ಬಿಡುಗಡೆಗೂ ಮುನ್ನವೇ ಮೊಟೊ ಜಿ6 ಪ್ಲೇ ಚಿತ್ರ ಲೀಕ್​ !


Updated:April 13, 2018, 6:04 PM IST
ಬಿಡುಗಡೆಗೂ ಮುನ್ನವೇ ಮೊಟೊ ಜಿ6 ಪ್ಲೇ ಚಿತ್ರ ಲೀಕ್​ !

Updated: April 13, 2018, 6:04 PM IST
Image: SlashLeaks


ನ್ಯೂಸ್​ 18 ಕನ್ನಡ

ನವದೆಹಲಿ: ಲೆನೊವೋ ಒಡೆತನದ ಮೊಟೋ ಜಿ ಶ್ರೇಣಿಯ ಮೋಟೊ ಜಿ6 , ಮೋಟೊ ಜಿ6 ಪ್ಲಸ್​, ಮೋಟೊ ಜಿ6 ಪ್ಲೇ, ಮೊಬೈಲ್​ಗಳ ಮಾಹಿತಿಯು ಸೋರಿಕೆಯಾಗಿದ್ದು ಇದರೊಂದಿಗೆ ಜಿ6 ಪ್ಲೇಯ ಚಿತ್ರವೊಂದು ಕೂಡಾ ಆನ್​ಲೈನ್​ನಲ್ಲಿ ವೈರಲ್​ ಆಗಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ಮೋಟೋ ತನ್ನ ಜಿ6 ಸೀರಿಸ್​ನ್ನು ಇದೇ ತಿಂಗಳ 19ರಂದು ಮಾರುಕಟ್ಟೆಗೆ ತರಲು ಉದ್ಧೇಶಿಸಿತ್ತು, ಈಗಾಗಲೇ ಸೋರಿಕೆಯಾಗಿರುವ ಮೊಟೊ ಜಿ6 ಸರಣಿಯ ಮೊಟೊ ಜಿ6, ಮೊಟೊ ಜಿ6 ಪ್ಲೇ ಮತ್ತು ಮೊಟೊ ಜಿ6 ಪ್ಲಸ್ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಹೀಗಿದೆ.

ಕ್ವಾಲ್ಕಾಮ್​ ಸ್ನಾಪ್​ಡ್ರಾಗನ್​ 450 ಪ್ರೊಸೆಸರ್​ನೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಮುಂದಾಗಿರುವ ಮೊಟೊ ಜಿ6 ಸ್ಮಾರ್ಟ್‌ಫೋನ್ 5.7 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿರಲಿದೆ. 3 ಜಿಬಿ/ ಜಿಬಿ ರ‍್ಯಾಮ್ ಮತ್ತು 32 ಜಿಬಿ / 64 ಜಿಬಿ ಆಂತರಿಕ ಮೆಮೊರಿ ಶ್ರೇಣಿಯಲ್ಲಿ ಬರಲಿದ್ದು, 12 ಎಂಪಿ ಹಾಗೂ 5 ಎಂಪಿ ರಿಯರ್ ಡ್ಯುಯಲ್ ಕ್ಯಾಮೆರಾಗಳು 16 ಎಂಪಿ ಸೆಲ್ಫಿ ಕ್ಯಾಮೆರಾ ಹಾಗೂ 3,000 mAh ಬ್ಯಾಟರಿ ಫೀಚರ್ಸ್ ಈ ಫೋನಿನಲ್ಲಿರಲಿವೆ.

 

ಇನ್ನು ಮೊಟೊ ಜಿ6 ಪ್ಲಸ್​ 5.93 ಇಂಚ್​ನ ಪೂರ್ಣ ಡಿಸ್ಪ್ಲೇ ಹೊಂದಿದ್ದು, ಈ ಮೊಬೈಲ್​ 630 ಚಿಪ್ಸೆಟ್​ ಹೊಂದಿದೆ. 6 ಜಿಬಿ
Loading...

ರ‍್ಯಾಮ್​ನೊಂದಿದೆ 3,500 mAh ಬ್ಯಾಟರಿ ಫೀಚರ್ಸ್ ಈ ಫೋನಿನಲ್ಲಿರಲಿವೆ. ಇನ್ನು ಮೊಟೊ ಪ್ಲೇ ಕೂಡಾ ಬರಲು ಸಜ್ಜಾಗಿದ್ದು, 3,000 mAh ಬ್ಯಾಟರಿ ಫೀಚರ್ಸ್​ನೊಂದಿಗೆ, 5.7 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿರಲಿದೆ.

 

 

 
First published:April 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ