HOME » NEWS » Tech » MOTO G9 LAUNCHING IN INDIA ON AUGUST 24 MOTOROLA ACCIDENTALLY REVEALS HG

Moto G9: ನಾಳೆ ಭಾರತೀಯ ಮಾರುಕಟ್ಟೆಗೆ ಮೊಟೊ G9 ಸ್ಮಾರ್ಟ್​ಫೋನ್​; ಫ್ಲಿಪ್​​​ಕಾರ್ಟ್​ನಲ್ಲಿ ಬಿಡುಗಡೆ

Moto G9: ಅಗಸ್ಟ್​​ 24 ರಂದು ನೂತನ ಸ್ಮಾರ್ಟ್​ಫೋನ್​ ಭಾರತೀಯ ಮಾರುಕಟ್ಟೆಗೆ ಕಾಲಿರಿಸುತ್ತಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​​ಕಾರ್ಟ್​ನಲ್ಲಿ ಮೊಟೊ ಜಿ9  ಬಿಡುಗಡೆಯಾಗುತ್ತಿದೆ.

news18-kannada
Updated:August 23, 2020, 2:01 PM IST
Moto G9: ನಾಳೆ ಭಾರತೀಯ ಮಾರುಕಟ್ಟೆಗೆ ಮೊಟೊ G9 ಸ್ಮಾರ್ಟ್​ಫೋನ್​; ಫ್ಲಿಪ್​​​ಕಾರ್ಟ್​ನಲ್ಲಿ ಬಿಡುಗಡೆ
Moto G9
  • Share this:
ಮೊಟೊರೊಲಾ ಕಂಪೆನಿ ಸಿದ್ಧಪಡಿಸಿದ ನೂತನ ಸ್ಮಾರ್ಟ್​ಫೋನ್​ ಮೊಟೊ ಜಿ9 ನಾಳೆ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಸದ್ಯ ಲೆನೊವೊ ಕಂಪೆನಿಯ ಭಾಗವಾಗಿರುವ ಮೊಟೊರೊಲಾ ಹಲವಾರು ಸ್ಮಾರ್ಟ್​ಫೋನ್​ಗಳನ್ನ ಉತ್ಪಾದಿಸುತ್ತಾ, ಪರಿಚಯಿಸುತ್ತಾ ಬಂದಿದೆ. ಇದೀಗ ಜಿ9 ಸ್ಮಾರ್ಟ್​ಫೋನ್​ ಅನ್ನು ಉತ್ಪಾದಿಸಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.

ಹಾಗಾಗಿ ಅಗಸ್ಟ್​​ 24 ರಂದು ನೂತನ ಸ್ಮಾರ್ಟ್​ಫೋನ್​ ಭಾರತೀಯ ಮಾರುಕಟ್ಟೆಗೆ ಕಾಲಿರಿಸುತ್ತಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​​ಕಾರ್ಟ್​ನಲ್ಲಿ ಮೊಟೊ ಜಿ9 ಬಿಡುಗಡೆಯಾಗುತ್ತಿದೆ.

ನೂತನ ಮೊಟೊ ಜಿ9 ಸ್ಮಾರ್ಟ್​ಫೋನ್​ ಯಾವೆಲ್ಲಾ ಫೀಚರ್​ ಹೊಂದಿದೆ ಎಂಬುದು ಇನ್ನು ಬಹಿರಂಗಗೊಂಡಿಲ್ಲ. ಮಾಹಿತಿ ಮೇರೆಗೆ ಫಿಂಗರ್​​ ಫ್ರಿಂಟ್​​ ಸೆನ್ಸಾರ್​​, ಮ್ಯಾಸಿವ್​ ಕ್ಯಾಮೆರಾ, ಯುಎಸ್​ಬಿ-ಸಿ ಪೋರ್ಟ್​​​, ಗೂಗಲ್​ ಅಸಿಸ್ಟೆಂಟ್​​ ಬಟನ್​ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಕ್ವಾಲ್​ಕ್ಯಾಂ ಸ್ನಾಪ್​ಡ್ರಾಗನ್​​​ ಪ್ರೊಸೆಸರ್​ನಲ್ಲಿ ಈ ಸ್ಮಾರ್ಟ್​ಫೋನ್​ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗುತ್ತಿದೆ. ಜೊತೆಗೆ ಧೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಕ್ಯಾಮೆರಾ ಕೂಡ ಹೊಸ ವಿಶೇಷತೆಯನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ.

ಮೊಟೊರೊಲಾ ನಾಳೆ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್​ಫೋನ್​  ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಠಿಯಾಗಿದ್ದವು. ಮೊಟೊರೊಲಾ ಮೊಟೊ ಜಿ9 ಸೀರಿಸ್​ ಅನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗಿತ್ತು. ಮತ್ತೊಂದೆಡೆ ಜಿ9 ಪ್ಲಸ್​​​ ಸ್ಮಾರ್ಟ್​ಫೋನ್​ ಅನ್ನು ಬಿಡುಗಡೆ ಮಾಡುತ್ತಿದೆ ಎನ್ನಲಾಗಿತ್ತು. ಆದರೀಗ ಕೊನೆಗೂ ಮೊಟೊ ಜಿ9 ಸ್ಮಾರ್ಟ್​ಫೋನ್​ ಅನ್ನು ಪರಿಚಯಿಸುದಾಗಿ ತಿಳಿದು ಬಂದಿದೆ. ನೂತನ ಸ್ಮಾರ್ಟ್​ಫೋನ್​ ಹೇಗಿರಲಿದೆ? ಅದರ ವಿಶೇಷತೆಗಳೆನು ಎಂಬುದು ಬಿಡುಗಡೆಗೊಂಡ ನಂತರವಷ್ಟೆ ತಿಳಿದುಬರಲಿದೆ.
Published by: Harshith AS
First published: August 23, 2020, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories