊತೆಗೆ 1.7 ಲೆನ್ಸ್​​. 2 ಮೆಗಾಫಿಕ್ಸೆಲ್ ಡೆಪ್ತ್​​ ಸೆನ್ಸಾರ್​​​ ಮತ್ತು 2.4 ಲೆನ್ಸ್​​, 2ಮೆಗಾಫಿಕ್ಸೆಲ್​​​ ಸೆನ್ಸಾರ್​​ ಜೊತೆಗೆ 2.4 ಮ್ಯಾಕ್ರೊ ಲೆನ್ಸ್​​​. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​​​ ಕ್ಯಾಮೆರಾ ಸೆನ್ಸಾರ್​​​ ನೀಡಲಾಗಿದೆ. ಇದರ ಜೊತೆಗೆ ಹೆಚ್​ಡಿಆರ್​, ಫೇಸ್​ಬ್ಯೂಟಿ, ಮ್ಯಾನುವೆಲ್​ ಮೋಡ್​ ಮುಂತಾದ ಫೀಚರ್​ ಅನ್ನು ನೀಡಲಾಗಿದೆ.

ಮೊಟೊ ಜಿ9 ಸ್ಮಾರ್ಟ್​ಫೋನ್​​ ಬ್ಲೂಟೂತ್​, ಜಿಪಿಎಸ್​, ಎಫ್​ಎಮ್​​ ರೇಡಿಯೋ , ಆ್ಯಂಬಿಯಂಟ್​​​​ ಲೈಟ್​​, ಫೀಚರ್​ ಇದರಲ್ಲಿದೆ. 5 ಸಾವಿರ ಎಮ್​ಎಹೆಚ್​ ಬ್ಯಾಟರಿಯನ್ನು ಈ ಸ್ಮಾರ್ಟ್​ನಲ್ಲಿ ನೀಡಲಾಗಿದೆ.
ಬೆಲೆ: ಮೊಟೊ ಜಿ9  ಸ್ಮಾರ್ಟ್​ಫೋನ್​ ಅನ್ನು ನೀಲಿ ಮತ್ತು ಹಸಿರು ಬಣ್ಣದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಇದರ ಬೆಲೆ 11,499 ರೂ ಆಗಿದ್ದು, ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಮಾಡುತ್ತಿದೆ.
Published by: Harshith AS
First published: August 24, 2020, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories