Motorola Edge 30: ಭಾರತದಲ್ಲಿ ಲಾಂಚ್ ಆದ ಮೋಟೊರೋಲ ಎಡ್ಜ್ 30 ಅಲ್ಟ್ರಾ, ಎಡ್ಜ್ 30 ಫ್ಯೂಷನ್! ಬೆಲೆ ಎಷ್ಟು?

ಎಡ್ಜ್ 30 ಅಲ್ಟ್ರಾ ಪ್ರೀಮಿಯಂ ಖರೀದಿದಾರರನ್ನು ಗುರಿಯಾಗಿರಿಸಿಕೊಂಡಿದ್ದು ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 888+ SoC, 144Hz ಓಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಡಿವೈಸ್ ಬೆಲೆ ಅಂತೆಯೇ ಇನ್ನಿತರ ವಿಶೇಷತೆಗಳನ್ನು ತಿಳಿದುಕೊಳ್ಳೋಣ

ಮೋಟೋರೋಲಾ ಎಡ್ಜ್ 30 ಅಲ್ಟ್ರಾ ಮತ್ತು ಮೋಟೋರೋಲಾ ಎಡ್ಜ್ 30 ಫ್ಯೂಷನ್

ಮೋಟೋರೋಲಾ ಎಡ್ಜ್ 30 ಅಲ್ಟ್ರಾ ಮತ್ತು ಮೋಟೋರೋಲಾ ಎಡ್ಜ್ 30 ಫ್ಯೂಷನ್

  • Share this:
ಎಡ್ಜ್ 30 ಅಲ್ಟ್ರಾ (Edge 30 Ultra) ಮತ್ತು ಎಡ್ಜ್ 30 ಫ್ಯೂಶನ್ (Edge 30 Fusion) ಅನ್ನು ಮೋಟೊರೋಲ ಭಾರತದಲ್ಲಿ ಇಂದು ಬಿಡುಗಡೆ ಮಾಡಲಿದೆ. ಸ್ಮಾರ್ಟ್‌ಫೋನ್ ಬಿಡುಗಡೆಯ ಉತ್ಸಾಹದಲ್ಲಿರುವ ಲೆನೊವೊ ಒಡೆತನದ ಸಂಸ್ಥೆಯು ಎರಡು ಶಕ್ತಿಶಾಲಿ ಉತ್ಪನ್ನಗಳೊಂದಿಗೆ ಎಡ್ಜ್ ಸರಣಿಯನ್ನು ವಿಸ್ತರಿಸಲು ಸಿದ್ಧವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಭಾರತದಲ್ಲಿ (India) ಪರಿಚಯಿಸಲಾದ ಮೋಟೋ ಎಡ್ಜ್ 30 ಪ್ರೊ ಸೇರಿದಂತೆ ಈ ಸ್ಮಾರ್ಟ್‌ಫೋನ್‌ಗಳು (Smart Phone) ಸಂಸ್ಥೆಯ ಪೋರ್ಟ್‌ಫೋಲಿಯೊದಲ್ಲಿ ಇತರ ಉತ್ಪನ್ನಗಳೊಂದಿಗೆ ಸೇರ್ಪಡೆಗೊಳ್ಳಲಿದೆ. ಎಡ್ಜ್ 30 ಅಲ್ಟ್ರಾ ಮತ್ತು ಎಡ್ಜ್ 30 ಅಲ್ಟ್ರಾ ಪ್ರೀಮಿಯಂ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Big Billion Days Sale) ಭಾರಿ ರಿಯಾಯಿತಿಯೊಂದಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.

ಎಡ್ಜ್ 30 ಅಲ್ಟ್ರಾ
ಎಡ್ಜ್ 30 ಅಲ್ಟ್ರಾ ಅತ್ಯಂತ ವಿಶೇಷ ಫೀಚರ್‌ಗಳನ್ನು ಒಳಗೊಂಡಿದ್ದು 200 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್ ಅನ್ನು ಹೊಂದಿದ್ದು, 6.7 ಇಂಚಿನ ಕರ್ವ್ ಆದ ಡಿಸ್‌ಪ್ಲೇಯನ್ನು ಹೊಂದಿದೆ ಹಾಗೂ 144Hz ರಿಫ್ರೆಶ್ ರೇಟ್‌ಗೆ ಬೆಂಬಲವನ್ನು ನೀಡಿದೆ. ಎಡ್ಜ್ 30 ಅಲ್ಟ್ರಾ ಪ್ರೀಮಿಯಂ ಖರೀದಿದಾರರನ್ನು ಗುರಿಯಾಗಿರಿಸಿಕೊಂಡಿದ್ದು ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 888+ SoC, 144Hz ಓಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಡಿವೈಸ್ ಬೆಲೆ ಅಂತೆಯೇ ಇನ್ನಿತರ ವಿಶೇಷತೆಗಳನ್ನು ತಿಳಿದುಕೊಳ್ಳೋಣ

ಮೋಟೊರೋಲ ಎಡ್ಜ್ 30 ಅಲ್ಟ್ರಾ ಹಾಗೂ 30 ಫ್ಯೂಶನ್: ಬೆಲೆ
ಎಡ್ಜ್ 30 ಅಲ್ಟ್ರಾ ಹಾಗೂ 30 ಫ್ಯೂಶನ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಅಧಿಕೃತಗೊಳಿಸಲಾಗಿದೆ. ಎಡ್ಜ್ 30 ಫ್ಯೂಶನ್ ಬೆಲೆ €600 (ಸುಮಾರು ರೂ 47,850) ಗೆ ಬಿಡುಗಡೆಯಾಗಿದ್ದು ಎಡ್ಜ್ 30 ಅಲ್ಟ್ರಾ ಬೆಲೆ ಯುರೋಪಿಯನ್ ಮಾರುಕಟ್ಟೆಯಲ್ಲಿ €899.99 (ಸುಮಾರು ರೂ 72,900) ಗೆ ಬಿಡುಗಡೆಗೊಂಡಿದೆ.

ಇದನ್ನೂ ಓದಿ: OnePlus 10T 5G: ರಿಯಾಯಿತಿ ಬೆಲೆಗೆ ಖರೀದಿಸಲು ಇದೇ ಸರಿಯಾದ ಸಮಯ!

ಎಡ್ಜ್ 30 ಫ್ಯೂಷನ್ ಅನ್ನು ಕಾಸ್ಮಿಕ್ ಗ್ರೇ, ಅರೋರಾ ವೈಟ್, ಸೋಲಾರ್ ಗೋಲ್ಡ್ ಮತ್ತು ನೆಪ್ಚೂನ್ ಬ್ಲೂ ಬಣ್ಣಗಳಲ್ಲಿ ದೊರೆಯುತ್ತಿದ್ದು, ಎಡ್ಜ್ 30 ಅಲ್ಟ್ರಾ, ಸ್ಟಾರ್‌ಲೈಟ್ ವೈಟ್ ಮತ್ತು ಇಂಟರ್ ಸ್ಟೆಲ್ಲರ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು EMI ಗಳನ್ನು ಒಳಗೊಂಡಂತೆ ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಇತರ ಆಫರ್‌ಗಳನ್ನು ಬಳಸುವಾಗ ನೀವು 10% ಹೆಚ್ಚುವರಿ ರಿಯಾಯಿತಿಯನ್ನು ಪಡೆಯುತ್ತೀರಿ.

ಮೋಟೊರೋಲ ಎಡ್ಜ್ 30 ಅಲ್ಟ್ರಾ ಹಾಗೂ 30 ಫ್ಯೂಶನ್: ಫೀಚರ್
ಎಡ್ಜ್ 30 ಅಲ್ಟ್ರಾ 6.67 ಇಂಚಿನ ಪೂರ್ಣ ಎಚ್‌ಡಿ ಓಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು 144Hz ದರವನ್ನು ಬೆಂಬಲಿಸುತ್ತದೆ ಅಂತೆಯೇ ಡಿವೈಸ್ ಕಾರ್ನಿಂಗ್ ಗೊರಿಲ್ಲಾ 5 ಅನ್ನು ಬಳಸುತ್ತದೆ. ಸಾಧನವು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 8+ Gen 1 ಚಿಪ್‌ನಿಂದ ಚಾಲಿತವಾಗಿದ್ದು, 12GB LPDDR5 ರ‍್ಯಾಮ್ ಮತ್ತು 256GB UFS 3.1 ಸಂಗ್ರಹಣೆಯನ್ನು ಹೊಂದಿದೆ. ಆ್ಯಂಡ್ರಾಯ್ಡ್ 12 ಡಿವೈಸ್ ಅನ್ನು ಚಾಲನೆ ಮಾಡುತ್ತದೆ.

ಮೋಟೋ ಎಡ್ಜ್ 30 ಫ್ಯೂಶನ್ 6.55 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 888+ SoC ಮೂಲಕ 12GB ವರೆಗೆ LPDDR5 RAM ಅನ್ನು ಒಳಗೊಂಡಿದೆ. ಕ್ಯಾಮೆರಾ-ವೈಸ್, ಎಡ್ಜ್ 30 ಫ್ಯೂಷನ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್‌ನೊಂದಿಗೆ ಬರುತ್ತದೆ. ಮುಂಭಾಗದಲ್ಲಿ, 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಎಡ್ಜ್ 30 ಅಲ್ಟ್ರಾ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಸಹ ಒಳಗೊಂಡಿದೆ. ಇದು 200-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್, 50-ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 12-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ, 60-ಮೆಗಾಪಿಕ್ಸೆಲ್ ಮುಂಭಾ ಕ್ಯಾಮೆರಾ ಹೊಂದಿದೆ.

ಇದನ್ನೂ ಓದಿ:  Redmi 11 Prime 5G: ಗ್ರಾಹಕರ ಮನಕದ್ದ ರೆಡ್​ಮಿ 11 ಪ್ರೈಮ್​ 5G ಫೋನ್​! ಇದರ ಬೆಲೆ ಎಷ್ಟು?

ಫ್ಲಿಪ್‌ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ರಿಯಾಯಿತಿಯನ್ನು ನೀಡುತ್ತಿದೆ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ 10% ರಿಯಾಯಿತಿಯೊಂದಿಗೆ ನೀವು ಬಿಗ್ ಬಿಲಿಯನ್ ಡೇಸ್ ಸೇಲ್‌ನ ಕ್ಯಾಶ್‌ಬ್ಯಾಕ್ ಕೂಪನ್ ಅನ್ನು ಸಹ ಗೆಲ್ಲಬಹುದು.
Published by:Ashwini Prabhu
First published: