HOME » NEWS » Tech » MOTO G 5G LEAKED COULD BE THE COMPANYS FIRST 5G ENABLED AFFORDABLE SMARTPHONE HG

ಲೀಕ್​​ ಆಯ್ತು Moto G 5G ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?

Moto G 5G: ಮೊಟೊರೊಲಾ G ಸೀರೀಸ್​ ಸ್ಮಾರ್ಟ್​ಫೋನ್​​ ಅನ್ನು ಉತ್ಪಾದಿಸುತ್ತಿದೆ. ಈ ಸ್ಮಾರ್ಟ್​ಫೋನ್​ಗಳು 5G ನೆಟ್​ವರ್ಕ್​ನಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಆದರೀಗ ನೂತನ ಸ್ಮಾರ್ಟ್​ಫೋನ್ ಕೆಲವು ಮಾಹಿತಿಗಳು​ ಪ್ರತಿಕಾ ಪ್ರಕಟನೆಯ ವೇಳೆ ಸೋರಿಕೆಯಾಗಿದೆ.

news18-kannada
Updated:July 1, 2020, 3:27 PM IST
ಲೀಕ್​​ ಆಯ್ತು Moto G 5G ಸ್ಮಾರ್ಟ್​ಫೋನ್; ಹೇಗಿದೆ ಗೊತ್ತಾ?
Moto G 5G
  • Share this:
ಅನೇಕ  ಸ್ಮಾರ್ಟ್​ಫೋನ್​ ಕಂಪೆನಿಗಳು 5ಜಿ ಸ್ಮಾರ್ಟ್​ಫೋನ್​ಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿದೆ. ಮುಂದಿನ ದಿನದಲ್ಲಿ 5ಜಿ ನೆಟ್​​ವರ್ಕ್​ಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವಂತೆ ಹೊಸ ವಿನ್ಯಾಸದ, ವಿಶೇಷತೆಯುಳ್ಳ ಸ್ಮಾರ್ಟ್​ಫೋನ್​ಗಳನ್ನು ಸದ್ದಿಲ್ಲದೆ ಸಿದ್ಧಪಡಿಸುತ್ತಿವೆ. ಅದರಂತೆ ಮೊಟೊರೊಲಾ ಕಂಪೆನಿ ಕೂಡ 5G ಸ್ಮಾರ್ಟ್​ಫೋನ್​ ಉತ್ಪಾದಿಸುತ್ತಿದೆ. ಈವರೆಗೆ ನೂತನ ಸ್ಮಾರ್ಟ್​ಫೋನ್​ ಬಗ್ಗೆ ಮಾಹಿತಿಯನ್ನು ಹೊರಹಾಕದೆ ಸದ್ದಿಲ್ಲದೆ ಸ್ಮಾರ್ಟ್​ಫೋನ್​ ಅನ್ನು ಉತ್ಪಾದಿಸಿತ್ತು. ಆದರೀಗ ಮೊಟೊರೋಲಾ ಉತ್ಪಾದಿಸುತ್ತಿರುವ 5G ಸ್ಮಾರ್ಟ್​ಫೋನ್​ ಫೋಟೋ ಲೀಕ್​ ಆಗಿದೆ.

ಮೊಟೊರೊಲಾ G ಸೀರೀಸ್​ ಸ್ಮಾರ್ಟ್​ಫೋನ್​​ ಅನ್ನು ಉತ್ಪಾದಿಸುತ್ತಿದೆ. ಈ ಸ್ಮಾರ್ಟ್​ಫೋನ್​ಗಳು 5G ನೆಟ್​ವರ್ಕ್​ನಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಆದರೀಗ ನೂತನ ಸ್ಮಾರ್ಟ್​ಫೋನ್ ಕೆಲವು ಮಾಹಿತಿಗಳು​ ಓಜಿ ಲೀಕರ್​​ Evan Blass AKA @evleaks ಸೋರಿಕೆ ಮಾಡಿದೆ.

 

ಮೊಟೊ ಜಿ 5G ಸ್ಮಾರ್ಟ್​ಫೋನ್​​ ಸ್ಟೋರ್ಟ್ಸ್​​​​​ ಕ್ವಾಡ್​​ ಕ್ಯಾಮೆರಾ ಸೆಟಪ್​​ ಹೊಂದಿದ್ದು, 48 ಮೆಗಾಫಿಕ್ಸೆಲ್​​ ಪ್ರೈಮರಿ ಸೆನ್ಸಾರ್​, ಜೊತೆಗೆ 2 ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಡುಯೆಲ್​ ಪಂಚ್​ ಹೋಲ್​​ ಸ್ಕ್ರೀನ್​ ಹೊಂದಿರುವ ಈ ಸ್ಮಾರ್ಟ್​ಫೋನ್​​ ಫಿಂಗರ್​ ಪ್ರಿಂಟ್​ ಸ್ಕ್ಯಾನರ್ ಕೂಡ ಇರಲಿದೆ. ಮತ್ತು ಆ್ಯಂಡ್ರಾಯ್ಡ್​​ 10 ಒಎಸ್​ ಬೆಂಬಲವನ್ನು ಪಡೆದಿದೆ ಎಂದು ಹೇಳಿದೆ.

ಇನ್ನು ನೂತನ ಸ್ಮಾರ್ಟ್​ಫೋನ್​​ ಕ್ವಾಲ್​ಕ್ಯಾಮ್​​ ಸ್ನಾಪ್​​ಡ್ರಾಗನ್​​ 765 ಪ್ರೊಸೆಸರ್​ನಲ್ಲಿ ಕಾರ್ಯ ನಿರ್ವಹಿಸಲಿದೆ.​​ ಜೊತೆಗೆ 4GB RAM 64GB ಸ್ಟೊರೇಜ್​​, 4,800mAh​ ಬ್ಯಾಟರಿ ಹೊಂದಿದೆ ಎಂದು ಮಾಹಿತಿ ಹಂಚಿಕೊಂಡಿದೆ.
First published: July 1, 2020, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories