ಮೋಟೊ ಒನ್​ ಪವರ್​ ಚಿತ್ರಗಳು ಲೀಕ್​, ಇಲ್ಲಿದೆ ಹೊಸ ಮೊಬೈಲ್​ ಮಾಹಿತಿ


Updated:June 23, 2018, 12:41 PM IST
ಮೋಟೊ ಒನ್​ ಪವರ್​ ಚಿತ್ರಗಳು ಲೀಕ್​, ಇಲ್ಲಿದೆ ಹೊಸ ಮೊಬೈಲ್​ ಮಾಹಿತಿ

Updated: June 23, 2018, 12:41 PM IST
ನ್ಯೂಯಾರ್ಕ್​: ಲೆನೊವೊ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಮೋಟೊ ಬಜೆಟ್​ ಮೊಬೈಲ್​ಗಳ ನಿರ್ಮಾಣ ಮಾಡುವಲ್ಲಿ ಬ್ಯುಸಿಯಾಗಿದ್ದು, Z3 Play ಬಳಿಕ ಇದೀಗ ನಾಟ್ಚ್​ ಡಿಸ್​ಪ್ಲೇ ಹೊಂದಿರುವ ಮೊಬೈಲ್​ನ್ನು ಬಿಡುಗಡೆ ಮಾಡುವ ಕುರಿತು ಚಿಂತನೆ ನಡೆಸಿದೆ.

ಆ್ಯಂಡ್ರಾಯ್ಡ್​ ಒನ್​ Moto X4 ಬಳಿಕ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿರುವ ಮೋಟೊ ಸಂಸ್ಥೆ One Power ಮೊಬೈಲ್​ನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ. ಟೆಕ್​ಇನ್ಫೋಬಿಟ್ಟ್ ಡಾಟ್​ ಕಾಂ ಪ್ರಕಾರ ನಾಟ್ಚ್​ ಡಿಸ್​ಪ್ಲೇಯೊಂದಿಗೆ ಒನ್​ ಪವರ್​ ಮೊಬೈಲ್​ನ್ನು ಬಿಡುಗಡೆ ಮಾಡಲು ಸಂಸ್ಥೆ ತೀರ್ಮಾನಿಸಿದ್ದು, ಈಗಾಗಲೇ ಅಂತರ್ಜಾಲದಲ್ಲಿ ಇದರ ಚಿತ್ರಗಳು ವೈರಲ್​ ಆಗಿದೆ.ಲೀಕ್​ ಆಗಿರುವ ಮಾಹಿತಿಗಳ ಪ್ರಕಾರ ಮೋಟೊ ಸಂಸ್ಥೆಯ ಲೋಗೊದೊಂದಿಗೆ ಫಿಂಗರ್​ ಸ್ಕ್ಯಾನಿಂಗ್​ ಆಯ್ಕೆಯನ್ನು ಈ ಮೊಬೈಲ್​ನಲ್ಲಿ ನೀಡಿದೆ. ಇದರೊಂದಿಗೆ 6.2-inch Full HD+ ನಾಟ್ಚ್​ ಡಿಸ್​ಪ್ಲೇಯನ್ನು ನೀಡಿದ್ದು 2280x1080 ಪಿಕ್ಸೆಲ್​ ರೆಸಲ್ಯೂಷನ್​ ಹೊಂದಿದೆ.

ಒನ್​ ಪವರ್​ ಮೊಬೈಲ್​ಗೆ ಸ್ನಾಪ್​ಡ್ರಾಗನ್​ 636 SoC ಪ್ರೊಸೆಸರ್​ ಅಳವಡಿಸಲಾಗಿದ್ದು, 4GB RAM ನೊಂದಿಗೆ 64GB ಆಂತರಿಕ ಮೆಮೊರಿ ವ್ಯವಸ್ಥೆ ನೀಡಲಾಗಿದೆ. ಉಳಿದಂತೆ ಹಿಂಬದಿ 12 ಮೆಗಾಪಿಕ್ಸೆಲ್​ ಹಾಗೂ 5 ಮೆಗಾಪಿಕ್ಸೆಲ್​ ಸೆಕೆಂಡರಿ ಸೆನ್ಸಾರ್​ ಕ್ಯಾಮೆರಾ ಹೊಂದಿದ್ದು, ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್​ f/2.2 ಅಪಾರ್ಚರ್​ ವ್ಯವಸ್ಥೆಯಿರುವ ಕ್ಯಾಮೆರಾ ಅಳವಡಿಸಲಾಗಿದೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ