HOME » NEWS » Tech » MOTO G8 POWER LITE WILL RELEASE IN INDIA ON 21ST MAY IN FLIPKART HG

Moto G8 Power Lite: ಮೇ 21ರಂದು ಬಿಡುಗಡೆಯಾಗುತ್ತಿದೆ ತ್ರಿವಳಿ ಕ್ಯಾಮೆರಾವಿರುವ ಮೊಟೊ G8 ಪವರ್​ ಲೈಟ್​ ಸ್ಮಾರ್ಟ್​ಫೋನ್​​!

Moto G8 Power Lite: ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಮೊಟೊ G8 ಪವರ್​ ಲೈಟಿನ ಟೀಸರ್​ ಜೊತೆಗೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಸದ್ಯದಲ್ಲೇ ನೂತನ ಸ್ಮಾರ್ಟ್​ಫೋನ್​ ಗ್ರಾಹಕರ ಕೈ ಸೇರಲಿದೆ.

news18-kannada
Updated:May 18, 2020, 7:30 PM IST
Moto G8 Power Lite: ಮೇ 21ರಂದು ಬಿಡುಗಡೆಯಾಗುತ್ತಿದೆ ತ್ರಿವಳಿ ಕ್ಯಾಮೆರಾವಿರುವ ಮೊಟೊ G8 ಪವರ್​ ಲೈಟ್​ ಸ್ಮಾರ್ಟ್​ಫೋನ್​​!
ಮೊಟೊ G8 ಪವರ್​ ಲೈಟ್
  • Share this:
ಲಾಕ್​ಡೌನ್ ಅವಧಿಯಲ್ಲಿ ಹಾನರ್​, ಪೋಕೊ, ನೋಕಿಯಾ, ವಿವೋ ಸಂಸ್ಥೆಗಳು ಉತ್ಪಾದಿಸಿದ್ದ ನೂತನ ಸ್ಮಾರ್ಟ್​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.​ ಇದೀಗ ಮೊಟೊರೊಲಾ ಕಂಪೆನಿ ಕೂಡ ಮೊಟೊ G8 ಪವರ್​ ಲೈಟ್​ ಹೆಸರಿನ ಸ್ಮಾರ್ಟ್​ಫೋನ್​​ ಅನ್ನು ಉತ್ಪಾದಿಸಿದ್ದು ಮೇ 21ರಂದು ಬಿಡುಗಡೆ ಮಾಡುತ್ತಿದೆ. ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಮೊಟೊ G8 ಪವರ್​ ಲೈಟಿನ ಟೀಸರ್​ ಜೊತೆಗೆ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಸದ್ಯದಲ್ಲೇ ನೂತನ ಸ್ಮಾರ್ಟ್​ಫೋನ್​ ಗ್ರಾಹಕರ ಕೈ ಸೇರಲಿದೆ.

ವಿಶೇಷತೆ:

ಬಿಡುಗಡೆಗೆ ಸಿದ್ಧವಾದ ಮೊಟೊ G8 ಪವರ್​ ಲೈಟ್ ಸ್ಮಾರ್ಟ್​ಫೋನ್​​​ 6.5 ಇಂಚಿನ ಹೆಚ್​​ಡಿ+ ಐಪಿಎಸ್​​​ ಎಲ್​ಸಿಡಿ ಡಿಸ್​ಪ್ಲೇ ಜೊತೆಗೆ ವಾಟರ್​​ ಡ್ರಾಪ್​​​ ಸೈಲ್​​ನಾಟ್ಚ್​​​​ ಹೊಂದಿದೆ. ಈ ಫೋನ್​​ ಮೀಡಿಯಾಟೆಕ್​​ ಹೆಲಿಯೋ ಪಿ35 ಎಸ್​ಒಸಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಆ್ಯಂಡ್ರಾಯ್ಡ್​ ಪೈ ಬೆಂಬಲವನ್ನು ಪಡೆದಿದೆ.

ಇನ್ನು ಸ್ಮಾರ್ಟ್​ಫೋನ್​ನಲ್ಲಿ 4G RAM​ ನೀಡಲಾಗಿದ್ದು, 64GB ಸ್ಟೊರೇಜ್​ ನೀಡಿದೆ. ಬಳಕೆದಾರರು  256GB ತನಕ ಸ್ಟೊರೇಜ್​ ಆಯ್ಕೆಯನ್ನು ವೃದ್ಧಿಸಬಹುದಾಗಿದೆ.

ಕ್ಯಾಮೆರಾ:

ಮೊಟೊ G8 ಪವರ್​ ಲೈಟ್ ಸ್ಮಾರ್ಟ್​ಫೋನ್​ ತ್ರಿವಳಿ ಕ್ಯಾಮೆರಾವನ್ನು ಹೊಂದಿದೆ. 16 ಮೆಗಾಫಿಕ್ಸೆಲ್​​​​ ಮೈನ್​ ಶೂಟರ್​ ಕ್ಯಾಮೆರಾ, 2 ಮೆಗಾಫಿಕ್ಸೆಲ್​ ಸೆನ್ಸಾರ್​​ ಜೊತೆಗೆ 2.4 ಮ್ಯಾಕ್ರೋ ಲೆನ್ಸ್​​, 2 ಮೆಗಾಫಿಕ್ಸೆಲ್​ ಡೆಪ್ತ್​​ ಸೆನ್ಸಾರ್​​ ನೀಡಲಾಗಿದೆ. ಸೆಲ್ಫಿಗಾಗಿ 8 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

ನೂತನ ಸ್ಮಾರ್ಟ್​ಫೋನಿನಲ್ಲಿ 5000mAh​​​ ಬ್ಯಾಟರಿಯನ್ನು ನೀಡಲಾಗಿದೆ.  4G ಲೈಟ್​​, ಬ್ಲೂಟೂತ್​​ v4.2, ವೈ-ಫೈ, ಜಿಪಿಎಸ್​, ಮೈಕ್ರೊ ಯುಎಸ್​ಬಿ, 3.2mm​ ಜಾಕ್​​ ಜೊತೆಗೆ ಫಿಂಗರ್​ ಪ್ರಿಂಟ್​ ಸೆನ್ಸಾರ್​​​​​ ಫೀಚರ್​ ನೀಡಲಾಗಿದೆ.ಬೆಲೆ:

ಮೊಟೊ G8 ಪವರ್​ ಲೈಟ್ ಸ್ಮಾರ್ಟ್​ಫೋನ್​ ಬೆಲೆ ಬಗ್ಗೆ ಮಾಹಿತಿ ಇನ್ನು ಹೊರಬಿದ್ದಿಲ್ಲ. ಅಂದಾಜಿನ ಮೇರೆಗೆ ಭಾರತದಲ್ಲಿ ಈ ಸ್ಮಾರ್ಟ್​ಫೋನ್​​ 13,900 ರೂಪಾಯಿ ಇರಲಿದೆ.

Gautam Gambhir: ಗೌತಮ್ ಗಂಭೀರ್ ಪ್ರಕಾರ ಐಪಿಎಲ್​ನಲ್ಲಿ ಬಲಿಷ್ಠ ತಂಡ ಯಾವುದು ಗೊತ್ತಾ?

ಅಪರೂಪದ ಕಾಯಿಲೆ ಬಗ್ಗೆ ಹೇಳಿಕೊಂಡ ನಟಿ ಸುಶ್ಮಿತಾ ಸೇನ್​!
First published: May 18, 2020, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories