• Home
  • »
  • News
  • »
  • tech
  • »
  • Jio 5G: 5ಜಿ ಗಾಗಿ ಜಿಯೋ ಜೊತೆ ಪಾಲುದಾರಿಕೆ ಮಾಡಿಕೊಂಡ ಮೊಟೊರೊಲಾ ಕಂಪನಿ!

Jio 5G: 5ಜಿ ಗಾಗಿ ಜಿಯೋ ಜೊತೆ ಪಾಲುದಾರಿಕೆ ಮಾಡಿಕೊಂಡ ಮೊಟೊರೊಲಾ ಕಂಪನಿ!

ಜಿಯೋ ಮತ್ತು ಮೊಟೊರೊಲಾ ಸ್ಮಾರ್ಟ್​ಫೋನ್

ಜಿಯೋ ಮತ್ತು ಮೊಟೊರೊಲಾ ಸ್ಮಾರ್ಟ್​ಫೋನ್

ಜಿಯೋ ಇದೀಗ 5ಜಿ ನೆಟ್​ವರ್ಕ್​ ಸೇವೆ ನೀಡುವುದರಲ್ಲಿ ಭಾರೀ ಮುಂಚೂಣಿಯಲ್ಲಿದೆ. ಇದೀಗ ಜಿಯೋ ಟ್ರೂ 5ಜಿ ಸೇವೆಯನ್ನು  ಪಡೆಯುವ ನಿಟ್ಟಿನಲ್ಲಿ ಮೊಟೊರೊಲಾ ಕಂಪನಿ ತನ್ನ ಬ್ರಾಂಡ್​ಗಳಲ್ಲಿ 5ಜಿ ಸೇವೆ ಸಪೋರ್ಟ್​ ಆಗಲು ಜಿಯೋ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಜಿಯೋ ಬಳಕೆದಾರರು ಮೊಟೊ ಕಂಪನಿಯ ಯಾವುದೇ ಸ್ಮಾರ್ಟ್​ಫೋನ್​ಗಳಲ್ಲಿ 5ಜಿ ಸೇವೆಯನ್ನು ಪಡೆಯಬಹುದು.

ಮುಂದೆ ಓದಿ ...
  • Share this:

    ದೇಶದೆಲ್ಲೆಡೆ ಈಗ ಬಹಳಷ್ಟು ಪ್ರಸಿದ್ಧಿಯಲ್ಲಿರುವ ಸುದ್ದಿಯೆಂದರೆ ಅದು 5ಜಿ ನೆಟ್​ವರ್ಕ್ (5G Network)​ ಸೇವೆ. ಹಾಗೇ ಈ ಟೆಲಿಕಾಂ ಕಂಪನಿಗಳು (Telecom Companys) ಕೂಡ 5ಜಿ ನೆಟ್​ವರ್ಕ್​ ಸೇವೆ ನೀಡುವ ಸಲುವಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿದೆ. ಈಗಾಗಲೇ ಜಿಯೋ ಹಾಗೂ ಏರ್​​​ಟೆಲ್​ ಕಂಪನಿಗಳು ದೇಶದ ಕೆಲವು ಭಾಗಗಳಲ್ಲಿ ತನ್ನ 5ಜಿ ನೆಟ್​​ವರ್ಕ್​ ಅನ್ನು ವಿಸ್ತರಿಸಿದೆ. ಅದೇ ರೀತಿ ಏರ್​ಟೆಲ್​ (Airtel) 2023ರ ಮಾರ್ಚ್​ ಒಳಗಡೆ ದೇಶದಾದ್ಯಂತ 5ಜಿ ನೆಟ್​​ವರ್ಕ್​ ಸೇವೆಯನ್ನು ವಿಸ್ತರಿಸುವುದಾಗಿ ಭರವಸೆಯನ್ನು ನೀಡಿದೆ. ಜೊತೆಗೆ ಜಿಯೋ (Jio) ಕೂಡ 2023ರ ಡಿಸೆಂಬರ್ ಒಳಗಡೆ ದೇಶದ ಮೂಲೆ ಮೂಲೆಗಳಲ್ಲೂ 5ಜಿ ಸೇವೆಯನ್ನು ವಿಸ್ತರಿಸುವುದಾಗಿ ಭರವಸೆ ನೀಡಿದೆ. ಇದೀಗ ಕೆಲವೊಂದು ಸ್ಮಾರ್ಟ್​​ಫೋನ್​ ಕಂಪನಿಗಳು ಕೂಡ ತಮ್ಮ ಬ್ರಾಂಡ್​ಗಳಲ್ಲಿ 5ಜಿ ಸಪೋರ್ಟ್​​ ಆಗಲು ಪ್ರಮುಖ ಟೆಲಿಕಾಂ ಕಂಪನಿಗಳು ಜೊತೆ ಪಾಲುದಾರಿಕೆಯನ್ನೂ ಮಾಡುತ್ತಿದೆ,


    ಜಿಯೋ ಇದೀಗ 5ಜಿ ನೆಟ್​ವರ್ಕ್​ ಸೇವೆ ನೀಡುವುದರಲ್ಲಿ ಭಾರೀ ಮುಂಚೂಣಿಯಲ್ಲಿದೆ. ಇದೀಗ ಜಿಯೋ ಟ್ರೂ 5ಜಿ ಸೇವೆಯನ್ನು  ಪಡೆಯುವ ನಿಟ್ಟಿನಲ್ಲಿ ಮೊಟೊರೊಲಾ ಕಂಪನಿ ತನ್ನ ಬ್ರಾಂಡ್​ಗಳಲ್ಲಿ 5ಜಿ ಸೇವೆ ಸಪೋರ್ಟ್​ ಆಗಲು ಜಿಯೋ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಜಿಯೋ ಬಳಕೆದಾರರು ಮೊಟೊ ಕಂಪನಿಯ ಯಾವುದೇ ಸ್ಮಾರ್ಟ್​ಫೋನ್​ಗಳಲ್ಲಿ 5ಜಿ ಸೇವೆಯನ್ನು ಪಡೆಯಬಹುದು.


    ಮೊಟೊ ಸ್ಮಾರ್ಟ್​ಫೋನ್​ಗಳಲ್ಲಿ 5ಜಿ ಸೇವೆ


    ಮೊಟೊರೊಲಾ ಸಾಧನಗಳನ್ನು ಬಳಸುವ ಎಲ್ಲ ಜಿಯೋ ಬಳಕೆದಾರರು ಜಿಯೋ ಟ್ರೂ 5ಜಿ ಹೊಂದಿರುವ ಅಥವಾ ಈ ಸೇವೆಯನ್ನು ಬಿಡುಗಡೆ ಮಾಡುತ್ತಿರುವ ಪ್ರದೇಶಗಳಲ್ಲಿ ಜಿಯೋ ವೆಲ್‌ಕಮ್ ಆಫರ್ ಅಡಿಯಲ್ಲಿ ಟ್ರೂ ಅನ್ಲಿಮಿಟೆಡ್​​ 5ಜಿ ಇಂಟರ್‌ನೆಟ್ ಅನ್ನು ಸುಲಭವಾಗಿ ಬಳಸಲು ಸಾಧ್ಯವಾಗುತ್ತದೆ.


    ಇದನ್ನೂ ಓದಿ: ಲೆನೋವೋ ಕಂಪನಿಯ ಮೊದಲ ಸ್ಮಾರ್ಟ್​​ಫೋನ್​ ಬಿಡುಗಡೆ! ಫೀಚರ್ಸ್​ ಹೇಗಿದೆ ಗೊತ್ತಾ?


    ಈ ಬಗ್ಗೆ ಜಿಯೋ ಅಧ್ಯಕ್ಷರ ಮಾತು


    ಜಿಯೋ ಅಧ್ಯಕ್ಷ ಸುನಿಲ್ ದತ್ ಮಾತನಾಡಿ, 'ಭಾರತದಲ್ಲಿ ಟ್ರೂ 5ಜಿಯನ್ನು ಮೊಬೈಲ್​ ಸಾಧನಗಳಲ್ಲಿ ಇನ್ನಷ್ಟು ಬಲಪಡಿಸಲು ಮೊಟೊರೊಲಾ ಜೊತೆ ಪಾಲುದಾರಿಕೆ ಮಾಡಲು ನಾವು ಸಂತೋಷಪಡುತ್ತೇವೆ. 5ಜಿ ಸ್ಮಾರ್ಟ್‌ಫೋನ್‌ನ ನೆಟ್​​ವರ್ಕ್​ ಹೇಗಿದೆ ಎಂಬುದನ್ನು ತಿಳಿಬೇಕಾದರೆ ಅದು ಜಿಯೋದಂಥ ಟ್ರೂ 5ಜಿ ನೆಟ್‌ವರ್ಕ್‌ನಿಂದ ಮಾತ್ರ ತಿಳಿಯಲು ಸಾಧ್ಯ. ಅದಕ್ಕಾಗಿ ಜಿಯೋವನ್ನು ಸ್ವತಂತ್ರ 5ಜಿ ನೆಟ್‌ವರ್ಕ್‌ನಂತೆ ರೂಪಿಸಲಾಗಿದೆ.


    ಜಿಯೋ ಟೆಲಿಕಾಂ


    ಇದು ಬಹಳ ವೇಗದ ನೆಟ್‌ವರ್ಕ್ ಆಗಿದೆ. ಮೊಟೊರೋಲಾ ಸುಧಾರಿತ 5ಜಿ ವೈಶಿಷ್ಟ್ಯಗಳಾದ ಕ್ಯಾರಿಯರ್ ಒಟ್ಟುಗೂಡಿಸುವಿಕೆ, 4x4 MIMO ಮತ್ತು ಭಾರತದಲ್ಲಿನ ಹೆಚ್ಚಿನ 5ಜಿ ಬ್ಯಾಂಡ್‌ಗಳಿಗೆ ಬೆಂಬಲದೊಂದಿಗೆ ಬರುತ್ತದೆ. ಜಿಯೋ ಟ್ರೂ 5ಜಿ ನೆಟ್‌ವರ್ಕ್ ಜತೆಗೆ ಈ ವೈಶಿಷ್ಟ್ಯಗಳು ಭಾರತದಲ್ಲಿ 5ಜಿ ನೆಟ್​​ವರ್ಕ್​ ಸೇವೆಯ ಜೊತೆ ಅನಾವರಣಗೊಳಿಸುತ್ತದೆ' ಎಂದಿದ್ದಾರೆ.


    ಯಾವುದೇ ಪ್ರದೇಶದಲ್ಲೂ 5ಜಿ ಸಪೋರ್ಟ್


    ಕೆಲವೊಮ್ಮೆ ನೆಟ್​​ವರ್ಕ್​ ಸಮಸ್ಯೆಗಳು ಮತ್ತು ಕಾಲ್​ ಕಟ್​ ಆಗುವುದು ಈ ಸಂದರ್ಭಗಳಲ್ಲಿ ಈ ಟ್ರೂ 5ಜಿ ಸೇವೆ ಸ್ಮಾರ್ಟ್​​ಫೋನ್​ಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನೆಟ್​​ವರ್ಕ್​ ಸೌಲಭ್ಯವನ್ನು ನೀಡುತ್ತದೆ. ಒಂದು ವೇಳೆ ನೀವು ಕಡಿಮೆ ನೆಟ್‌ವರ್ಕ್ ಪ್ರದೇಶಗಳಲ್ಲಿ ಇದ್ದರೆ, 5ಜಿ ಟವರ್‌ನಿಂದ ದೂರವಿದ್ದರೂ, ಅಥವಾ ಸುರಂಗಮಾರ್ಗದಲ್ಲೇ ಇದ್ದರೂ ಅದ್ಭುತ ವೇಗದಲ್ಲಿ 5ಜಿ ನೆಟ್​​ವರ್ಕ್​ ಅನ್ನು ಅನುಭವಿಸಬಹುದು. ಎಲ್ಲಾ ಮೊಟೊರೊಲಾ 5ಜಿ ಸ್ಮಾರ್ಟ್‌ಫೋನ್‌ಗಳು ಭದ್ರತಾ ಪರೀಕ್ಷೆಗೆ ಒಳಪಟ್ಟಿವೆ ಮತ್ತು ಥಿಂಕ್‌ಶೀಲ್ಡ್‌ನಿಂದ ರಕ್ಷಿಸಲ್ಪಟ್ಟಿವೆ. ಸಾಧನದಲ್ಲಿ ಯಾವಾಗಲೂ ಸುರಕ್ಷಿತ ಅನುಭವವನ್ನು ಹೊಂದಿದ್ದೀರಿ ಎಂದು ಖಚಿತಪಡಿಸುತ್ತದೆ.


    ಯಾವೆಲ್ಲಾ ಸ್ಮಾರ್ಟ್​​ಫೋನ್​ಗಳಲ್ಲಿ 5ಜಿ ಲಭ್ಯ?


    ಮೊಟೊರೊಲಾ 5ಜಿ ಸಾಧನಗಳ ಸಂಪೂರ್ಣ ಪಟ್ಟಿಯನ್ನು ರಿಲಯನ್ಸ್‌ ಜಿಯೋ ಸಕ್ರಿಯಗೊಳಿಸಿದ ಟ್ರೂ 5ಜಿ (SA) ಇರುವ ಫೋನ್‌ಗಳ ವಿವರ ಇಲ್ಲಿವೆ:


    ಮೊಟೊರೊಲಾ ಎಡ್ಜ್ 30 ಅಲ್ಟ್ರಾ, ಮೊಟೊರೊಲಾ ಎಡ್ಜ್ 30 ಫ್ಯೂಷನ್, ಮೊಟೊ ಜಿ62 5ಜಿ, ಮೊಟೊರೊಲಾ ಎಡ್ಜ್ 30, ಮೊಟೊ ಜಿ82 5ಜಿ, ಮೊಟೊರೊಲಾ ಎಡ್ಜ್‌ 30ಪ್ರೋ, ಮೊಟೊ ಜಿ71 5ಜಿ, ಮೊಟೊ ಜಿ51 5ಜಿ, ಮೊಟೊರೊಲಾ ಎಡ್ಜ್20, ಮೊಟೊರೊಲಾ ಎಡ್ಜ್ 20 ಫ್ಯೂಷನ್.

    Published by:Prajwal B
    First published: