ಅತ್ಯಧಿಕ ಬ್ಯಾಟರಿ ಪ್ರಿಯರಿಗೆ ಇಲ್ಲಿದೆ ಮೊಟೊ ಮೊಬೈಲ್​

news18
Updated:July 11, 2018, 11:57 AM IST
ಅತ್ಯಧಿಕ ಬ್ಯಾಟರಿ ಪ್ರಿಯರಿಗೆ ಇಲ್ಲಿದೆ ಮೊಟೊ ಮೊಬೈಲ್​
news18
Updated: July 11, 2018, 11:57 AM IST
ನವದೆಹಲಿ: ಲೆನೊವೊ ಒಡೆತನದ ಮೊಟೊರೋಲ ತನ್ನ ನೂತನ ಎರಡು ಮೊಬೈಲ್​ ಫೋನ್​ಗಳನ್ನು ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಪರಿಚಯಿಸಿದೆ.

ಮೊಟೊ E5 ಮತ್ತು ಮೊಟೊ E5+ ಬಿಡುಗಡೆಯಾಗಿದ್ದು, ಈ ನೂತನ ಸ್ಮಾರ್ಟ್‌ಫೋನ್‌ಗಳ ಬೆಲೆ ಕ್ರಮವಾಗಿ 9,999ರೂ. ಹಾಗೂ 11,999ರೂ. ಹೊಂದಿದೆ.

ಹೆಚ್ಚುತ್ತಿರುವ ಬ್ಯಾಟರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದ ಮೊಟೊ, ಇ5 ಶ್ರೇಣಿಯ ಮೊಬೈಲ್​ಗಳಲ್ಲಿ ಅತ್ಯಧಿಕ ಮಟ್ಟದ ಬ್ಯಾಟರಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಇ5 ಪ್ಲಸ್​ನಲ್ಲಿ 5000 ಎಂಎಎಚ್‌ ಬ್ಯಾಟರಿ ನೀಡಲಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ ಸಾಮಾನ್ಯ ಬಳಕೆಯ ನಂತರವೂ ಒಂದೂವರೆ ದಿನ ಬ್ಯಾಟರಿ ಚಾರ್ಜ್ ಉಳಿಯುವುದಾಗಿ ಕಂಪನಿ ಪ್ರಕಟಿಸಿದೆ.

E5+ ವಿಶೇಷತೆಗಳು

6 ಇಂಚು ಹೆಚ್​ಡಿ ಪ್ಲಸ್​ ಮ್ಯಾಕ್ಸ್​ ವಿಶನ್​ ಡಿಸ್​ಪ್ಲೇ
ಸ್ನಾಪ್​ಡ್ರಾಗನ್​ 430 ಪ್ರೊಸೆಸರ್​
ಲೇಸರ್‌ ಆಟೊಫೋಕಸ್‌ 12ಎಂಪಿ ಕ್ಯಾಮೆರಾ
Loading...

ಸೆಲ್ಫಿ ಪ್ರಿಯರಿಗಾಗಿ 5 ಎಂಪಿ ವೈಡ್​ ಆ್ಯಂಗಲ್​ ಕ್ಯಾಮೆರಾ
5,000mAh ಬ್ಯಾಟರಿ
3GB RAM and 32GB ಆಂತರಿಕ ಮೆಮೊರಿ
ಬೆಲೆ : 11,999 ರೂ.

E5 ವಿಶೇಷತೆಗಳು
5.7 ಹೆಚ್​ಡಿ ಪ್ಲಸ್​ ಡಿಸ್​ಪ್ಲೇ,
ಸ್ನಾಪ್​ಡ್ರಾಗನ್​ 425 ಪ್ರೊಸೆಸರ್​
ಹಿಂಬದಿ 13 ಎಂಪಿ ಕ್ಯಾಮೆರಾ
ಸೆಲ್ಫಿ ಪ್ರಿಯರಿಗಾಗಿ 5 ಎಂಪಿ
4000 mAh ಬ್ಯಾಟರಿ
ಆ್ಯಂಡ್ರಾಯ್ಡ್‌ 8.0 ಒರಿಯೊ ಆಪರೇಟಿಂಗ್‌ ಸಿಸ್ಟಮ್‌
2GB RAM and 16GB ಆಂತರಿಕ ಮೆಮೊರಿ
ಬೆಲೆ: 9,999 ರೂ
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...