HOME » NEWS » Tech » MOTO E7 BUDGET SMARTPHONE 48 MEGAPIXEL REAR CAMERA 4MAH BATTERY HG

ಬಜೆಟ್​ ಬೆಲೆಯ E7 ಸ್ಮಾರ್ಟ್​ಫೋನ್​ ಪರಿಚಯಿಸಿದ ಮೊಟೊರೊಲಾ!; ಹೇಗಿದೆ?

Moto E7: ಕೆಲವು ತಿಂಗಳ ಹಿಂದೆ ಮೊಟೊರೊಲಾ E7 ಪ್ಲಸ್​ ಸ್ಮಾರ್ಟ್​ಫೋನನ್ನು ಪರಿಚಯಿಸಿತ್ತು. ಇದೀಗ ಬಜೆಟ್​ ಬೆಲೆಯ ಸ್ಮಾರ್ಟ್​ಫೋನನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ.

news18-kannada
Updated:December 11, 2020, 10:16 PM IST
ಬಜೆಟ್​ ಬೆಲೆಯ E7 ಸ್ಮಾರ್ಟ್​ಫೋನ್​ ಪರಿಚಯಿಸಿದ ಮೊಟೊರೊಲಾ!; ಹೇಗಿದೆ?
Moto E7
  • Share this:
ಮೊಟೊರೊಲಾ E7 ಹೆಸರಿನ ಸ್ಮಾರ್ಟ್​ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಸ್ಮಾಟ್​ಫೋನ್​ ಬಜೆಟ್​​​ ಬೆಲೆಯಲ್ಲಿ ಬಿಡುಗಡೆಯಾಗಿದ್ದು, 48 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಹಿಂಭಾಗದಲ್ಲಿ ಫಿಂಗರ್​ಪ್ರಿಂಟ್​​ ಸ್ಕ್ಯಾನರ್​​ ನೀಡಲಾಗಿದೆ.

ಕೆಲವು ತಿಂಗಳ ಹಿಂದೆ ಮೊಟೊರೊಲಾ E7 ಪ್ಲಸ್​ ಸ್ಮಾರ್ಟ್​ಫೋನನ್ನು ಪರಿಚಯಿಸಿತ್ತು. ಇದೀಗ ಬಜೆಟ್​ ಬೆಲೆಯ ಸ್ಮಾರ್ಟ್​ಫೋನನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿದೆ. ಮೊಟೊರೊಲಾ E7 ಸ್ಮಾರ್ಟ್​ಫೋನ್​ 6.5 ಇಂಚಿನ ಡಿಸ್​ಪ್ಲೇಯನ್ನು ಹೊಂದಿದ್ದು, ಒಕ್ಟಾಕೋರ್​​ ಮೀಡಿಯಾಟೆಕ್​ ಹೆಲಿಯೊ ಜಿ25 ಪ್ರೊಸೆಸರ್​​​ನಿಂದ ಕಾರ್ಯನಿರ್ವಹಿಸುತ್ತಿದೆ. ಆ್ಯಂಡ್ರಾಯ್ಡ್​ 10 ಬೆಂಬಲವನ್ನು ಪಡೆದಿದೆ.

ಇನ್ನು ಸ್ಮಾರ್ಟ್​ಫೋನ್ ಹಿಂಭಾಗದಲ್ಲಿ 48 ಮೆಗಾಫಿಕ್ಸೆಲ್​ ಕ್ಯಾಮೆರಾ ಜೊತೆಗೆ 2 ಮೆಗಾಫಿಕ್ಸೆಲ್​ ಕ್ಯಾಮೆರಾವನ್ನು ನೀಡಲಾಗಿದೆ. ಸೆಲ್ಪಿಗಾಗಿ 5 ಮೆಗಾಫಿಕ್ಸೆಲ್​ ಕ್ಯಾಮೆರಾ ಅಳವಡಿಸಲಾಗಿದೆ, ಗ್ರಾಹಕರಿಗಾಗಿ 2GB RAM ಮತ್ತು 32GB ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ.

4 ಸಾವಿರ mAh​ ಬ್ಯಾಟರಿಯನ್ನು ಅಳವಡಿಸಿಕೊಂಡಿರುವ ಈ ಸ್ಮಾರ್ಟ್​ಫೋನ್​ 10 ವ್ಯಾಟ್​ ಚಾರ್ಜಿಂಗ್​ ಹೊಂದಿದೆ. ಸದ್ಯ ಯುರೋಪ್​ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಸ್ಮಾರ್ಟ್​ಫೋನ್​ 10,500 ರೂ.ಗೆ ಮಾರಾಟ ಮಾಡುತ್ತಿದೆ. ಆದರೆ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಮತ್ತು ಅದರ ಬೆಲೆ ಎಷ್ಟಿರಲಿದೆ ಎಂಬ  ಬಗ್ಗೆ ಮಾಹಿತಿ ಇಲ್ಲ.
Published by: Harshith AS
First published: December 11, 2020, 10:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories