HOME » NEWS » Tech » MOTOROLA LAUNCHED MOTO G 5G IN INDIA HG

ದೇಶಿಯ ಮಾರುಕಟ್ಟೆಗೆ ಮೊಟೊರೊಲಾ G 5G​; ತ್ರಿವಳಿ ಕ್ಯಾಮೆರಾವಿರುವ ಈ ಸ್ಮಾರ್ಟ್​ಫೋನ್ ಬೆಲೆ ಎಷ್ಟು?

ಮೊಟೊರೊಲಾ G 5G ಸ್ಮಾರ್ಟ್​ಫೋನ್​ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್​ ಸೆಕೆಂಡರಿ ಕ್ಯಾಮೆರಾ ಜೊತೆಗೆ ವೈಡ್​ ಆ್ಯಂಗಲ್​ ಶೂಟರ್​, 2 ಮೆಗಾಫಿಕ್ಸೆಲ್​​ ಮ್ಯಾಕ್ರೊ ಕ್ಯಾಮೆರಾ ಅಳವಡಿಸಲಾಗಿದೆ.

news18-kannada
Updated:November 30, 2020, 6:14 PM IST
ದೇಶಿಯ ಮಾರುಕಟ್ಟೆಗೆ ಮೊಟೊರೊಲಾ G 5G​; ತ್ರಿವಳಿ ಕ್ಯಾಮೆರಾವಿರುವ ಈ ಸ್ಮಾರ್ಟ್​ಫೋನ್ ಬೆಲೆ ಎಷ್ಟು?
Moto G 5G
  • Share this:
ಮೊಟೊರೊಲಾ G 5G ಹೆಸರಿನ ಸ್ಮಾರ್ಟ್ಫೋನನ್ನು ಯುರೋಪ್ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಇದೀಗ ಭಾರತೀಯ ಮಾರುಕಟ್ಟೆಗೂ ಪರಿಚಯಿಸುವುದಾಗಿ ತಿಳಿಸಿದೆ. ಮೊಟೊ G 5G ಸ್ಮಾರ್ಟ್ಫೋನ್ ಕ್ವಾಲ್ಕ್ಯಾಂ ಸ್ನಾಪ್ಡ್ರಾಗನ್ 750G ಚಿಪ್ಸೆಟ್ ಅಳವಡಿಸಿಕೊಂಡಿದ್ದು, 5 ಸಾವಿರ mAh ಬ್ಯಾಟರಿಯನ್ನು ಹೊಂದಿದೆ. ತ್ರಿವಳಿ ಕ್ಯಾಮೆರಾವಿರುವ ನೂತನ ಸ್ಮಾರ್ಟ್ಫೋನ್ ಬೆಲೆಗೆ ತಕ್ಕಂತೆ ಫೀಚರ್ ನೀಡಲಾಗಿದೆ. ಹಾಗಾದರೆ ಮೊಟೊರೊಲಾ G 5G ಏನೆಲ್ಲಾ ಫೀಚರ್ ಒಳಗೊಂಡಿದೆ? ಅದರ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ.

ಮೊಟೊರೊಲಾ G 5G ಸ್ಮಾರ್ಟ್ಫೊನ್ 6.7 ಇಂಚಿನ ಫುಲ್ಹೆಚ್ಡಿ+ ಡಿಸ್ಪ್ಲೇ ಜೊತೆಗೆ 394ಪಿಪಿಐ ಪಿಕ್ಸೆಲ್ ಡೆನ್ಸಿಟಿ ಹೊಂದಿದ್ದು, ಕ್ವಾಲ್ಕ್ಯಾಂ ಸ್ನಾಪ್ಡ್ರಾಗನ್ 750ಜಿ ಚಿಪ್ಸೆಟ್ ಅಳವಡಿಸಲಾಗಿದೆ. 4GB RAM ಮತ್ತು 64GB ಸ್ಟೊರೇಜ್ ಆಯ್ಕೆಯಲ್ಲಿ ಪರಿಚಯಿಸಿದೆ. ಇನ್ನು 1TB ತನಕ ಮೆಮೊರಿಯನ್ನು ವೃದ್ಧಿಸುವ ಆಯ್ಕೆಯನ್ನು ಇದರಲ್ಲಿ ನೀಡಿದೆ.

ಕ್ಯಾಮೆರಾ:
ಮೊಟೊರೊಲಾ G 5G ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್ ಕ್ಯಾಮೆರಾ, 8 ಮೆಗಾಫಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಜೊತೆಗೆ ವೈಡ್ ಆ್ಯಂಗಲ್ ಶೂಟರ್, 2 ಮೆಗಾಫಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
ಇನ್ನು 5 ಸಾವಿರ mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್ಫೋನ್ 20 ವ್ಯಾಟ್ ಚಾರ್ಜಿಂಗ್ ಸಪೋರ್ಟ್ ಇದರಲ್ಲಿ ನೀಡಲಾಗಿದೆ. 5G, ಎನ್ಎಫ್ಸಿ, ಬ್ಲೂಟೂತ್ 5.1, ವೈ-ಫೈ, ಯುಎಸ್​ಬಿ ಟೈಪ್ ಸಿ ಪೊರ್ಟ್, ಜಿಪಿಎಸ್ ಆಯ್ಕೆ ಇದರಲ್ಲಿದೆ.

ಭಾರತೀಯರಿಗಾಗಿ ಈ ಸ್ಮಾರ್ಟ್ಫೊನ್ 20,999 ರೂ.ಗೆ ಸಿಗಲಿದೆ. ಆದರೆ ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಿದರೆ 1 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಡಿಸೆಂಬರ್ 7 ರಿಂದ ಆನ್ಲೈನ್ ಮಳಿಗೆಯಾದ ಫ್ಲಿಪ್​ಕಾರ್ಟ್​ನಲ್ಲಿ ಮಾರಾಟ ಮಾಡುತ್ತಿದೆ.
Published by: Harshith AS
First published: November 30, 2020, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories