Moto E7 Power: ಮೊಟೊರೊಲಾ ಪರಿಚಯಿಸುತ್ತಿದೆ ಬಜೆಟ್​ ಬೆಲೆಯ ಸ್ಮಾರ್ಟ್​ಫೋನ್​; ಫೆ. 19ರಂದು ಮಾರುಕಟ್ಟೆಗೆ

ಆ್ಯಂಡ್ರಾಯ್ಡ್​ 10ನಲ್ಲಿ ಕಾರ್ಯನಿರ್ವಹಿಸಲಿರುವ ಮೊಟೊ E7 ಪವರ್​ ಸ್ಮಾರ್ಟ್​ಫೋನ್ ಬಿಡುಗಡೆಗೊಂಡ ನಂತರ​ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ. ಗ್ರಾಹಕರಿಗಾಗಿ ನೀಲಿ, ಕೆಂಪು ಬಣ್ಣದಲ್ಲಿ ಪರಿಚಯಿಸಲಿದೆ.

Moto E7 Power

Moto E7 Power

 • Share this:
  ಮೊಟೊರೊಲಾ ಕಂಪೆನಿ ಮೊಟೊ E7 ಪವರ್​ ಹೆಸರಿನ ಬಜೆಟ್​ ಬೆಲೆಯ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇದೇ ಫೆಬ್ರವರಿ 19ರಂದು 12 ಗಂಟೆಗೆ ಆನ್​ಲೈನ್​ ಇ-ಕಾಮರ್ಸ್​ ಮಳಿಗೆಯಾದ ಫ್ಲಿಪ್​ಕಾರ್ಟ್​ ಬಿಡುಗಡೆಗೊಳ್ಳಲಿದೆ.

  ಮೊಟೊ E7 ಪವರ್​ ಸ್ಮಾರ್ಟ್​ಫೋನ್​ 6.5 ಹೆಚ್​ಡಿ+ಎಲ್​ಸಿಡಿ ಡಿಸ್​ಪ್ಲೇ ಹೊಂದಿದ್ದು, 4ಜಿಬಿ ರ್ಯಾಮ್ ಮತ್ತು 64ಜಿಬಿ ಇಂಟರ್​ನಲ್​ ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸುತ್ತಿದೆ.

  ಅಂದಹಾಗೆಯೇ 13 ಮೆಗಾಫಿಕ್ಸೆಲ್​​ ಕ್ಯಾಮೆರಾ ಮತ್ತು ಎಲ್​ಇಡಿ ಫ್ಲಾಶ್​​ ನೀಡಲಾಗಿದೆ. ಅದರ ಜೊತೆಗೆ 2ಮೆಗಾಫಿಕ್ಸೆಲ್​​ ಸೆಕೆಂಡ್​​ ಸೆನ್ಸಾರ್​ ನೀಡಲಾಗಿದೆ. ಮುಂಭಾಗದಲ್ಲಿ 5 ಮೆಗಾಫಿಕ್ಸೆಲ್​ ಸೆನ್ಸಾರ್​ ನೀಡಲಾಗಿದೆ. ವಾಟರ್​​ಡ್ರಾಪ್​​ ಸೈಲ್​ನಲ್ಲಿ ಪರಿಚಯಿಸುತ್ತಿದೆ.

  ಆ್ಯಂಡ್ರಾಯ್ಡ್​ 10ನಲ್ಲಿ ಕಾರ್ಯನಿರ್ವಹಿಸಲಿರುವ ಮೊಟೊ E7 ಪವರ್​ ಸ್ಮಾರ್ಟ್​ಫೋನ್ ಬಿಡುಗಡೆಗೊಂಡ ನಂತರ​ ಫ್ಲಿಪ್​ಕಾರ್ಟ್​ನಲ್ಲಿ ಖರೀದಿಗೆ ಸಿಗಲಿದೆ. ಗ್ರಾಹಕರಿಗಾಗಿ ನೀಲಿ, ಕೆಂಪು ಬಣ್ಣದಲ್ಲಿ ಪರಿಚಯಿಸಲಿದೆ.

  ಮೊಟೊ E7 ಪವರ್​ ಸ್ಮಾರ್ಟ್​ಫೋನನ್ನು 5 ಸಾವಿರ ಎನ್​ಎಹೆಚ್​ ಬ್ಯಾಟರಿ ಸಾಮರ್ಥ್ಯದಲ್ಲಿ ಪರಿಚಯಿಸುತ್ತಿದೆ. 10 ಸಾವಿರ ಬೆಲೆಗೆ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.
  Published by:Harshith AS
  First published: