HOME » NEWS » Tech » MOTO G60 MOTO G40 FUSION WITH TRIPLE REAR CAMERAS 6000MAH BATTERY LAUNCHED IN INDIA HG

ತ್ರಿವಳಿ ಕ್ಯಾಮೆರಾ, 6 ಸಾವಿರ mAh ಬ್ಯಾಟರಿ; ಬಜೆಟ್ ಬೆಲೆಯ ಮೊಟೊ G60, G40 ಫ್ಯೂಶನ್ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ

ಗ್ರಾಹಕರಿಗಾಗಿ ಈ ನೂತನ ಸ್ಮಾರ್ಟ್​ಫೋನ್​ಗಳು ಫ್ಲಿಪ್​ಕಾಟ್​ನಲ್ಲಿ ಖರೀದಿಗೆ ಸಿಗಲಿದೆ. ಅದರ ಜೊತೆಗೆ ಐಸಿಐಸಿಐ ಬ್ಯಾಕ್​ ಕಾರ್ಡ್​ ಬಳಕೆದಾರರು ಅಡಿಷನಲ್​ ಬೆನಿಫಿಟ್ ಪಡೆಯಬಹುದಾಗಿದೆ.

news18-kannada
Updated:April 20, 2021, 5:59 PM IST
ತ್ರಿವಳಿ ಕ್ಯಾಮೆರಾ, 6 ಸಾವಿರ mAh ಬ್ಯಾಟರಿ; ಬಜೆಟ್ ಬೆಲೆಯ ಮೊಟೊ G60, G40 ಫ್ಯೂಶನ್ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ
Moto G40 Fusion
  • Share this:
ಮೊಟೊರೊಲಾ ಬಜೆಟ್​ ಬೆಲೆಯ ಮೊಟೊ ಜಿ60 ಮತ್ತು ಮೊಟೊ ಜಿ40 ಫ್ಯೂಶನ್​ ಹೆಸಿರಿನ ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಿದೆ. ನೂತನ ಸ್ಮಾರ್ಟ್​ಫೋನ್​ಗಳು ಕ್ವಾಲ್​ಕ್ಯಾಮ್​ ಸ್ನಾಪ್​ಡ್ರಾಗನ್​ 732ಜಿ ಪ್ರೊಸೆಸರ್​ ಹೊಂದಿದ್ದು, ತ್ರಿವಳಿ ಕ್ಯಾಮೆರಾವನ್ನು ಅಳವಡಿಸಿಕೊಂಡಿದೆ. ಗ್ರಾಹಕರಿಗಾಗಿ ಈ ನೂತನ ಸ್ಮಾರ್ಟ್​ಫೋನ್​ಗಳು ಫ್ಲಿಪ್​ಕಾಟ್​ನಲ್ಲಿ ಖರೀದಿಗೆ ಸಿಗಲಿದೆ. ಅದರ ಜೊತೆಗೆ ಐಸಿಐಸಿಐ ಬ್ಯಾಕ್​ ಕಾರ್ಡ್​ ಬಳಕೆದಾರರು ಅಡಿಷನಲ್​ ಬೆನಿಫಿಟ್ ಪಡೆಯಬಹುದಾಗಿದೆ.

ಮೊಟೊರೊಲಾ ಮೊಟೊ ಜಿ60 ಸ್ಮಾರ್ಟ್​ಫೋನ್​:

ಮೊಟೊ ಜಿ60 ಸ್ಪೋರ್ಟ್ಸ್​ 6.8 ಇಂಚಿನ ಫುಲ್​ ಹೆಚ್​ಡಿ+ ಐಪಿಎಸ್​ ಡಿಸ್​ಪ್ಲೇ ಹೊಂದಿದ್ದು, 120Hz ರೆಫ್ರೆಶ್​ ರೇಟ್​ ಮತ್ತು ಹೆಚ್​ಡಿಆರ್​10 ಸಪೋರ್ಟ್​ ಹೊಂದಿದೆ.  ಪ್ಲಾಸ್ಟಿಕ್​ ಬಾಡಿ ಹೊಂದಿರುವ ಈ ಸ್ಮಾರ್ಟ್​ಫೋನ್​ 225 ಗ್ರಾಂ ತೂಕವನ್ನು ಹೊಂದಿದೆ. ಒಕ್ಟಾ ಕೋರ್​ ಕ್ವಾಲ್​ಕ್ಯಾಮ್ ಸ್ನಾಪ್​ಡ್ರಾಗನ್​​ ಪ್ರೊಸೆಸರ್​ 732G ಎಸ್​ಒಸಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರಿಗಾಗಿ 6GB RAM​ ಮತ್ತು 128GB ಸ್ಟೊರೇಜ್​ ಆಯ್ಕೆಯಲ್ಲಿ ಸಿಗಲಿದೆ, 1TB ತನಕ ಆಂತರಿಕ ಮೊಮೆರಿಯನ್ನ ಹೆಚ್ಚಿಸಿಕೊಳ್ಳಬಹುದಾಗಿದೆ. ಡುಯೆಲ್​ ಸಿಮ್​ ಸಪೋರ್ಟ್​ ಹೊಂದಿರುವ ಮೊಟೊ ಜಿ60 ಸ್ಮಾರ್ಟ್​ಫೋನ್​ ಆ್ಯಂಡ್ರಾಯ್ಡ್​ 11 ಬೆಂಬಲ ಪಡೆದಿದೆ.

ಇನ್ನು ಕ್ಯಾಮೆರಾ ವಿಚಾರಕ್ಕೆ ಬಂದರೆ ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್​ 108 ಮೆಗಾಫಿಕ್ಸೆಲ್​ ಕ್ಯಾಮೆರಾ, 8 ಮೆಗಾಫಿಕ್ಸೆಲ್​ ಅಲ್ಟ್ರಾ ವೈಯ್ಡ್​ ಆ್ಯಂಗಲ್ ಕ್ಯಾಮೆರಾ ಜೊತೆಗೆ 2 ಮೆಗಾಫಿಕ್ಸೆಲ್​ ಡೆಪ್ತ್​​​ ಸೆನ್ಸಾರ್​ ನೀಡಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಿದೆ. ಜೊತೆಗೆ ಎಲ್​ಇಡಿ ಫ್ಲಾಶ್​, ಅಲ್ಟ್ರಾ-ಹೆಚ್​ ವಿಡಿಯೋ ರೆಕಾರ್ಡಿಂಗ್​ ಫೀಚರ್​ ನೀಡಿದೆ.
ಅದರ ಜೊತೆಗೆ ಮೊಟೊ ಜಿ60ಯಲ್ಲಿ ಬ್ಲೂಟೂತ್​ 5.0, 3.5ಎಮ್​ಎಮ್​ ಆಡಿಯೋ ಜಾಕ್​, ವೈ-ಫೈ 802.11ಎಸಿ, ಎಣ್​ಎಫ್​ಸಿ, ರಿಯರ್​ ಫಿಂಗರ್​ ಪ್ರಿಂಟ್​ ಸೆನ್ಸಾರ್​ ನೀಡಲಾಗಿದೆ. ಧೀರ್ಘಕಾಲದ ಬಾಳಿಕೆಗಾಗಿ 6 ಸಾವಿರ ಎಮ್​ಎಹೆಚ್​​ ಬ್ಯಾಟರಿ ನೀಡಲಾಗಿದ್ದು, ಅದರ ಜೊತೆಗೆ ಟರ್ಬೊ ಪವರ್​ 20 ಫಾಸ್ಟ್​​ ಚಾಜಿಂಗ್​ ಸಪೋರ್ಟ್​ ಹೊಂದಿದೆ. ಮೊಟೊ ಜಿ60 ಸ್ಮಾರ್ಟ್​ಫೋನ್​ ಬೆಲೆ 17,999 ರೂ ಆಗಿದ್ದು, ಏಪ್ರಿಲ್​ 27ರ ಬಳಿಕ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ.

ಮೊಟೊರೊಲಾ ಮೊಟೊ ಜಿ40 ಫ್ಯೂಶನ್​:

ಮೊಟೊ ಜಿ40 ಫ್ಯೂಶನ್​ ಸ್ಮಾರ್ಟ್​ಫೋನ್​ 6.8 ಇಂಚಿನ ಫುಲ್​ ಹೆಚ್​ಡಿ+ ಡಿಸ್​ಪ್ಲೇ ಹೊಂದಿದೆ. ಗ್ರಾಹಕರಿಗಾಗಿ 6GB RAM +128GB ಸ್ಟೊರೇಜ್​​ ಆಯ್ಕೆಯಲ್ಲಿ ಸಿಗುತ್ತಿದೆ. ತ್ರಿವಳಿ ಕ್ಯಾಮೆರಾವನ್ನು ಹೊಂದಿರುವ ಈ ಸ್ಮಾರ್ಟ್​ಫೋನ್​ ಆಕರ್ಷಕ ಫೀಚರ್​ ಅಳವಡಿಸಿಕೊಂಡಿದೆ.

ಅಂದಹಾಗೆಯೇ 64 ಮೆಗಾಫಿಕ್ಸೆಲ್​, 8 ಮೆಗಾಫಿಕ್ಸೆಲ್​ ಅಲ್ಟ್ರಾ ವೈಡ್​ ಆ್ಯಂಗಲ್​ ಸೆನ್ಸಾರ್​, 2 ಮೆಗಾಫಿಕ್ಸೆಲ್​ ಸೆನ್ಸಾರ್​ ನೀಡಲಾಗಿದೆ. ಸೆಲ್ಫಿ ತೆಗೆಯಲು 16 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ.

ಇನ್ನು ಸ್ಮಾರ್ಟ್​ಫೋನಿನಲ್ಲಿ 5.0 ಬ್ಲೂಟೂತ್​, 3.5 ಎಮ್​ಎಮ್​ ಜಾಕ್​, ವೈ-ಫೈ, ದೀರ್ಘಕಾಲದ ಬಾಳಿಕೆಗಾಗಿ 6 ಸಾವಿರ ಎಮ್​ಎಹೆಚ್​ ಬ್ಯಾಟರಿ ನೀಡಲಾಗಿದೆ. ಅದರ ಜೊತೆಗೆ 20 ಫಾಸ್ಟ್​ ಚಾರ್ಜಿಮಜ್​ ಸಪೋರ್ಟ್​​ ಹೊಂದಿದೆ. ಗ್ರಾಹಕರಿಗಾಗಿ 4GB RAM​+64GB ಸ್ಟೊರೇಜ್​ ಆಯ್ಕೆಯ ಸ್ಮಾಟ್​ಫೋನ್​ 13,999 ರೂ.ಗೆ ಸಿಗಲಿದೆ. 6GB+128GB ಸ್ಟೊರೇಜ್​ ಆಯ್ಕೆಯ ಸ್ಮಾರ್ಟ್​ಫೋನ್​ 15,999 ರೂ.ಗೆ ಮಾರಾಟ ಮಾಡುತ್ತಿದೆ.
Published by: Harshith AS
First published: April 20, 2021, 5:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories